April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ತಾಲೂಕು ಲೋಕೋಪಯೋಗಿ ಇಲಾಖಾ ಗುತ್ತಿಗೆದಾರರ ಸಂಘದ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ ತಾಲೂಕು ಲೋಕೋಪಯೋಗಿ ಇಲಾಖಾ ಗುತ್ತಿಗೆದಾರರ ಸಂಘ (ರಿ)ಬೆಳ್ತಂಗಡಿ ಇದರ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸಂಘದ ಅಧ್ಯಕ್ಷ ವಿನಯ್ ಹೆಗ್ಡೆ ನಾರಾವಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯದರ್ಶಿ ದಯಾನಂದ ಸಂಜಯನಗರ ಸ್ವಾಗತಿಸಿ, ಸಂಘದ ಖರ್ಚು ವೆಚ್ಚವನ್ನು ಮಂಡಿಸಿದರು. ಸಂಘದ ಗೌರವಾಧ್ಯಕ್ಷರಾಗಿ ಗಿರಿರಾಜ್ ಬಾರಿತ್ತಾಯ, ಅಧ್ಯಕ್ಷರಾಗಿ ವಿನಯ್ ಹೆಗ್ಡೆ ನಾರಾವಿ ಮತ್ತು ಕಾರ್ಯದರ್ಶಿಯಾಗಿ ದಯಾನಂದ್ ಸಂಜಯನಗರ ಇವರನ್ನೂ ಮುಂದುವರಿಸುವುದೆಂದು ತೀರ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷರಾಗಿ ಗಣೇಶ್ ಕಾಣಾಲ್, ರಫೀಕ್ ಬಾಂಬಿಲ, ಕೋಶಾಧಿಕಾರಿಯಾಗಿ ಜಯಕುಮಾರ್ ಕಲ್ಲಗುಡ್ಡೆ , ಜೊತೆ ಕಾರ್ಯದರ್ಶಿಯಾಗಿ ರೋಹಿತ್ ಧರ್ಮಸ್ಥಳ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಂಘದ ಸಲಹೆಗಾರರಾಗಿ ವಸಂತ್ ಮಜಲ್, ಮಂಜುನಾಥ್ ಕಾಮತ್, ಜನಾರ್ಧನ ಗೌಡ, ವಿಶ್ವನಾಥ್ ಲಾಯಿಲ, ರಾಜಪ್ರಕಾಶ್ ಪಡ್ಡಾಯಿ, ಕಾರ್ಯಕಾರಿಣಿ ಸದಸ್ಯರಾಗಿ ನವಾಝ್ , ಅಧಿಷ್ ಕಾಮತ್,ರಾಘವೇಂದ್ರ, ಮನೋಜ್, ದಿಶಾಂತ್ ಮಿತ್ತಮಾರ್, ಸುಜಿತ್ ಚಂದ್ರಪಾಲ್, ಗಣೇಶ್ ಲಾಯಿಲ, ಧನಂಜಯ್ ರಾವ್, ನಝೀರ್ ಶಕ್ತಿನಗರ, ರವಿ ಗುಂಪಲಾಜೆ, ಸಹದೇವ್ ಉಜಿರೆ ಆಯ್ಕೆಯಾದರು. ಸಭೆಯಲ್ಲಿ ಮಾಜಿ ಶಾಸಕ ದಿವಂಗತ ವಸಂತ ಬಂಗೇರ ಇವರಿಗೆ ನುಡಿನಮನ ಸಲ್ಲಿಸಲಾಯಿತು.

Related posts

ಬಿಜೆಪಿ ಬೆಳ್ತಂಗಡಿ ಮಂಡಲದ ಹಿಂದುಳಿದ ವರ್ಗಗಳ ಮೊರ್ಚಾದ ಉಪಾಧ್ಯಕ್ಷರಾಗಿ ರಾಜೇಶ್ ಪೂಜಾರಿ ಮೂಡುಕೋಡಿ

Suddi Udaya

ಸಾಂಸ್ಕೃತಿಕ ಸ್ಪರ್ಧೆ: ವಾಣಿ ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya

ಕೊಯ್ಯೂರು ಸ.ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ಸುಲ್ಕೇರಿ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಕಲ್ಮಂಜ: ಡಾ| ಉದಯ ಹೆಬ್ಬಾರ್ ನಿಧನ

Suddi Udaya

ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಂದಾರು ಗ್ರಾಮ

Suddi Udaya
error: Content is protected !!