ಕಳೆಂಜ: ‘ಪುಣ್ಯ ಕೋಟಿಗೆ ಒಂದು ಕೋಟಿ’ ನಂದಗೋಕುಲ ದೀಪೋತ್ಸವ: ಸಾಮೂಹಿಕ ಗೋಪೂಜೆ, ಗೋ ನಂದಾರತಿ

Suddi Udaya

ಕಳೆಂಜ: ಕಳೆಂಜ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ನಂದಗೋಕುಲ ದೀಪೋತ್ಸವ ಸಂಚಾಲನಾ ಸಮಿತಿ ನಂದಗೋಕುಲ ಗೋಶಾಲೆ ವತಿಯಿಂದ ಭೂಮಾತೆಯ ಸಮೃದ್ಧಿ ಕಾರಣೀಭೂತೆ, ಸನಾತನ ಹಿಂದೂ ಸಮಾಜದ ಪುನರುತ್ಥಾನದ ಭಾಗ್ಯದಾತೆ, ಮಾನವನ ಬದುಕಿನ ಸಂಜೀವಿನಿಯಾದ ಜಗಜ್ಜನನಿ ಗೋಮಾತೆಗೆ ಪ್ರಣಾಮ ಸಲ್ಲಿಸುವ ವಿಶಿಷ್ಠ ಕಾರ್ಯಕ್ರಮ ‘ಪುಣ್ಯಕೋಟಿಗೆ ಒಂದು ಕೋಟಿ’ ನಂದಗೋಕುಲ ದೀಪೋತ್ಸವವು ಜು.7 ರಂದು ಕಳೆಂಜ ನಂದಗೋಕುಲ ಗೋಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ದೀಪ ಬೆಳಗಿಸಿ ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ ಮಾತನಾಡಿ ಇಷ್ಟೊಂದು ಸಂಖ್ಯೆಯಲ್ಲಿ ಗೋವುಗಳನ್ನು ಸಾಕುವುದು ಸುಲಭದ ಕೆಲಸವಲ್ಲ ನಿಮ್ಮೆಲ್ಲರ ಸಹಕಾರದಿಂದ ಒಳ್ಳೆಯ ರೀತಿಯಿಂದ ನಡೆಯುತ್ತಿದ್ದು, ಮುಂದಕ್ಕೆ ಎಲ್ಲರನ್ನು ಆಕರ್ಷಿಸುವ ಈ ಪರಿಸರ ಪ್ರವಾಸೋದ್ಯವಾಗಿ ಬೆಳೆಯಲಿ ಎಂದರು.

ಮುಖ್ಯ ಅತಿಥಿಗಳಾಗಿ ದೀಪೋತ್ಸವ ಸಮಿತಿಯ ಗೌರವಸಲಹೆಗಾರ ಶಾಸಕ ಹರೀಶ್ ಪೂಂಜ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ನಂದಗೋಕುಲ ದೀಪೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಶಶಿರಾಜ್ ಶೆಟ್ಟಿ ಗುರುವಾಯನಕೆರೆ , ಪುತ್ತೂರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಚಾಲಕ ವಿನಯಚಂದ್ರ, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಕೃಷ್ಣ ಭಟ್, ಉಜಿರೆ ಎಸ್.ಡಿ.ಎಂ. ಸೊಸೈಟಿ ಸಿಇಒ ಪೂರಣ್ ವರ್ಮ, ಪುದುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಅನಿತಾ, ನಂದಗೋಕುಲ ದೀಪೋತ್ಸವ ಸಂಚಾಲನಾ ಸಮಿತಿಯ ಅಧ್ಯಕ್ಷ ನಾರಾಯಣ ಗೌಡ ಪಂಚಶ್ರೀ, ಎಸ್.ಕೆ.ಡಿ.ಆರ್.ಡಿ.ಪಿ ಯೋಜನಾಧಿಕಾರಿ ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ನಂದಗೋಕುಲ ದೀಪೋತ್ಸವ ಸಂಚಾಲನಾ ಸಮಿತಿಯ ಅಧ್ಯಕ್ಷ ನಾರಾಯಣ ಗೌಡ, ಪ್ರಧಾನ ಸಂಚಾಲಕ ಶಶಿರಾಜ್ ಶೆಟ್ಟಿ ಗುರುವಾಯನಕೆರೆ ಇವರನ್ನು ಗೌರವಿಸಲಾಯಿತು. ದೀಪೋತ್ಸವಕ್ಕೆ ಗೂಡು ದೀಪ ಒದಗಿಸಿದ ಉಜಿರೆ ಪದ್ಮಶ್ರೀ ಯ ಪದ್ಮನಾಭ ಶೆಟ್ಟಿಗಾರ್ ‍ರವರನ್ನು ಗುರುತಿಸಲಾಯಿತು.

ಈ ವೇಳೆ ಕುವೆಟ್ಟು ಗ್ರಾ.ಪಂ.. ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ ತನ್ನ ಒಂದೂವರೆ ವರ್ಷದ ಪಂಚಾಯತ್ ಗೌರವ ಧನ ರೂ.43000 ವನ್ನು ಗೋಶಾಲೆಗೆ ನೀಡಿದರು.

ಸಂಜೆ ಭಜನೋತ್ಸವ ಕಾರ್ಯಕ್ರಮವು ಜರುಗಿತು. ಭಜನೋತ್ಸವವನ್ನು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಡಾ| ಎಂ.ಎಂ ದಯಾಕರ್, ಕಾರ್ಯದರ್ಶಿ ಸುಬ್ರಹ್ಮಣ್ಯ ಅಗರ್ತ, ಭಾಸ್ಕರ್ ಧರ್ಮಸ್ಥಳ., ಪದ್ಮನಾಭ ಶೆಟ್ಟಿಗಾರ್ ಉಜಿರೆ, ನವೀನ್ ನೆರಿಯ, ಸೀತಾರಾಮ ಬೆಳಾಲು ಉಪಸ್ಥಿತರಿದ್ದರು.

ಶಿಕ್ಷಕಿ ವಸಂತಿ ಪ್ರಾರ್ಥಿಸಿದರು. ಟ್ರಸ್ಟ್ ಅಧ್ಯಕ್ಷ ಡಾ| ಎಂ.ಎಂ. ದಯಾಕರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಟ್ರಸ್ಟ್ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಧನ್ಯವಾದವಿತ್ತರು. ಆದಿತ್ಯ ಜೆ. ಶೆಟ್ಟಿ ಬರೆಂಗಾಯ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಯಶಸ್ವಿಗೆ ದೀಪೋತ್ಸವ ಸಂಚಾಲನಾ ಸಮಿತಿ ಪದಾಧಿಕಾರಿಗಳು, ಟ್ರಸ್ಟಿಗಳು, ನವೀನ್ ನೆರಿಯ, ಹರೀಶ್ ನೆರಿಯ ಕೀರ್ತಿರಾಜ್ ಮತ್ತಿತ್ತರರು ಸಹಕರಿಸಿದರು.

ಸಭಾ ಕಾರ್ಯಕ್ರಮದ ನಂತರ ಸಾಮೂಹಿಕ ಗೋಪೂಜೆ, ಗೋ ನಂದಾರತಿ ಮತ್ತು ದೀಪೋತ್ಸವವು ಜರುಗಿತು.

Leave a Comment

error: Content is protected !!