ಇಂದಬೆಟ್ಟು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ವಲಯದ ಗುರಿಪಳ್ಳದಲ್ಲಿ ಯಾಂತ್ರಿಕೃತ ಭತ್ತನಾಟಿಯನ್ನು ಪಕೀರರವರ ಗದ್ದೆಯಲ್ಲಿ ಮಾಡಿದ್ದು ಭತ್ತ ಕೃಷಿಕರು ಭಾಗವಹಿಸಿರುತ್ತಾರೆ.
ಈ ಸಂದರ್ಭ ಮಾತನಾಡಿದ ಪ್ರಗತಿಪರ ಕೃಷಿಕ ಸುಲೇಮಾನ್ ರವರು ಪ್ರಸ್ತುತ ದಿನಮಾನದಲ್ಲಿ ಗದ್ದೆಯ ಜಾಗದಲ್ಲಿ ಅಡಿಕೆ ಹಾಗೂ ರಬ್ಬರ್ ಕೃಷಿಯನ್ನು ರೈತರು ಮಾಡುತ್ತಿದ್ದು ಇದು ಆತಂಕದ ವಿಷಯವಾಗಿದೆ, ಒಬ್ಬ ರೈತ ಆ ಬೈಲಿನ ಒಂದು ಗದ್ದೆಯಲ್ಲಿ ಅಡಿಕೆ ಕೃಷಿಯನ್ನು ಮಾಡಿದಾಗ ಆ ಗದ್ದೆಯ ಮೇಲಿನ ಮತ್ತು ಕೆಳಗಿನ ಭಾಗಕ್ಕೆ ಟ್ರ್ಯಾಕ್ಟರ್ ಅಥವಾ ಇನ್ನಿತರ ಭತ್ತದ ಯಂತ್ರಗಳು ಹೋಗಲು ಸಾಧ್ಯವಿಲ್ಲದಿದ್ದಾಗ ಮತ್ತೊಬ್ಬ ರೈತ ಕೂಡ ಭತ್ತ ಕೃಷಿಯ ಬದಲಾಗಿ ವಾಣಿಜ್ಯ ಕೃಷಿಯನ್ನು ಮಾಡುತ್ತಿದ್ದು, ಈ ಸಂದರ್ಭ ಆ ಬೈಲಿನ ರೈತರು ಅವರವರ ಜಾಗಕ್ಕೆ ಪ್ರತ್ಯೇಕವಾದ ಬೇಲಿಯನ್ನು ಹಾಕಿ ಏಕಸಮಯದಲ್ಲಿ ಭತ್ತ ಕೃಷಿ ಆಗುತ್ತಿದ್ದ ಆ ಬೈಲಿನ ಎಲ್ಲ ಗದ್ದೆಗಳಲ್ಲಿಯೂ ಕೂಡ ಇಂದು ರೈತರು ವಾಣಿಜ್ಯ ಕೃಷಿಯನ್ನು ಮಾಡುತ್ತಿದ್ದು ಮುಂದಕ್ಕೆ ಇದು ಭತ್ತ ಕೃಷಿಯೇ ಕಣ್ಮರೆಯಾಗುವಂತಹ ದಿನ ಹತ್ತಿರದಲ್ಲಿದೆ ಎಂದು ಬೇಸರದ ನುಡಿಗೈದರು.
