25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿ

ಮಾಲಾಡಿ ಸರ್ಕಾರಿ ಐ ಟಿಐಯಲ್ಲಿ ವಾರ್ಷಿಕೋತ್ಸವ

ಬೆಳ್ತಂಗಡಿ :ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಮಾಲಾಡಿ ಇಲ್ಲಿ 2023-24ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮ ಜುಲೈ. 6ರಂದು ಸಂಸ್ಥೆಯ ವಠಾರದಲ್ಲಿ ಪ್ರಾಂಶುಪಾಲರಾದ ಶ್ರೀ ರಮೇಶ್ ನಾಯ್ಕ್ ಸರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಕಿರಿಯ ತರಬೇತಿ ಅಧಿಕಾರಿ ಶ್ರೀಮತಿ ಕುಸುಮಾವತಿ ಮೇಡಂ ಮಾತನಾಡಿ ತರಬೇತಿದಾರರು ಜೀವನದಲ್ಲಿ ಸಮಯ ಮತ್ತು ಶಿಸ್ತಿನ ಕಡೆ ಹೆಚ್ಚು ಗಮನ ಹರಿಸಿದರೆ ಮಾತ್ರ ಉತ್ತಮ ತರಬೇತಿದಾರನಾಗಲು ಸಾಧ್ಯ ಎಂದು ಹೇಳಿದರು. ಕಿರಿಯ ತರಬೇತಿ ಅಧಿಕಾರಿ ಶ್ರೀ ವೀರೇಂದ್ರ ಸರ್ ಮಾತನಾಡಿ ತರಬೇತಿದಾರರು ಓದಿನೊಂದಿಗೆ ತಮ್ಮ ತಂದೆ ತಾಯಿ ಹಾಗೂ ಗುರುಗಳನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು. ಪ್ರಾಂಶುಪಾಲರು ಅಧ್ಯಕ್ಷೀಯ ಮಾತುಗಳನ್ನಾಡಿ ತರಬೇತಿದಾರು ಉತ್ತಮ ತರಬೇತಿ ಪಡೆದು ಮುಂದೆ ದುಡಿಯುವ ಕಂಪೆನಿಗಳಲ್ಲಿ ಅದನ್ನು ಅಳವಡಿಸಿಕೊಳ್ಳಬೇಕು ಮತ್ತು ಇಂದಿನ ಇಂದಿನ ತಾಂತ್ರಿಕ ಯುಗದಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗ ಅವಕಾಶಗಳಿವೆ ಎಂದು ತಿಳಿಸಿದರು.
2023-24ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಕೂಟದಲ್ಲಿ ಭಾಗವಹಿಸಿ ವಿಜೇತರಾದ ವಿವರಗಳನ್ನು ವಿದ್ಯಾರ್ಥಿ ನಾಯಕ ಸುಜನ್ ಸಾಲಿಯಾನ್ ತಿಳಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.
ಇದೇ ವೇಳೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದ ವಿನೀಶ್ ಕುಮಾರ್ ಇವರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು.
2023-24ನೇ ಸಾಲಿನ ಚಾಂಪಿಯನ್ ಟ್ರೋಫಿಯನ್ನು ತನ್ನದಾಗಿಸಿಕೊಂಡ ಮೆಕ್ಯಾನಿಕ್ ಇಲೆಕ್ಟ್ರಿಕ್ ವೆಹಿಕಲ್ ವಿಭಾಗದ ಹಿರಿಯ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಮತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಪ್ರಶಸ್ತಿ ಪ್ರಧಾನ ಮಾಡಿದರು.
ವೇದಿಕೆಯಲ್ಲಿ ಕಛೇರಿ ಅಧೀಕ್ಷಕಿ ಶರಣ್ಯ ಮೇಡಂ, ಪ್ರಥಮ ದರ್ಜೆ ಸಹಾಯಕಿ ಕುಮಾರಿ ವಿನುತ ಮೇಡಂ, ಎಸ್ ಎಮ್ ಇ ಪುರಂದರ ಕೆ ಮತ್ತು ರವಿಚಂದ್ರ ಗೌಡ ಮತ್ತು ವಿದ್ಯಾರ್ಥಿ ನಾಯಕ ಸುಜನ್ ಸಾಲಿಯಾನ್ ಉಪಸ್ಥಿತರಿದ್ದರು.
ಮೆಕ್ಯಾನಿಕ್ ಇಲೆಕ್ಟ್ರಿಕ್ ವೆಹಿಕಲ್ ವಿಭಾಗದ ಅಭಿಷೇಕ್ ಸ್ವಾಗತಿಸಿದರು ಎಮ್ ಆರ್ ಎ ಸಿ ವಿಭಾಗದ ಲತೇಶ್ ಧನ್ಯವಾದ ಅರ್ಪಿಸಿದರು. ಐ ಆರ್ ಡಿ ಎಮ್ ವಿಭಾಗದ ಅಜಯ್ ಕಾರ್ಯಕ್ರಮ ನಿರೂಪಿಸಿದರು.

Related posts

ಬಿಜೆಪಿ ಆಡಳಿತದಲ್ಲಿ ಮಂಜೂರುಗೊಂಡ ಕಾಮಗಾರಿಗಳನ್ನು ತನ್ನದೆಂದು ಬಿಂಬುಸುವುದೇ ಸ್ಥಳೀಯ ಕಾಂಗ್ರೆಸಿಗರ ಸಾಧನೆ: ಪ್ರಕಾಶ್ ಎಳನೀರು

Suddi Udaya

ಕುತ್ಲೂರು ಸರಕಾರಿ ಶಾಲಾ ಮಕ್ಕಳಿಗೆ ಬಿಎಎಸ್ಎಫ್ ಸಂಸ್ಥೆಯಿಂದ ಪುಸ್ತಕ ಸಾಮಾಗ್ರಿ ಕೊಡುಗೆ

Suddi Udaya

ವಾಣಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕ – ಬಾಲಕಿಯರ ತಂಡ ವಾಲಿಬಾಲ್ ಪಂದ್ಯಾಟದಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ: ಚರ್ಮಗಂಟು ಲಸಿಕೆ ಕಾರ್ಯಕ್ರಮ

Suddi Udaya

ಕಳಿಯ ಗ್ರಾ.ಪಂ. ನಲ್ಲಿ ಹುಚ್ಚು ನಾಯಿ ಉಚಿತ ರೋಗ ನಿರೋಧಕ ಲಸಿಕಾ ಶಿಬಿರ

Suddi Udaya

ದಸ್ಕತ್ ಸಿನೆಮಾ ನಿರ್ದೇಶಕರಿಂದ ಹೊಸ ಚಿತ್ರ ‘ಅಜ್ಜಿಕಥೆ’ : ದುಬೈನಲ್ಲಿ ಚಿತ್ರದ ಶೀರ್ಷಿಕೆ ಅನಾವರಣ

Suddi Udaya
error: Content is protected !!