ಜು.13: ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ಧೇಶ ಸಹಕಾರ ಸಂಘದ ಶ್ರೀ ಗುರು ಸಾನಿಧ್ಯ ವಾಣಿಜ್ಯ ಸಂಕೀರ್ಣದ ಲೋಕಾರ್ಪಣೆ

Suddi Udaya

ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ (ನಿ.) ಬೆಳ್ತಂಗಡಿಯು 2007-08 ರಲ್ಲಿ ಪ್ರಾರಂಭಗೊಂಡು ಕಳೆದ ಸುದೀರ್ಘ 16 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಅದ್ಭುತ ಸಾಧನೆಯನ್ನು ಮಾಡಿಕೊಂಡು ಸಂಸ್ಥೆಯ ಧ್ಯೆಯೋದ್ಧೇಶಗಳನ್ನು ಈಡೇರಿಸುವ ಮುಖೇನ ಒಂದೊಂದು ಹೆಜ್ಜೆ ಮೇಲೆರುತ್ತ ಮುಂದಡಿ ಇಡುತ್ತಿದೆ ಎಂದು ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ ಹೇಳಿದರು.


ಅವರು ಜು.9ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.


ನೂತನ ಕೇಂದ್ರ ಕಛೇರಿಯು ಸುಮಾರು 5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಒಟ್ಟು ೧೧೧೦೦ ಚದರ ಅಡಿ ವಿಸ್ತೀರ್ಣವುಳ್ಳ ೩ ಮಹಡಿಗಳನ್ನು ಹೊಂದಿರುವ ಗುರುಸಾನಿಧ್ಯ ಎಂಬ ನಾಮಾಂಕಿತವುಳ್ಳ ಕೇಂದ್ರ ಕಛೇರಿಯು ಜು.13 ರಂದು ಲೋಕರ್ಪಾಣೆಯಾಗಲಿದೆ. ಇದರಲ್ಲಿ ನೆಲ ಮಹಡಿಯಲ್ಲಿ ಸಂಘಕ್ಕೆ ಬರುವ ಗ್ರಾಹಕರಿಗೆ ಸುಸಜ್ಜಿತವಾದ ಪಾರ್ಕಿಂಗ್ ಹೊಂದಿದ್ದು, ಕೆಳಮಹಡಿ ಮತ್ತು ಪ್ರಥಮ ಮಹಡಿಯು ವಾಣಿಜ್ಯ ಉದ್ದೇಶಕ್ಕೆ ಅನುಗುಣಾವಾದ ಸ್ಥಳವಾಗಿರುತ್ತದೆ. 2 ನೇ ಮಹಡಿಯಲ್ಲಿ ಸುಸಜ್ಜಿತವಾದ ಆಡಳಿತ ಕಚೇರಿಯನ್ನು ಹೊಂದಿದ್ದು, ೩ನೇ ಮಹಡಿಯು ಸುಮಾರು 300 ರಷ್ಟು ಸಂಖ್ಯೆಯ ಸಾಮಾರ್ಥ್ಯ ಹೊಂದಿರುವ ಸಭಾಂಗಣವನ್ನು ಹೊಂದಿರುತ್ತದೆ. ಗ್ರಾಹಕರ ಅನುಕೂಲಕ್ಕಾಗಿ ಲಿಪ್ಟ್ ಸೌಲಭ್ಯ, 60 ಕಿಲೋವ್ಯಾಟ್ ಸಾಮಾರ್ಥ್ಯದ ಸೋಲಾರ್ ಅಳವಡಿಕೆ ಮಾಡಲಾಗಿರುತ್ತದೆ ಎಂದರು.
ಕೇಂದ್ರ ಕಚೇರಿ ಕಟ್ಟಡ ಮತ್ತು ಆಡಳಿತ ಕಚೇರಿಯು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಲೋಕಾರ್ಪಣೆಗೊಳಿಸಲಿದ್ದಾರೆ. ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ಮಠ ಬೆಂಗಳೂರು ಪೀಠಾಧಿಪತಿಗಳಾದ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎನ್ ಪದ್ಮನಾಭ ಮಾಣಿಂಜರವರು ವಹಿಸಲಿದ್ದು, ಆಡಳಿತ ಕಚೇರಿ ಉದ್ಘಾಟನೆಯನ್ನು ಕೆ.ಎನ್. ರಾಜಣ್ಣ, ಮಾನ್ಯ ಸಹಕಾರ ಸಚಿವರು ನಡೆಸಲಿದ್ದು, ಭದ್ರತ ಕೊಠಡಿ ಉದ್ಘಾಟನೆಯನ್ನು ಉಸ್ತುವರಿ ಸಚಿವ ದಿನೇಶ್ ಗುಂಡೂರಾವ್, ಸಭಾಭವನದ ಉದ್ಘಾಟನೆಯನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸಹಕಾರಿ ಆಪ್ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ಹಾಗೂ ಮೂಲ್ಕಿ-ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಮುಖ್ಯ ಅತಿಥಿಗಳಾಗಿ, ವಿಶೇಷ ಆಹ್ಹಾನಿತರಾಗಿ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.