ಈ ಸಂದರ್ಭ ವಿಶೇಷವಾಗಿ ಯಂತ್ರಶ್ರೀ ಕಾರ್ಯಕ್ರಮವನ್ನು ಉಲ್ಲೇಖಿಸಿದ ಇವರು ಯೋಜನೆಯ ವತಿಯಿಂದ ಆ ಬೈಲಿನ ಎಲ್ಲ ರೈತರನ್ನು ಒಂದು ಕಡೆ ಸೇರಿಸಿ ಬೈಲುವಾರು ಅವರೊಂದಿಗೆ ಚರ್ಚೆಯನ್ನು ಮಾಡಿ ಒಂದೇ ಸಮಯದಲ್ಲಿ ಎಲ್ಲ ರೈತರು ಟ್ರಾಕ್ಟರ್ ಮೂಲಕವಾಗಿ ಉಳುಮೆ, ಯಂತ್ರದ ಮೂಲಕವಾಗಿ ಭತ್ತದ ನಾಟಿ ಒಂದೇ ಸಮಯದಲ್ಲಿ ಕಟಾವು ಮಾಡಿದಾಗ ರೈತರಲ್ಲಿಯೂ ಕೂಡ ಪರಸ್ಪರ ಸಂಘಟನೆ ಮಾಡಿ ಆ ಬೈಲಿನ ಪೂರ್ತಿ ಗದ್ದೆಯನ್ನು ಉಳಿಸಲು ಈ ಯೋಜನೆ ಸಹಕಾರಿಯಾಗಿದೆ ಎಂದರು.
ನಾಡಿನಲ್ಲಿ ಕಣ್ಮರೆಯಾಗುತ್ತಿರುವ ಭತ್ತ ಕೃಷಿಯನ್ನು ಉಳಿಸುವ ದೃಷ್ಟಿಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಡಾ. .ಡಿ ವೀರೇಂದ್ರ ಹೆಗ್ಗೆಡೆಯವರು ಹಾಕಿಕೊಂಡಿರುವ ಈ ಯೋಜನೆ ಇದು ಇಂದು ಭತ್ತ ಕೃಷಿಯನ್ನು ಉಳಿಸಲು ಸಹಕಾರಿಯಾಗಿದೆ ಎಂದರು.
ರೈತರಿಗೆ ಸಕಾಲದಲ್ಲಿ ತಾಂತ್ರಿಕ ಮಾಹಿತಿ ಸಕಾಲದಲ್ಲಿ ಯಂತ್ರಗಳನ್ನು ಯೋಜನೆಯ ಕೃಷಿಯಂತ್ರಧಾರೆಯ ಮೂಲಕವಾಗಿ ಒದಗಿಸಿಕೊಡುವ ಕಾರಣವಾಗಿ ಇಂದು ರೈತರಿಗೂ ಕೂಡ ಭತ್ತ ಕೃಷಿಯನ್ನು ಅನುಷ್ಠಾನಿಸಲು ಇದು ಹೊಸ ಸ್ಪೂರ್ತಿಯನ್ನು ನೀಡಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ರಾಮ್ ಕುಮಾರ್ ರವರು ಯಾಂತ್ರಿಕೃತ ಭತ್ತ ಬೇಸಾಯದ ಸಸಿಮಡಿ ತಯಾರಿ, ಯಂತ್ರ ನಾಟಿ, ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸುವ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು.
ಈ ಸಂದರ್ಭ ಗುರು ರಾಘವೇಂದ್ರ ಭಜನಾ ಮಂಡಳಿ ಗುರಿಪಳ್ಳದ ಮಾಜಿ ಅಧ್ಯಕ್ಷೆ ಶ್ರೀಮತಿ ಬೇಬಿ ಉಮೇಶ್, ಗುರಿಪಳ್ಳದ ಪ್ರಗತಿ ಬಂಧು ಒಕ್ಕೂಟದ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷೆ ಶ್ರೀಮತಿ ಅನಿತಾ,
ಪ್ರಗತಿಪರ ಕೃಷಿಕರಾದ ಪಕೀರ, ಬಾಲಕೃಷ್ಣ ಗೌಡ, ಶ್ರೀನಿವಾಸ ಗೌಡ, ಸೇವಾಪ್ರತಿನಿಧಿ ಶ್ರೀಮತಿ ಸುಮತಿ ಹಾಗೂ ಭತ್ತ ಕೃಷಿಕರು ಉಪಸ್ಥಿತರಿದ್ದರು.