38.6 C
ಪುತ್ತೂರು, ಬೆಳ್ತಂಗಡಿ
April 1, 2025
ಪ್ರಮುಖ ಸುದ್ದಿ

ಬಂಟ್ವಾಳ ತಾಲೂಕು ಹಾಗೂ ಬೆಳ್ತಂಗಡಿ ತಾಲೂಕಿನ ಗಡಿ ಪ್ರದೇಶವಾದ ಬೆಂಚಿನಡ್ಕ – ಕಾಜಲ ಪರಿಸರದ ದಯನೀಯ ಸ್ಥಿತಿ:ಎರಡೂವರೆ ಅಡಿ ಅಗಲದ ಕಿರು ಜಾಗದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ

ಬೆಳ್ತಂಗಡಿ: ಬಂಟ್ವಾಳ ತಾಲೂಕಿನ ನೈನಾಡು ಮತ್ತು ಬೆಳ್ತಂಗಡಿ ತಾಲೂಕಿನ ಕಾಜಲ ಪ್ರದೇಶ ಕ್ಕೆ ಸಂಪರ್ಕ ರಸ್ತೆ ಯ ಮಧ್ಯೆ ತೊರೆಯೊಂದು ಹರಿಯುತ್ತಿದ್ದು ಇದಕ್ಕೆ ಸೇತುವೆ ನಿರ್ಮಾಣ ಮಾಡಲು ಬಹಳಷ್ಟು ಕಾಲದಿಂದ ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಮಾಡಿರುವ ಎರಡೂವರೆ ಅಡಿ ಅಗಲದ ಕಿರು ಜಾಗದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಈ ಭಾಗದ ಜನರದ್ದು. ಪ್ರತಿ ನಿತ್ಯ ಸರ್ಕಾರಿ ಪ್ರೌಢಶಾಲೆ
ಕಿರಿಯ ಪ್ರಾಥಮಿಕ ಶಾಲೆಅಂಗನವಾಡಿ ಕೇಂದ್ರ ಗಳಿಗೆ ಮಕ್ಕಳು ,.ಹಾಲು ಉತ್ಪಾದಕ ರೈತರು ಇದೇ ದಾರಿಯಲ್ಲಿ ಡಿಪೋ ಗಳಿಗೆ .ಇದೇ ದಾರಿಯಾಗಿ ಬರಬೇಕು

ಶಾಲಾ ವಿದ್ಯಾರ್ಥಿಗಳು ಸೇರಿ ನೂರಾರು ಜನರು ಈ ಕಿರು ದಾರಿಯಲ್ಲೇ ಸಾಗಬೇಕಾಗಿದೆ. ಇದರ ಹೊರತಾಗಿ ಮಾರ್ಗ ವನ್ನು ಅವಲಂಬಿಸಿ ಬರಬೇಕಾದರೆ ಪುರಿಯ, ಪುಂಜಾಲಕಟ್ಟೆ, ಮೂರ್ಜೆ, ದಾರಿಯಾಗಿ ನೈನಾಡಿಗೆ ಸುಮಾರು 15 ಕೀ ಮೀ ಸುತ್ತಿ ಬರಬೇಕು. ಮಳೆಗಾಲದಲ್ಲಿ ತೊರೆ ತುಂಬಿ ಹರಿದಾಗ ಮಕ್ಕಳಾದಿಯಾಗಿ ಜನರೆಲ್ಲರೂ ನೀರು ಇಳಿಯುವ ತನಕ ಕಾದು ಕುಳಿತು ಕೊಳ್ಳಬೇಕಾದ ಪರಿಸ್ಥಿತಿ. ಏನಾದರೂ ಆಕಸ್ಮಿಕ, ಸಂಭವಿಸಿದರೆ ದೇವರೆ ಗತಿ. ಕಾಜಲ ದ ಅಸು ಪಾಸಿನ ಜನತೆಯ ಕೂಗು ಅರಣ್ಯ ರೋಧನ ವಾಗಿದೆ
ಇವತ್ತು ವಯೋ ವೃದ್ಧರೋರ್ವರು ಮರಣ ಹೊಂದಿದ್ದು, ಅವರ ಅಂತ್ಯಕ್ರಿಯೆ ನಡೆಸಲು ದೇಹವನ್ನು ಸರಿ ಸುಮಾರು ಒಂದು ಕಿಲೋಮೀಟರ್ ದೂರದ ತನಕ ಹೊತ್ತು ತಂದು ನಂತರ ಅಂಬ್ಯುಲೆನ್ಸ್ ಮುಖೇನ ಸ್ಮಶಾನ ಕ್ಕೆ ಸಾಗಿಸಲಾಯಿತು. ತುಂಬಿ ಹರಿಯುತ್ತಿರುವ ತೊರೆಯ ಮೇಲಿನ ಕಿಂಡಿ ಅಣೆಕಟ್ಟಿನ ಕಿರು ದಾರಿಯಲ್ಲಿ ಬಹಳ ಪ್ರಯಾಸಪಟ್ಟು ಮರಣವನ್ನು ಹೊತ್ತು ಕೊಂಡು ಬರಬೇಕಾದ ದೃಶ್ಯ ಮೂಲಭೂತ ಸೌಕರ್ಯಗಳ ಕುಂದುಕೊರತೆ ಗೆ ಜ್ವಲಂತ ಸಾಕ್ಷಿಯಾಗಿತ್ತು

Related posts

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಪಿಲಾತಬೆಟ್ಟು ಸಂತ ಜೋಸೆಫರ ಅ.ಹಿ.ಪ್ರಾ. ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಎ.22-ಮೇ.10: ಆದಿಗುರು ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿ ಕೇಂದ್ರದಲ್ಲಿ ಬೇಸಿಗೆ ಶಿಬಿರ

Suddi Udaya

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಮನವಿಗೆ ಕೆಎಸ್ ಆರ್ ಟಿ ಸಿ ಸ್ಪಂದನೆ: ಆ.25 ಧರ್ಮಸ್ಥಳದಿಂದ ನಾರಾವಿಗೆ ಸರ್ಕಾರಿ ಬಸ್ ಪ್ರಾರಂಭ

Suddi Udaya

ಪಕ್ಷೇತರ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಭಟ್ ನಾಮಪತ್ರ ಸಲ್ಲಿಕೆ

Suddi Udaya

ಮೂಡುಕೋಡಿ ಶೀನ ಪೂಜಾರಿ ಹೃದಯಾಘಾತದಿಂದ ನಿಧನ

Suddi Udaya

ಬೈಕ್‌ಗೆ ಅಡ್ಡ ಬಂದ ನಾಯಿ: ಬೈಕ್ ಪಲ್ಟಿಯಾಗಿ ನವವಿವಾಹಿತೆ ದಾರುಣ ಸಾವು

Suddi Udaya
error: Content is protected !!