ಬೆಳ್ತಂಗಡಿ; ಲಯನ್ಸ್ ಕ್ಲಬ್ ಬೆಳ್ತಂಗಡಿ, ಲಯನ್ಸ್ ಜಿಲ್ಲೆ 317 ಡಿ, ಪ್ರಾಂತ್ಯ 12, ವಲಯ ಎರಡರ 2024-25 ನೇ ಸಾಲಿನ ಅಧ್ಯಕ್ಷರಾಗಿ ದೇವದಾಸ್ ಶೆಟ್ಟಿ ಹಿಬರೋಡಿ, ಕಾರ್ಯದರ್ಶಿಯಾಗಿ ಕಿರಣ್ ಕುಮಾರ್ ಶೆಟ್ಟಿ ಮತ್ತು ಕೋಶಾಧಿಕಾರಿಯಾಗಿ ಅಮಿತಾನಂದ ಹೆಗ್ಡೆ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸುವರ್ಣ ಮಹೋತ್ಸವ ವರ್ಷ ಆಚರಿಸಿ ಜಿಲ್ಲೆಯಲ್ಲಿ ಎರಡನೇ ಬಾರಿಗೆ ಪ್ರಥಮ ಪ್ರಶಸ್ತಿಯ ಗರಿಯೊಂದಿಗೆ ಮುನ್ನಡೆಯುತ್ತಿರುವ ಬೆಳ್ತಂಗಡಿ ಲಯನ್ಸ್ ಕ್ಲಬ್ ನ 2023-24 ನೇ ಸಾಲಿನ ಅಧ್ಯಕ್ಷ ಉಮೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಿ ಘೋಷಿಸಲಾಯಿತು.
ನಿಕಟಪೂರ್ವ ಅಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ, ಜೊತೆ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಬಳಂಜ, ಉಪಾಧ್ಯಕ್ಷರುಗಳಾಗಿ ಮುರಳಿ ಬಲಿಪ, ವಿನ್ಸೆಂಟ್ ಟಿ ಡಿಸೋಜಾ, ಸುರೇಶ್ ಶೆಟ್ಟಿ ಲಾಯಿಲ, ಶಿವಕಾಂತೇ ಗೌಡ ಮತ್ತು ತುಕಾರಾಮ ಬಿ, ಎಲ್‌ಸಿಎಫ್ ಸಂಯೋಜಕ ರಾಜು ಶೆಟ್ಟಿ ಬೆಂಗೆತ್ಯಾರು, ಕಾರ್ಯಕ್ರಮ ಸಂಯೋಜಕ ವಸಂತ ಶೆಟ್ಟಿ, ಸೇವಾ ವಿಭಾಗದ ಸಂಯೋಜಕ ಅನಂತಕೃಷ್ಣ ಕೆ, ಬುಲೆಟಿನ್ ಸಂಪಾದಕರಾಗಿ ಕೆ ಕೃಷ್ಣ ಆಚಾರ್ಯ, ಸದಸ್ಯತನ ಅಭಿವೃದ್ಧಿ ಅಧಿಕಾರಿಯಾಗಿ ದೇವಿಪ್ರಸಾದ್ ಬೊಳ್ಮ, ಲಾಂಗೂಲ ಚಾಲಕರಾಗಿ ನಾಣ್ಯಪ್ಪ ನಾಯ್ಕ್ ಕೆ, ಪತ್ರಿಕಾ ಪ್ರತಿನಿಧಿ ಅಶ್ರಫ್ ಆಲಿಕುಂಞಿ ಮುಂಡಾಜೆ, ವ್ಯವಹಾರ ಸಂವಹನಾ ಅಧಿಕಾರಿ ಧರಣೇಂದ್ರ ಕೆ ಜೈನ್, ಕ್ರೀಡಾ ಸಂಯೋಜಕ ಪ್ರಭಾಕರ ಗೌಡ ಬೊಳ್ಮ, ಕೃಷಿ ಸಂಯೋಜಕಿ ಸುಶೀಲಾ ಎಸ್ ಹೆಗ್ಡೆ, ಸಾಂಸ್ಕೃತಿಕ ಸಂಯೋಜಕ ನಿತ್ಯಾನಂದ ನಾವರ, ತರಬೇತು ಸಂಯೋಜಕ ರಘುರಾಮ ಶೆಟ್ಟಿ, ಶಿಕ್ಷಣ ಸಂಯೋಜಕ ಲಕ್ಷ್ಮಣ ಪೂಜಾರಿ, ಪಿಆರ್‌ಒ ಸುಭಾಷಿಣಿ, ಸ್ಥಾಪಕ ಸದಸ್ಯರುಗಳಾಗಿ ಎಂ.ಜಿ ಶೆಟ್ಟಿ ಮತ್ತು ವಿ. ಆರ್ ನಾಯಕ್ ಇವರನ್ನು ಆರಿಸಲಾಯಿತು. ನಿರ್ದೇಶಕರಾಗಿ ಲಕ್ಷ್ಮೀನಾರಾಯಣ ರಾವ್ ಪಿ, ರಘುರಾಮ ಗಾಂಭೀರ, ಜಯಂತ ಶೆಟ್ಟಿ ಕುಂಟಿನಿ, ಅಶೋಕ್ ಕುಮಾರ್ ಬಿ.ಪಿ, ಪಾಲಾಕ್ಷ ಪಿ ಸುವರ್ಣ, ಸುರೇಂದ್ರ ಎಸ್ ಮಡಂತ್ಯಾರು, ಜಯರಾಮ ಭಂಡಾರಿ, ಪಿ.ಹೆಚ್ ಪ್ರಕಾಶ ಶೆಟ್ಟಿ ನೊಚ್ಚ, ರಾಮಕೃಷ್ಣ ಗೌಡ, ಮೇದಿನಿ ಡಿ ಗೌಡ, ಮತ್ತು ಹೇಮಂತ ರಾವ್ ಯರ್ಡೂರು ಇವರು ಆಯ್ಕೆಯಾದರು.
ಉಳಿದಂತೆ ಎಲ್ಲರನ್ನೂ ಸದಸ್ಯರಾಗಿ ಪರಿಗಣಿಸಲಾಯಿತು.