ಸಂಘದ ಸ್ಥಾಪನೆ ಮತ್ತು ಬೆಳವಣಿಗೆ:
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸಿ ಆ ಮೂಲಕ ಆರ್ಥಿಕವಾಗಿ ಶಕ್ತರನ್ನಾಗಿ ಮಾಡುವ ಸದುದ್ದೇಶದಿಂದ ಮಾಜಿ ಶಾಸಕರಾದ ದಿ.ಕೆ ವಸಂತ ಬಂಗೇರರವರು ಮುಖ್ಯಪ್ರವರ್ತಕರಾಗಿ, ಹಿರಿಯ ಸಹಕಾರಿಗಳಾದ ದಿ| ಕೆ.ಜಿ. ಬಂಗೇರರವರ ಸ್ಥಾಪಕಾಧ್ಯಕ್ಷತೆಯಲ್ಲಿ, ಪ್ರಸ್ತುತ ಎನ್ ಪದ್ಮನಾಭ ಮಾಣಿಂಜರವರ ದಕ್ಷ ಆಡಳಿತದಿಂದ ಸಂಸ್ಥೆಯು ಸಹಕಾರ ಕ್ಷೇತ್ರದಲ್ಲಿ ಅಭಿವೃದ್ಧಿಯ ಉತ್ತುಂಗದ ಪಥದಲ್ಲಿ ಸಾಗುತ್ತಿದೆ. ಮೈಸೂರು ಪ್ರಾಂತ್ಯದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು ಪ್ರಸ್ತುತ ಬೆಳ್ತಂಗಡಿ, ಶಿರ್ತಾಡಿ, ಕಲ್ಲಡ್ಕ, ಕಕ್ಕಿಂಜೆ, ಬೆಳುವಾಯಿ, ನೆಲ್ಯಾಡಿ, ಮುಡಿಪು, ವೇಣೂರು, ಉಪ್ಪಿನಂಗಡಿ, ಕಡಬ, ಬ್ರಹ್ಮಾವರ, ಹಳೆಯಂಗಡಿ, ಕುಪ್ಪೆಪದವು, ಬಜಗೋಳಿ, ಅರಸಿನಮಕ್ಕಿ, ಸಿದ್ದಕಟ್ಟೆ, ಅಜೆಕಾರು ಹಿರಿಯಡ್ಕ, ಪಡೀಲ್, ಕಬಕ, ಹೊಸ್ಮಾರು, ಪುರುಷರಕಟ್ಟೆ ಒಟ್ಟು 22 ಶಾಖೆಗಳನ್ನು ಹೊಂದಿದ್ದು. 2024-25ನೇ ಸಾಲಿನಲ್ಲಿ ಒಟ್ಟು ೩ ಶಾಖೆಗಳು ಲೋಕಾರ್ಪಣೆಗೊಳ್ಳಲಿದೆ. ಈಗಾಗಲೇ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸಿ ಸದಸ್ಯರಿಗೆ ಅತ್ಯುತ್ತಮವಾದ ತಂತ್ರಜ್ಞಾನದೊಂದಿಗೆ ಬ್ಯಾಂಕಿಂಗ್ ಕ್ಷೇತ್ರದ ಎಲ್ಲಾ ಸೇವೆಯನ್ನು ನೀಡಲಾಗುತ್ತಿದೆ. ಸಂಸ್ಥೆಯ ಮೂಲಕ RTGS/NEFT/ESTAMP/RTC/ಗ್ರಾಹಕರಿಗೆ ಲಾಕರ್ ಸೇವೆ ನೀಡಲಾಗುತ್ತಿದೆ. ಸಂಘವು ಅತ್ಯುತ್ತಮ ತಂತ್ರಜ್ಞಾನದೊಂದಿಗೆ ಬೆಳಯಬೇಕೆನ್ನುವ ಉದ್ದೇಶದೊಂದಿಗೆ ತಾಲೂಕಿನಲ್ಲೇ ಪ್ರಥಮವಾಗಿ ಸಹಕಾರ ಸಂಘದ ಹೆಸರಿನಲ್ಲಿ ತನ್ನದೇ ಆದ IFSC Code ಪಡೆದುಕೊಂಡಿದ್ದು ಈ ಮೂಲಕ ನೇರವಾಗಿ ಗ್ರಾಹಕರ ಖಾತೆಗೆ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆಯು ಪ್ರಾರಂಭವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಕ್ಯೂಆರ್ ಕೋಡ್, ನ್ಯಾಚ್, ಇ-ಕಲೆಕ್ಷನ್ ತಂತ್ರಾಜ್ಞಾನವನ್ನು ಅಳವಡಿಸುವಲ್ಲಿ ಕಾರ್ಯ ಪ್ರವೃತ್ತರಾಗಿದ್ದೇವೆ. ಅಲ್ಲದೆ ರಾಷ್ಟ್ರೀಕೃತ ಬ್ಯಾಂಕು ನೀಡುವ ಎಲ್ಲಾ ಸೇವೆ ನೀಡಲಾಗುತ್ತಿದೆ. ನಿಮ್ಮ ಸ್ಪೂರ್ತಿ ನಮ್ಮ ಉತ್ಕೃಷ್ಠ ಸೇವೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ಸಹಕಾರ ಕ್ಷೇತ್ರದಲ್ಲಿ ಅಧ್ವಿತೀಯ ಸಾಧನೆ ಮಾಡಿದೆ ಎಂದು ತಿಳಿಸಲು ಅತೀವ ಸಂತಸಪಡುತ್ತೇವೆ. ಪ್ರಸ್ತುತ 82 ಮಂದಿ ಸಿಬ್ಬಂದಿಗಳಿಗೆ ಉದ್ಯೋಗವನ್ನು ಕಲ್ಪಿಸಿ ಭದ್ರ ಭವಿಷ್ಯಕ್ಕೆ ಅವಕಾಶ ಕಲ್ಪಿಸಿದೆ. ಸುಮಾರು 42೦೦೦ ಕ್ಕೂ ಮಿಕ್ಕಿ ಸದಸ್ಯತನವನ್ನು ಹೊಂದಿದ್ದು, ರೂ.193 ಕೋಟಿ ಠೇವಣಿಯನ್ನು ಸಂಗ್ರಹಿಸಿ, ರೂ167 ಕೋಟಿ ಸಾಲವನ್ನು ವಿತರಿಸಿ, 212 ಕೋಟಿ ದುಡಿಯುವ ಬಂಡವಾಳದೊಂದಿಗೆ, ಕಳೆದ ವರ್ಷದಲ್ಲಿ 1120ಕೋಟಿ ವ್ಯವಹಾರ ನಡೆಸಿ, ರೂ.3.44 ಲಕ್ಷ ನಿವ್ವಳ ಲಾಭವನ್ನು ಗಳಿಸಿರುತ್ತದೆ.

