September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿ

ಕೊಕ್ರಾಡಿ: ಅರಣ್ಯ ಇಲಾಖೆಯವರು ತೋಟದಲ್ಲಿಟ್ಟಿದ್ದ ಬೋನಿಗೆ ಬಿದ್ದ ಚಿರತೆ

ಬೆಳ್ತಂಗಡಿ: ವೇಣೂರು ಪ್ರದೇಶ ವ್ಯಾಪ್ತಿಯ ಕೊಕ್ರಾಡಿ ಗ್ರಾಮದ ಸೂರ್ಯನಾರಾಯಣ ಡಿ‌ಕೆ ಇವರ ಜಮೀನೊಂದರಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಶನಿವಾರ ರಾತ್ರಿ ಚಿರತೆಯೊಂದು ಬಿದ್ದಿದೆ.

ಕಳೆದ ಹಲವು ಸಮಯದಿಂದ ಹಾವಳಿ ನೀಡುತ್ತಿದ್ದ ಚಿರತೆ ಸೆರೆಗೆ ಗ್ರಾಮಸ್ಥರು ಮಾಡಿದ್ದ ಮನವಿ ಮೇರೆಗೆ ಅರಣ್ಯ ಇಲಾಖೆಯವರು ಜಮೀನಿನಲ್ಲಿ ಬೋನು ಇಟ್ಟಿದ್ದರು. ಈ ಬೋನಿಗೆ ಚಿರತೆ ಬಿದ್ದಿದೆ.ಚಿರತೆಯೊಂದು ಗ್ರಾಮದಲ್ಲಿ ಆಗಾಗ ಓಡಾಡುತ್ತಾ ಗ್ರಾಮದ ನಾಯಿ, ಕೋಳಿ, ಬೆಕ್ಕು, ಜಾನುವಾರುಗಳ ಮೇಲೆ ದಾಳಿ ಮಾಡುತ್ತಿತ್ತು. ಹಾಗಾಗಿ ಚಿರತೆ ಸೆರೆಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದರು.

ಚಿರತೆ ಬೋನಿಗೆ ಬಿದ್ದಿರುವ ವಿಷಯ ತಿಳಿದು ಸಾರ್ವಜನಿಕರು ಜಮಾಯಿಸಿ ಚಿರತೆಯನ್ನು ವೀಕ್ಷಣೆ ಮಾಡಿದರು.ಇಲಾಖೆಯ ಮೇಲಾಧಿಕಾರಿಗಳ ಸೂಚನೆಯಿಂದ ದೂರದ ಕಾಡಿಗೆ ಬಿಡಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ಭರತ್ ಅವರು ತಿಳಿಸಿದ್ದಾರೆ.

Related posts

ಬೆಳ್ತಂಗಡಿ ತಾಲೂಕು ಲೋಕೋಪಯೋಗಿ ಇಲಾಖಾ ಗುತ್ತಿಗೆದಾರರ ಸಂಘದ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬಿಲ್ಲವ ಫ್ಯಾಮಿಲಿ‌ ದುಬೈ ವತಿಯಿಂದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಪೀತಾಂಬರ ಹೇರಾಜೆಯವರಿಗೆ ಗೌರವ ಸನ್ಮಾನ

Suddi Udaya

ಪುದುವೆಟ್ಟು ಬಾಯಿತ್ಯಾರು ವೀರಪ್ಪ ಗೌಡರಿಗೆ ಧರ್ಮಸ್ಥಳದಿಂದ ಮಾಶಾಸನ ಮಂಜೂರಾತಿ ಪತ್ರ ವಿತರಣೆ

Suddi Udaya

ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

Suddi Udaya

ಕನ್ಯಾಡಿ ಸರ್ಕಾರಿ ಶಾಲೆಗೆ ಹಸಿರು ನೈರ್ಮಲ್ಯ ಅಭ್ಯುದಯ ಪ್ರಶಸ್ತಿ

Suddi Udaya

ಮದ್ದಡ್ಕದಲ್ಲಿ ಸ್ಕೂಟಿ ಹಾಗೂ ಆಪೆ ರಿಕ್ಷಾ ಡಿಕ್ಕಿ

Suddi Udaya
error: Content is protected !!