27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಸ್.ಡಿ.ಎಂ ಪ.ಪೂ‌ ಕಾಲೇಜಿನ‌ ಕನ್ನಡ ಸಂಘ ಉದ್ಘಾಟನೆ

ಬೆಳ್ತಂಗಡಿ: ಕನ್ನಡ ಸಂಘದ ಚಟುವಟಿಕೆ ಉದ್ಘಾಟನಾ ಸಮಾರಂಭಕ್ಕೆ ಮಾತ್ರ ಸೀಮಿತವಾಗದೆ ಇಡೀ ವರ್ಷ ಕವಿಗೋಷ್ಠಿ, ಚಿಂತನ ಮಂಥನ, ಕವಿ ವಿಮರ್ಷೆ, ಭಿತ್ರಿ ಪತ್ರ ರಚನೆ, ವ್ಯಕ್ತಿ ಆಧರಿತ ಉಪನ್ಯಾಸ ಮಾಲಿಕೆ ಮುಂತಾದ ಯೋಜನೆಗಳೊಂದಿಗೆ ನಡೆದು ವರ್ಷಾಂತ್ಯಕ್ಕೆ ‘ವಿದ್ಯಾರ್ಥಿ ಸಮ್ಮೇಳನ’ ರೀತಿಯಲ್ಲಿ ಸಮಾರೋಪಗೊಳ್ಳುವಂತಾಗಬೇಕು ಎಂದು ಕಸಾಪ ಸಂಘ ಸಂಸ್ಥೆಗಳ ಪ್ರತಿನಿಧಿ, ಪತ್ರಕರ್ತ ಅಚ್ಚು ಮುಂಡಾಜೆ ಅಭಿಪ್ರಾಯಪಟ್ಟರು.

ಉಜಿರೆ ಎಸ್ ಡಿ ಎಂ ಪ.ಪೂ ಕಾಲೇಜಿನಲ್ಲಿ ಜು.10 ರಂದು ನಡೆದ ಕನ್ನಡ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ವಿಚಾರಗಳನ್ನೇ ಸಂವೇದನಾ ಶೀಲ ಮನೋಭಾವದಿಂದ ಕಂಡು ಲೇಖನ, ಕವನಗಳ ಮೂಲಕ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುವಂತಾಬೇಕು. ಪದಗಳ ಸಂಗ್ರಹಕ್ಕಾಗಿ ಓದುವ ಹವ್ಯಾಸ ಬಹುಮುಖ್ಯ. ಇಂಗ್ಲೀಷ್ ನಲ್ಲಿ ಕಲಿತರೆ ಮಾತ್ರ ಉನ್ನತ ಅವಕಾಶ ಎಂಬ ಮೊದಲಿಸುವಿಕೆ ತೊಲಗಿಸಿ ಕನ್ನಡಕ್ಕೂ ಭವಿಷ್ಯವಿದೆ ಎಂದು ತಮ್ಮ ಬರಹ, ವಿಮರ್ಷೆ, ಕವನ, ಸಾಹಿತ್ಯ‌ ರಚನೆ‍ಯ ಮೂಲಕ ತೋರಿಸಿಕೊಡಬಹುದು ಎಂದರು. ಭಾಷಣದ ಕೊನೆಗೆ ಅವರು ಸ್ವರಚಿತ ಕವನ ವಾಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಮಾತನಾಡಿ, ಇಂತಹಾ ಸಂಘಗಳಿಂದ ವಿದ್ಯಾರ್ಥಿಗಳಲ್ಲಿ ವಿಚಾರ ಆಸಕ್ತಿ ಹಾಗೂ ಪ್ರತಿಭೆ ಹೊರಬರಲು ಕಾರಣವಾಗುತ್ತದೆ. ಇದೂ ಅಲ್ಲದೆ ವರ್ಷ ಸ್ಪರ್ಧೆ, ಭಿತ್ತಿ‌ಪತ್ರಿಕೆ ‌ಮೊದಲಾದವುಗಳ ಮೂಲಕ ಅವರನ್ನು ತೊಡಗಿಸಿಕೊಳ್ಳುವಂತೆ ಮಾಡುತ್ತೇವೆ ಎಂದರು.

ವೇದಿಕೆಯಲ್ಲಿ ಕಾಲೇಜಿನ ಉಪಪ್ರಾಂಶುಪಾಲ‌ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಾಜೇಶ್ ಬಿ ಉಪಸ್ಥಿತರಿದ್ದರು.
ಹಸೀನಾ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು. ಸಂಕೇತ್ ಸ್ವಾಗತಿಸಿದರು. ಕುಶ ಅತಿಥಿ ಪರಿಚಯ ಮಾಡಿದರು. ಸಾಕ್ಷಿ ನಿರೂಪಿಸಿದರು. ತೇಜನ್ ವಂದಿಸಿದರು.

Related posts

ಬೆಳ್ತಂಗಡಿ ವಕೀಲರ ಸಂಘದ ಚುನಾವಣೆ: ಅಧ್ಯಕ್ಷರಾಗಿ ವಸಂತ ಮರಕ್ಕಡ, ಕಾರ್ಯದರ್ಶಿಯಾಗಿ ನವೀನ್ ಬಿ.ಕೆ ಆಯ್ಕೆ

Suddi Udaya

ನ.29: ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ನೆರಿಯ, ಪುದುವೆಟ್ಟು, ಮುಂಡಾಜೆ, ಕಲ್ಮಂಜದಲ್ಲಿ ಜನಸ್ಪಂದನಾ ಸಭೆ

Suddi Udaya

ಕಾಯರ್ತಡ್ಕದ ಅಂಗರಂಡ ನಿವಾಸಿ ಮುತ್ತಮ್ಮ ನಿಧನ

Suddi Udaya

ಬೆಳ್ತಂಗಡಿ ರಾಮ ಭಕ್ತರಿಂದ ರಾಮೋತ್ಸವ ಸಂಭ್ರಮ: ಅಯೋಧ್ಯ ಕರ ಸೇವೆಯಲ್ಲಿ ಭಾಗವಹಿಸಿದ ಚಂದ್ರಶೇಖರ್ ಕಣ್ಣಾಜೆರವರಿಗೆ ಗೌರವಾರ್ಪಣೆ

Suddi Udaya

ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ರಾಮ ನಗರ ಮೈರಲ್ಕೆ ಓಡಿಲ್ನಾಳ ವರ್ಷಾವಧಿ ಜಾತ್ರೋತ್ಸವ

Suddi Udaya

ಶ್ರೀ ಗುರುದೇವ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

Suddi Udaya
error: Content is protected !!