ಹೊಸಂಗಡಿ : ಹೊಸಂಗಡಿ ಗ್ರಾಮ ಪಂಚಾಯತದ 2024-25ನೇ ಸಾಲಿನ ಮೊದಲನೇ ಹಂತದ ಗ್ರಾಮ ಸಭೆಯು ಜು.11ರಂದು ಗ್ರಾ. ಪಂ. ಅಧ್ಯಕ್ಷ ಜಗದೀಶ್ ಹೆಗ್ಡೆ ರವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ತೋಟಗಾರಿಕ ಇಲಾಖಾ ಹಿರಿಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಭಾಗವಹಿಸಿ ಗ್ರಾಮ ಸಭೆಯನ್ನು ಮುನ್ನಡೆಸಿದರು.
ತಿನ್ನುವ ಆಹಾರ ಕಳಪೆ ಆಗಬಾರದು, ಹೋಟೆಲ್ ಗಳಲ್ಲಿ ಕಳಪೆ ಮಟ್ಟದ ಎಣ್ಣೆಗಳನ್ನು ಆಹಾರಗಳಿಗೆ ಬಳಸುತ್ತಿದ್ದಾರೆ. ಇದನ್ನು ನಿಲ್ಲಿಸಬೇಕು. ಹಾಗೂ ಕಳಪೆ ಮಟ್ಟದ ತುಪ್ಪ ಈ ಪ್ರದೇಶದಲ್ಲಿ ಮಾರಾಟ ಆಗುತ್ತಿದೆ ಇದು ಆರೋಗ್ಯಕ್ಕೆ ನೇರ ಪರಿಣಾಮ ಬೀರುತ್ತಿದೆ. ಹೊಸಂಗಡಿಯ ಎಷ್ಟೋ ಹೋಟೆಲ್ ಗಳಲ್ಲಿ ಬಚ್ಚಲು ಗುಂಡಿಗಳಿಲ್ಲ ಎಂದು ಗ್ರಾಮಸ್ಥ ಸತೀಶ್ ಆರೋಪಿದರು.
ಶಾಲೆಗಳಲ್ಲಿ ಅಡುಗೆ ಕೆಲಸದ ಮಹಿಳೆಯರಿಗೆ ಕೊಡುವ ವೇತನ ಸಾಕಾಗುವುದಿಲ್ಲ, ವೇತನ ಹೆಚ್ಚಿಸಬೇಕು. ಬಡಕೋಡಿ ಸರಕಾರಿ ಶಾಲೆಗೆ ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕಕ್ಕೆ ಗ್ರಾಮಸ್ಥರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಆಗ್ರಹಿಸಿದರು.
2023-24ನೇ ಸಾಲಿನ ಪಂಚಾಯತ್ ನಿಧಿಯಿಂದ ಪ. ಜಾತಿ ಪ. ಪಂಗಡದ ನೂರಕ್ಕಿಂತಲೂ ಅಧಿಕ ಕುಟುಂಬಗಳಿಗೆ ನೀರಿನ ಡ್ರಮ್ ನೀಡಲಾಯಿತು.
ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶಾಂತ, ಪಂಚಾಯತ್ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಸಿಬ್ಬಂದಿಗಳು, ಗ್ರಾಮಸ್ಥರು ಹಾಜರಿದ್ದರು.
ಪಂಚಾಯತ್ ಕಾರ್ಯದರ್ಶಿ ಕಾಂತಪ್ಪ ಸ್ವಾಗತಿಸಿ, ವಾರ್ಡ್ ಸಭೆಯಲ್ಲಿ ಬಂದ ಬೇಡಿಕೆಗಳನ್ನು ಮಂಡಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಜಮಾ ಖರ್ಚು ಮತ್ತು ಅನುಪಾಲನ ವರದಿ ವಾಚಿಸಿ, ಧನ್ಯವಾದಗೈದರು.