ಬೆಳ್ತಂಗಡಿ: ಜೆಸಿಐ ಉಪುಂದ ಘಟಕದ ವತಿಯಿಂದ ಜೂ.30ಕ್ಕೆ ಬೈಂದೂರಿನಲ್ಲಿ ವಲಯ 15ರ ಜೆಜೆಸಿ ಹಾಗೂ ಲೇಡಿ ಜೆಸಿ ಸಮ್ಮೇಳನವು ನಡೆಯಿತು.
ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ರಂಜಿತ್ ಎಚ್ ಡಿ ಯವರ ನೇತೃತ್ವದಲ್ಲಿ ಜೆಸಿ, ಲೇಡಿ ಜೆಸಿ ಹಾಗೂ ಜೂನಿಯರ್ ಜೆಸಿ ಸೇರಿ 30 ಸದಸ್ಯರು ಭಾಗವಹಿಸಿದರು.
ಜೆಜೆಸಿಯ ವಿಭಾಗದಲ್ಲಿ ಮೆಂಬರ್ಷಿಪ್ ಡ್ರೈವ್, ನಿಮ್ಮ ಅಭ್ಯರ್ಥಿಯನ್ನು ತಿಳಿದುಕೊಳ್ಳಿ – ಮತದಾನ ಜಾಗೃತಿ ಕಾರ್ಯಕ್ರಮದಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಜೆಜೆಸಿ ವಿಭಾಗಕ್ಕೆ ಮೂರು ಜಿಲ್ಲೆಗಳ ಒಳಗೊಂಡ ವಲಯ 15 ರಲ್ಲಿ ಅತ್ಯುತ್ತಮ ಜೆಜೆಸಿ ವಿಭಾಗ ಪ್ರಶಸ್ತಿಯನ್ನು ಮೂಡಿಗೆರಿಸಿಕೊಂಡಿದೆ.
ಕ್ಯಾನ್ಸರ್ ಜಾಗೃತಿ ಜಾಥಾ – ಪಿಂಕ್ ಮ್ಯಾರಥಾನ್, ಮಹಿಳಾ ದಿನಾಚರಣೆಯ ಪ್ರಯುಕ್ತ ನಡೆದಂತಹ ಸೇವಾ ಯೋಜನೆ, ಸಮಾಜದ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸಿರುವುದು, ಯೋಗ ತರಬೇತಿ ಶಿಬಿರ, ಆರೋಗ್ಯ ಮಾಹಿತಿ ಶಿಬಿರದಂತಹ ಕಾರ್ಯಕ್ರಮಗಳನ್ನು ನಡೆಸಿದ ಮಹಿಳಾ ವಿಭಾಗಕ್ಕೆ ವಲಯದಲ್ಲಿ ಅತ್ಯುತ್ತಮ ಲೇಡಿ ಜೆಸಿ ರನ್ನರ್ ಪ್ರಶಸ್ತಿಗೆ ಭಾಜನವಾಗಿದೆ.
