September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಣಿಯೂರು ಸ.ಉ.ಪ್ರಾ. ಶಾಲೆಯಲ್ಲಿ ಪೋಕ್ಸೋ ಕಾಯಿದೆಯ ಜಾಗೃತಿ ಅಭಿಯಾನ

ಕಣಿಯೂರು : ಅಪ್ರಾಪ್ತ ವಯಸ್ಕ ಮಕ್ಕಳ ಮೇಲೆ ಪೋಷಕರು ಹೆಚ್ಚು ಗಮನಹರಿಸಬೇಕು ಅವರು ಹೊರಗಿನ ಯಾವುದೇ ಆಮಿಷಗಳಿಗೆ ಬಲಿಯಾಗದೆ ಸುರಕ್ಷತೆಯಿಂದ ಇರುವಂತೆ ನೋಡಿಕೊಳ್ಳಬೇಕೆಂದು ಉಪ್ಪಿನಂಗಡಿ ಎಎಸ್.ಐ ಕವಿತ ರವರು ಕಿವಿಮಾತು ಹೇಳಿದರು.

ಅವರು ಕಣಿಯೂರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ನಡೆದ ಪೋಕ್ಸೋ ಕಾಯಿದೆಯ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಲ್ಲಿ ಒಳ್ಳೆಯ ಸ್ಪರ್ಶ, ಕೆಟ್ಟ ಸ್ಪರ್ಶಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು. ನೆರೆಹೊರೆ, ಶಾಲೆ, ಸಾರ್ವಜನಿಕ ಸ್ಥಳಗಳಲ್ಲಿ ಏನಾದರೂ ಲೈಂಗಿಕ ದೌರ್ಜನ್ಯ ನಡೆದರೆ ಅದನ್ನು ಪೋಷಕರಲ್ಲಿ ಹಂಚಿಕೊಳ್ಳುವಂತೆ ತಿಳಿಸಿದರು.

ಯುವಕ ಯುವತಿಯರು ಸೋಶಿಯಲ್ ಮೀಡಿಯಾ ಬಳಸುವಾಗ ಯಾವುದೇ ರೀತಿಯ ಪ್ರಚೋದನಾತ್ಮಕ ಸಂಗತಿಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಪೋಕ್ಸೋ ಕಾಯಿದೆ ಮಕ್ಕಳಿಗೆ ತುಂಬಾ ಉಪಕಾರಿಯಾಗಿದ್ದು ಯಾವುದೇ ಸಂದರ್ಭಗಳಲ್ಲಿ ದೌರ್ಜನ್ಯ ವಾಗಿದೆ ಎಂದು ಕಂಡುಬಂದರೆ ನಿಮ್ಮ ಪೋಷಕರಿಗೆ ತಿಳಿಸಿ ಮತ್ತು ಭಯ ಪಡದೆ ದೂರು ದಾಖಲಿಸಿ ನ್ಯಾಯ ಪಡೆಯಬೇಕು .ನಮ್ಮ ಇಲಾಖೆ ಯಾವುದೇ ಸಂದರ್ಭದಲ್ಲೂ ನಿಮ್ಮ ಸಹಕಾರಕ್ಕೆ ಬರುತ್ತದೆ ಎಂದರು.


ಪೋಕ್ಸೋ ಕಾಯಿದೆಯ ಬಗ್ಗೆ ಮಕ್ಕಳಿಗೆ ಶಾಲೆಯಲ್ಲಿಯೇ ಹೆಚ್ಚು ತಿಳುವಳಿಕೆ ಮೂಡಿಸಿ ಮಕ್ಕಳಿಗೆ ಸಮಾಜದಲ್ಲಿ ಯಾವುದೇ ದೌರ್ಜನ್ಯ ವಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಆರಕ್ಷಕ ಠಾಣೆಯ ಗಜೇಂದ್ರ, ರಾಮಣ್ಣ ಗೌಡ, ಪಂಚಾಯತ್ ಸದಸ್ಯರಾದ ಯಶೋಧರ ಶೆಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಬಾಲಕೃಷ್ಣ ಕುರಿಯಾಡಿ, ಮುಖ್ಯ ಶಿಕ್ಷಕರಾದ ರಶ್ಮಿ ಶೆಟ್ಟಿ. ಎಸ್.ಡಿ.ಎಂ.ಸಿ ಯ ಸರ್ವ ಸದಸ್ಯರು. ಪೋಷಕರು .ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಶ್ರೀಮತಿ ಪುಷ್ಪಲತ ನಿರೂಪಿಸಿದರು. ಶ್ರೀಮತಿ ಅನುಷಾ ವಂದಿಸಿದರು.

Related posts

ಮಿತ್ತಬಾಗಿಲು ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷರಿಗೆ ಸನ್ಮಾನ

Suddi Udaya

ಎಸ್.ಡಿ.ಎಂ ಸೈನಾಥಾನ್ 2026 – ‘ಎ ರನ್ ಟು ಹಾನರ್ ಅವರ್ ಹೀರೋಸ್’;

Suddi Udaya

ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಕಾಲೇಜಿಗೆ ಮತ್ತೊಮ್ಮೆ ಶ್ರೇಷ್ಠತೆ ಸಾಬೀತು

Suddi Udaya

ಪುದುವೆಟ್ಟು: ಮಡ್ಯದಿಂದ ಹೊಳೆಯವರೆಗಿನ ಪಂಚಾಯತ್ ರಸ್ತೆಯ ಅತಿಕ್ರಮಣ: ಜೆಸಿಬಿ ಮೂಲಕ ಪೊಲೀಸ್ ರಕ್ಷಣೆಯೊಂದಿಗೆ ಗ್ರಾಮ ಪಂಚಾಯತ್ ನಿಂದ ತೆರವು ಕಾರ್ಯ

Suddi Udaya

ಬೆಳ್ತಂಗಡಿ ಮುಳಿಯ ಗೋಲ್ಡ್ & ಡೈಮಂಡ್ಸ್ ಸಂಸ್ಥೆ ವತಿಯಿಂದ ಮುಂಡೂರು ಸ.ಕಿ.ಪ್ರಾ. ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ

Suddi Udaya

ವಲಯಮಟ್ಟದ ಪ್ರತಿಭಾ ಕಾರಂಜಿ : ಬೆಳ್ತಂಗಡಿ ಶ್ರೀ ಧ. ಮಂ. ಆಂ.ಮಾ. ಶಾಲೆಗೆ ಹಲವಾರು ಪ್ರಶಸ್ತಿ

Suddi Udaya
error: Content is protected !!