ಸಾಮಾಜಿಕ ಸೇವೆ ಮತ್ತು ಚಟುವಟಿಕೆ:
ಸಂಸ್ಥೆಯು ಕೇವಲ ಬ್ಯಾಂಕಿಗ್ ಚಟುವಟಿಕೆ ಮಾತ್ರ ಸೀಮಿತವಾಗದೆ ಸಾಮಾಜಿಕ ಚಟುವಟಿಕೆಯಲ್ಲೂ ಸಕ್ರಿಯವಾಗಿರುತ್ತದೆ. ಕಲಿಕೆಗಾಗಿ ಸಹಾಯ ಸಹಾಯಕ್ಕಾಗಿ ಕಲಿಕೆ ಎನ್ನುವ ನಮ್ಮ ಸಂಸ್ಥೆಯ ಯೋಜನೆಯಡಿ ದತ್ತು ಸ್ವೀಕಾರ ಕಾರ್ಯಕ್ರಮದಡಿಯಲ್ಲಿ 3 ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪೂರ್ಣ ಖರ್ಚುವೆಚ್ಚ ಭರಿಸಲಾಗಿದ್ದು ಪ್ರಸ್ತುತ ಉತ್ತಮ ಉದ್ಯೋಗ ಲಭಿಸಿ ನೆಮ್ಮದಿಯ ಜೀವನವನ್ನು ನಡೆಸುತ್ತಿರುವುದು ಸಂಸ್ಥೆಯು ಕಂಡ ಕನಸು ನನಸಾಗಿದೆ. ಒಬ್ಬರು ಮೆಡಿಕಲ್ ವಿದ್ಯಾರ್ಥಿಯ ವ್ಯಾಸಂಗದ ಆಂಶಿಕ ವೆಚ್ಚ ಹಾಗೂ ಶ್ರೀ ಗುರುದೇವ ಕಾಲೇಜಿನ ಪದವಿ ವ್ಯಾಸಂಗ ಮಾಡುತ್ತಿರುವ ೧೧೧ ಪದವಿ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಪ್ರತಿ ವರ್ಷ ೬ ರಿಂದ 7 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಪದವಿಯಲ್ಲಿ ಹಾಗೂ ಇತರ ಕ್ಷೇತ್ರದಲ್ಲಿ ಅತೀ ಹೆಚ್ಚು ಸಾಧನೆ ಮಾಡಿದ ಸಂಸ್ಥೆಯ ಸದಸ್ಯರ ಮಕ್ಕಳನ್ನು ಗುರುತಿಸಿ ಪ್ರತಿವರ್ಷ ಮಹಾಸಭೆಯಲ್ಲಿ ಸನ್ಮಾನಿಸಲಾಗಿರುತ್ತದೆ. ಬೆಳ್ತಂಗಡಿ ತಾಲೂಕಿನಲ್ಲಿ ಭೀಕರ ನೆರೆ ಬಂದು ಪ್ರಾಕೃತಿಕ ದುರಂತ ಸಂಭವಿಸಿದಾಗ ಸಂಘದ ವತಿಯಿಂದ ರೂ.3.೦೦ ಲಕ್ಷಕ್ಕೂ ಹೆಚ್ಚು ಪರಿಹಾರ ನಿಧಿ ನೀಡಲಾಗಿರುತ್ತದೆ. ಕಳೆದ ವರ್ಷದಲ್ಲಿ ಕೋವಿಡ್-19 ಸಂದರ್ಭದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ.5೦,೦೦೦/- ಪರಿಹಾರ ನಿಧಿ ನೀಡಲಾಗಿರುತ್ತದೆ. ಕೋವಿಡ್ -19 ನಿರ್ವಹಣೆಗಾಗಿ ತಾಲೂಕು ಮತ್ತು ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೂ.1.೦೦ ಲಕ್ಷ ಮೊತ್ತದ ಕೋವಿಡ್ ನಿರ್ವಹಣಾ ಸಾಮಾಗ್ರಿಗಳಿಗೆ ವಿತರಿಸಲಾಗಿದೆ.


