30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಂಘ-ಸಂಸ್ಥೆಗಳು

ಜು.11: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 15ನೇ ನೂತನ ಶಾಖೆ ಮಡಂತ್ಯಾರಿನಲ್ಲಿ ಉದ್ಘಾಟನೆ

ಮಡಂತ್ಯಾರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ಇದರ 15ನೇ ನೂತನ ಮಡಂತ್ಯಾರು ಶಾಖೆಯ ಉದ್ಘಾಟನಾ ಸಮಾರಂಭವು ಜು.11ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಜರುಗಲಿದೆ.
ದೀಪ ಪ್ರಜ್ವಲನೆ ಮತ್ತು ಶಾಖೆಯ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ನಡುಬೊಟ್ಟು ಧರ್ಮದರ್ಶಿ ರವಿ ಎನ್. ನಡುಬೊಟ್ಟು ನೆರವೇರಿಸಲಿದ್ದಾರೆ.


ಭದ್ರತಾ ಕೊಠಡಿ ಉದ್ಘಾಟನೆಯನ್ನು ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರು ಫಾ| ಸ್ಟ್ಯಾನಿ ಗೋವಿಯಸ್ ನೆರವೇರಿಸಲಿದ್ದಾರೆ.
ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಹೆಚ್.ಎನ್. ರಮೇಶ್, ಮಾಲಾಡಿ ಗ್ರಾ.ಪಂ. ಅಧ್ಯಕ್ಷ ಪುನೀತ್ ಕುಮಾರ್ ಮಡಂತ್ಯಾರು, ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷೆ ರೂಪಾ ನವೀನ್ ಭಾಗವಹಿಸಲಿದ್ದಾರೆ.


ಪುತ್ತೂರು ವಾಣಿಜ್ಯ ತೆರಿಗೆ ಅಧಿಕಾರಿ ಯತೀಶ್ ಸಿರಿಮಜಲು, ಬಂಟ್ವಾಳ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಯ್ಯ ಹನೈನಡೆ, ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ಉದಯ ಬಿ.ಕೆ. ವಕೀಲರು, ಮಾಲಾಡಿ ಗ್ರಾ.ಪಂ. ಸದಸ್ಯ ರಾಜೇಶ್ ಕೊಡ್ಯೇಲು ಭಾಗವಹಿಸಲಿದ್ದಾರೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸಹಕಾರ ಸಂಘದ ಉಪಾಧ್ಯಕ್ಷ ದಾಮೋದರ್ ವಿ, ನಿರ್ದೇಶಕರಾದ ಬಿ.ಎಸ್. ಕುಲಾಲ್, ಗಣೇಶ್ ಪಿ., ಹೆಚ್. ಪದ್ಮ ಕುಮಾರ್, ಶಿವಪ್ಪ ಮೂಲ್ಯ, ಸೇಸಪ್ಪ ಕುಲಾಲ್, ಪ್ರಶಾಂತ ಬಂಜನ್, ನಾಗೇಶ್ ಕುಲಾಲ್, ಸಚ್ಚಿದಾನಂದ ಡಿ., ಶ್ರೀಮತಿ ಜಯಶ್ರೀ ಎಸ್., ಶ್ರೀಮತಿ ಶುಭ ಎ. ಬಂಜನ್, ಶಾಖಾ ಪ್ರಬಂಧಕ ರಕ್ಷಿತ್ ಕೆ. ಹಾಗೂ ಸಿಬ್ಬಂದಿಗಳು ಉಪಸ್ಥಿತರಿರುವರು.

Related posts

ಉಜಿರೆ: ಬೆನಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

Suddi Udaya

ಸುಲ್ಕೇರಿ ಶ್ರೀರಾಮ ಶಾಲೆಯ ನೂತನ ಶಾಲಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ಉದ್ಯಮಿ ವಾಸುದೇವ ಗೌಡ ರಿಗೆ ಸನ್ಮಾನ

Suddi Udaya

ಮಿತ್ತಬಾಗಿಲು ಸ.ಹಿ.ಪ್ರಾ. ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಖೇಲೋ ಇಂಡಿಯಾ ವೇಟ್  ಲಿಫ್ಟಿಂಗ್ ಚಾಂಪಿಯನ್ ಷಿಪ್ ನಲ್ಲಿ: ನಿಡ್ಲೆಯ ಪ್ರತ್ಯುಶ್ ರವರಿಗೆ ಕಂಚಿನ ಪದಕ

Suddi Udaya

ನಡ: ಪದ್ಮನಾಭ ಗೌಡರ ಕೈಬೆರಳು ಕಬ್ಬು ಜ್ಯೂಸ್ ಯಂತ್ರಕ್ಕೆ ಸಿಲುಕಿ ನಜ್ಜುಗುಜ್ಜು

Suddi Udaya
error: Content is protected !!