ಹಲವಾರು ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಜೆಸಿಐ ಬೆಳ್ತಂಗಡಿಯ ಸದಸ್ಯರು ಭಾಗವಹಿಸಿದರು. ಲೇಡಿ ಜೆಸಿ ವಿಭಾಗದಲ್ಲಿ ಭಾಷಣ ಸ್ಪರ್ಧೆಯಲ್ಲಿ ಅನನ್ಯ ಜೈನ್ ಪ್ರಥಮ, ಪಿಕ್ & ಆಕ್ಟ್ ನಲ್ಲಿ ಸಮನ್ವಿತ್ ಕುಮಾರ್ ದ್ವಿತೀಯ, ಬ್ಯಾನರ್ ಪ್ರದರ್ಶನದಲ್ಲಿ ದ್ವಿತೀಯ, ಘಟಕ ನಡೆಸಿದ ಕಾರ್ಯಕ್ರಮಗಳ ಫೋಟೋ ಪ್ರದರ್ಶನದಲ್ಲಿ ದ್ವಿತೀಯ, ಜೆಜೆಸಿ ಯ ಡ್ಯಾನ್ಸ್ ಧಮಾಕಾದಲ್ಲಿ ದ್ವಿತೀಯ ರನ್ನರ್ ಪ್ರಶಸ್ತಿ, ಹಾಗೂ ಘಟಕ ನಡೆಸಿದ ಕಾರ್ಯಕ್ರಮಗಳಿಗೆ ಮನ್ನಣೆಯನ್ನು ಪಡೆದು ವಲಯದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಹೆಸರನ್ನು ಮತ್ತೊಮ್ಮೆ ರಾರಾಜಿಸುವಂತೆ ಮಾಡಿತು. ಲೇಡಿ ಜೇಸಿ ಸದಸ್ಯರು ಫ್ಯಾಶನ್ ಶೋ ಹಾಗೂ ಬೆಂಕಿ ಇಲ್ಲದೆ ಅಡುಗೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ವಲಯದ ಅಧ್ಯಕ್ಷರಾದ ಅಡ್ವಕೇಟ್ ಗಿರೀಶ್ ಎಸ್ ಪಿ, ವಲಯ ಕಾರ್ಯದರ್ಶಿಗಳಾದ ಸೌಮ್ಯ ರಾಕೇಶ್, ವಲಯ ಉಪಾಧ್ಯಕ್ಷರಾದ ಶಂಕರ್ ರಾವ್, ಘಟಕದ ಉಪಾಧ್ಯಕ್ಷರುಗಳಾದ ಪ್ರೀತಮ್ ಶೆಟ್ಟಿ, ಆಶಾ ಪ್ರಶಾಂತ್, ಚಂದ್ರಹಾಸ್ ಬಳಂಜ, ಶೈಲೇಶ್, ಲೇಡಿ ಜೇಸಿ ಸಂಯೋಜಕರಾದ ಶ್ರುತಿ ರಂಜಿತ್, ಘಟಕದ ಕಾರ್ಯದರ್ಶಿಗಳಾದ ಅನುದೀಪ್ ಜೈನ್, ಸಮ್ಮೇಳನದ ಘಟಕದ ಲೇಡಿ ಜೆಸಿ ಸಂಯೋಜಕರಾದ ರಕ್ಷಿತಾ ಶೆಟ್ಟಿ, ಜತೆ ಕಾರ್ಯದರ್ಶಿಯಾದ ಪ್ರಮೋದ್ ಕೆ, ಸದಸ್ಯರುಗಳಾದ ಜಯರಾಜ್ ನಡಕ್ಕರ, ರಕ್ಷಿತ್ ಅಂಡಿಂಜೆ, ಸ್ವಾತಿ ಪ್ರೀತೇಶ್, ಸುನಿತಾ ಬೈಜು, ಅನನ್ಯ ಜೈನ್, ಸರಿತಾ ಪ್ರವೀಣ್, ರಂಜನ್ ಧರ್ಮಸ್ಥಳ, ಪ್ರಣಮ್ ಶೆಟ್ಟಿ, ಸ್ವಾತಿ ಪುಂಜಾಲಕಟ್ಟೆ, ಜೆಜೆಸಿ ಅಧ್ಯಕ್ಷರಾದ ಸಮನ್ವಿತ್ ಕುಮಾರ್, ಸಂಯೋಜಕರಾದ ದೀಪ್ತಿ ಕುಲಾಲ್, ಸದಸ್ಯರುಗಳಾದ ತ್ರಿಷಾ, ಶಿವಾನಿ, ನೇವಿಲ್, ಉಜ್ವಲ್, ಅನುಕ್ಷಾ ಶಿರ್ಲಾಲ್, ಪ್ರಜ್ಞ, ಅತಿ ಶ್ರೇಯ, ತೇಜಸ್, ಸೃಜನ್ ಉಪಸ್ಥಿತರಿದ್ದರು.