ಸೇವೆಗೆ ಸಂದ ಪುರಸ್ಕಾರ:
ಸಾಧನೆಗೆ ಪೂರಕವಾಗಿ2023 ರಲ್ಲಿ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯದ ಉತ್ತಮ ಸಹಕಾರ ಸಂಘ ಪ್ರಶಸ್ತಿ, ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಸತತ 7 ವರ್ಷಗಳಿಂದ ಸಾಧನ ಪ್ರಶಸ್ತಿ, ಯುವವಾಹಿನಿ ಕೇಂದ್ರ ಸಮಿತಿಯಿಂದ ಪ್ರತಿಷ್ಠಿತ ಸಾಧನ ಶ್ರೇಷ್ಠ ಪ್ರಶಸ್ತಿ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಸಾಧನ ಪ್ರಶಸ್ತಿ, ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಸಾಧನ ಪ್ರಶಸ್ತಿ, ಹೀಗೆ ಹಲವಾರು ಪ್ರಶಸ್ತಿಗಳನ್ನು ಗಳಿಸಿರುವುದು ಸಂಘವನ್ನು ಇನ್ನಷ್ಟು ಅಭಿವೃದ್ಧಿಯ ಪಥದಲ್ಲಿ ಸಾಗಲು ಪ್ರೇರಿಪಿಸಿದಂತಾಗಿರುತ್ತದೆ.
ಪ್ರಸ್ತುತ ಸಂಘದ ಉಪಾಧ್ಯಕ್ಷರಾಗಿ ಭಗೀರಥ ಜಿ, ನಿರ್ದೇಶಕರಾಗಿ ಶ್ರೀಮತಿ ಸುಜಿತಾ ವಿ ಬಂಗೇರ, ಶ್ರೀಮತಿ ತನುಜಾ ಶೇಖರ್, ಸಂಜೀವ ಪೂಜಾರಿ, ಕೆ.ಪಿ.ದಿವಾಕರ, ಜಗದೀಶ್ಚಂದ್ರ ಡಿ.ಕೆ, ಚಂದ್ರಶೇಖರ, ಧರ್ಣಪ್ಪ ಪೂಜಾರಿ, ಧರಣೇಂದ್ರ ಕುಮಾರ್ ಪಿ, ಗಂಗಾಧರ ಮಿತ್ತಮಾರು, ಆನಂದ ಪೂಜಾರಿ, ಡಾ. ರಾಜಾರಾಮ ಕೆ.ಬಿ, ಜಯವಿಕ್ರಮ ಪಿ, ಸಂಘದ ವಿಶೇಷಾಧಿಕಾರಿಯಾಗಿ ಎಂ. ಮೋನಪ್ಪ ಪೂಜಾರಿ, ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಅಶ್ವತ್ಥ್ ಕುಮಾರ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸದಸ್ಯರಿಗೆ ನೆರವು:
ಸಂಘದ ಸಾಲಗಾರ ಸದಸ್ಯರು ಮರಣ ಹೊಂದಿದರೆ ಅಥವಾ ಶಾಶ್ವತ ಅಂಗವಿಕಲನಾದರೆ ಶ್ರೀ ಗುರು ಸಾಲಗಾರರ ಮರಣ ನಿಧಿಯಿಂದ ರೂ.5 ಲಕ್ಷ ನೀಡಿ ಸಾಲಗಾರರ ಕುಟುಂಬವನ್ನು ಸಾಲದಿಂದ ಋಣಮುಕ್ತಗೊಳಿಸಲಾಗಿದೆ. ಸದ್ರಿ ಯೋಜನೆಯಿಂದ ಈವರೆಗೆ ಒಟ್ಟು 33 ಫಲಾನುಭವಿಗಳಿಗೆ ರೂ.21,15,634/- ಮರಣ ನಿಧಿಯಿಂದ ಸಾಲದ ಮೊತ್ತ ಭರಿಸಿ ಮೃತ ಸಾಲಗಾರರ ಕುಟುಂಬವನ್ನು ಸಂಪೂರ್ಣ ಸಾಲದಿಂದ ಋಣಮುಕ್ತಗೊಳಿಸಲಾಗಿರುತ್ತದೆ. ಅವಘಡದಿಂದ ಶಾಶ್ವತ ಅಂಗವಿಕಲರಾಗಿರುವ ಸಾಲಗಾರ ಸದಸ್ಯರಾದ ಅಕ್ಷತ್ ಮತ್ತು ಶೀನಪ್ಪ ಗೌಡರ ಸಾಲಗಳನ್ನು ಶ್ರೀ ಗುರು ಸಾಲಗಾರರ ಮರಣ ನಿಧಿಯಿಂದ ಭರಿಸಿ ಕಷ್ಟಕ್ಕೆ ಸ್ಪಂದಿಸಲಾಗಿದೆ.


ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಭಗೀರಥ ಜಿ, ನಿರ್ದೇಶಕರಾದ ಸುಜಿತಾ ವಿ ಬಂಗೇರ, ತನುಜಾ ಶೇಖರ್, ಸಂಜೀವ ಪೂಜಾರಿ, ಕೆ.ಪಿ.ದಿವಾಕರ, ಜಗದೀಶ್ಚಂದ್ರ ಡಿ.ಕೆ, ಚಂದ್ರಶೇಖರ, ಗಂಗಾಧರ ಮಿತ್ತಮಾರು, ಆನಂದ ಪೂಜಾರಿ, ಡಾ.ರಾಜಾರಾಮ ಕೆ.ಬಿ, ಜಯವಿಕ್ರಮ ಪಿ, ಸಂಘದ ವಿಶೇಷಾಧಿಕಾರಿಗಳಾದ ಎಂ. ಮೋನಪ್ಪ ಪೂಜಾರಿ ಉಪಸ್ಥಿತರಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್‌ ಸ್ವಾಗತಿಸಿದರು. ನಿರ್ದೇಶಕ ಧರಣೇಂದ್ರ ಕುಮಾರ್ ಪಿ ವಂದಿಸಿದರು.

Leave a Comment

error: Content is protected !!