ನಾರಾವಿ ಸಂತ ಅಂತೋನಿ ಪ.ಪೂ ಕಾಲೇಜಿನಲ್ಲಿ ಶಿಕ್ಷಕ – ರಕ್ಷಕರ ಸಭೆ

Suddi Udaya

ನಾರಾವಿ: ಸಂತ ಅಂತೋನಿ ಪದವಿ ಪೂರ್ವ ಕಾಲೇಜು ನಾರಾವಿ ಇಲ್ಲಿನ ಶಿಕ್ಷಕರ ರಕ್ಷಕರ ಸಭೆ ಕಾಲೇಜು ಸಭಾಂಗಣದಲ್ಲಿ ಜು.4 ರಂದು ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಲ್ವಿನ್ ಸೆರಾವೊ ಮಾತಾನಾಡಿ ಶಿಕ್ಷಕರಷ್ಟೇ ಜವಾಬ್ದಾರಿ ಪೋಷಕರ ಮೇಲೆಯೂ ಇದೆ ಶಿಕ್ಷಕ ಪೋಷಕರು ಸೇರಿದಾಗ ಮಾತ್ರ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕನ್ನಡ ಉಪನ್ಯಾಸಕ ದಿನೇಶ್ ಬಿ.ಕೆ ಬಳಂಜ “ನವ ಮಾಧ್ಯಮಗಳು ವಿದ್ಯಾರ್ಥಿಗಳನ್ನು ಜ್ಞಾನವಂತರನ್ನಾಗಿ ಮಾಡುವ ಬದಲು ವ್ಯಸನಿಗಳನ್ನಾಗಿ ಮಾಡುತ್ತಿವೆ. ಸಾಮಾನ್ಯ ಜ್ಞಾನದ ಅರಿವು ವಿದ್ಯಾರ್ಥಿಗಳಿಗೆ ಮಾಡುವಂತೆ ಮಾಡಬೇಕು. ಅವರಲ್ಲಿ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳಸಬೇಕು”.

ವೇದಿಕೆಯಲ್ಲಿ ಸಂತ ಅಂತೋನಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ರಿಚರ್ಡ್ ಮೋರಸ್, ಗಣಿತಶಾಸ್ತ್ರ ಉಪನ್ಯಾಸಕರಾದ ಸಂತೋಷ್ ಸಲ್ಡಾನ ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಅನಿತಾ ಡಿ’ಸೋಜ, ಉಪಸ್ಥಿತರಿದ್ದರು.

ರಿಚರ್ಡ ಮೋರಸ್ ಸ್ವಾಗತಿಸಿ, ಸಂತೋಷ್ ಸಲ್ಡಾನ ಧನ್ಯವಾದವಿತ್ತರು . ಜೀವಶಾಸ್ತ್ರ ಉಪನ್ಯಾಸಕಿ ಕು.ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳ ಎಲ್ಲಾ ಹೆತ್ತವರು ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Comment

error: Content is protected !!