September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಶುಭಾರಂಭ

ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 15ನೇ ನೂತನ ಶಾಖೆ ಮಡಂತ್ಯಾರಿನಲ್ಲಿ ಉದ್ಘಾಟನೆ

ಮಡಂತ್ಯಾರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ಇದರ 15ನೇ ನೂತನ ಮಡಂತ್ಯಾರು ಶಾಖೆಯ ಉದ್ಘಾಟನಾ ಸಮಾರಂಭವು ಜು.11ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು.

ನೂತನ ಶಾಖೆಯ ಉದ್ಘಾಟನೆಯನ್ನು ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರು ಫಾ| ಸ್ಟ್ಯಾನಿ ಗೋವಿಯಸ್
ನೆರವೇರಿಸಿ ಶುಭಹಾರೈಸಿದರು.

ಬಂಟ್ವಾಳ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಯ್ಯ ಹನೈನಡೆ ದೀಪ ಬೆಳಗಿಸಿ ನೂತನ ಸಂಸ್ಥೆಗೆ ಶುಭ ಕೋರಿದರು.

ಭದ್ರತಾ ಕೊಠಡಿ ಉದ್ಘಾಟನೆಯನ್ನು ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪಾ ನವೀನ್ ನೇರವೇರಿಸಿದರು. ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ ಅಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ಮಾಲಾಡಿ ಗ್ರಾ.ಪಂ. ಅಧ್ಯಕ್ಷ ಪುನೀತ್ ಕುಮಾರ್ ಮಡಂತ್ಯಾರು,ಪುತ್ತೂರು ವಾಣಿಜ್ಯ ತೆರಿಗೆ ಅಧಿಕಾರಿ ಯತೀಶ್ ಸಿರಿಮಜಲು, ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ಉದಯ ಬಿ.ಕೆ. ವಕೀಲರು, ಮಾಲಾಡಿ ಗ್ರಾ.ಪಂ. ಸದಸ್ಯ ರಾಜೇಶ್ ಕೊಡ್ಯೇಲು,ನೂತನ್ ಕ್ಲೋತ್ ಸೆಂಟರ್ ಮಾಲಕ ಪ್ರಕಾಶ್ ರೊಡ್ರಿಗಸ್, ಪ್ರೇಮಾನಂದ್ ಉಪಸ್ಥಿತರಿದ್ದರು ‌

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಜನಾರ್ದನ್, ಸಹಕಾರ ಸಂಘದ ಉಪಾಧ್ಯಕ್ಷ ದಾಮೋದರ್ ವಿ, ನಿರ್ದೇಶಕರಾದ ಬಿ.ಎಸ್. ಕುಲಾಲ್, ಗಣೇಶ್ ಪಿ., ಹೆಚ್. ಪದ್ಮ ಕುಮಾರ್, ಶಿವಪ್ಪ ಮೂಲ್ಯ, ಸೇಸಪ್ಪ ಕುಲಾಲ್, ಪ್ರಶಾಂತ ಬಂಜನ್, ನಾಗೇಶ್ ಕುಲಾಲ್, ಸಚ್ಚಿದಾನಂದ ಡಿ., ಶ್ರೀಮತಿ ಜಯಶ್ರೀ ಎಸ್., ಶ್ರೀಮತಿ ಶುಭ ಎ. ಬಂಜನ್, ಶಾಖಾ ಪ್ರಬಂಧಕ ರಕ್ಷಿತ್ ಕೆ. ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಕುತ್ಲೂರು ಸ.ಉ.ಪ್ರಾ. ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿಗೆ ಗೌರವ

Suddi Udaya

ಜೆಡಿಎಸ್ ಅಭ್ಯರ್ಥಿಯಾಗಿ ಅಶ್ರಫ್ ಆಲಿಕುಂಞಿ ನಾಮಪತ್ರ ಸಲ್ಲಿಕೆ

Suddi Udaya

ಮೈರೋಳ್ತಡ್ಕ ಶಾಲಾ ಅಮೃತಮಹೋತ್ಸವ ಪ್ರಯುಕ್ತ ಆಧಾರ್ ನೋಂದಣಿ-ತಿದ್ದುಪಡಿ ಕಾರ್ಯಕ್ರಮ

Suddi Udaya

ಪಡಂಗಡಿ ಮಹಿಳಾ ಗ್ರಾಮಸಭೆ: ಮಹಿಳಾ ಸ್ವಚ್ಛತಾಗಾರರಿಗೆ ಗೌರವ ಸನ್ಮಾನ ಮತ್ತು ಸಮವಸ್ತ್ರ ವಿತರಣೆ

Suddi Udaya

ಜು.11: ಉಜಿರೆಯಲ್ಲಿ ಹೆಗ್ಡೆ ಮೆಡಿಕಲ್ಸ್ ಶುಭಾರಂಭ

Suddi Udaya

ಸರಣಿ ಕಳ್ಳತನಗೈಯ್ಯುತ್ತಿದ್ದ ಅಂತರ್ ಜಿಲ್ಲಾ ಕಳ್ಳನ ಬಂಧನ: ಕಾರ್ಕಳ ತಾಲೂಕು ನಿಟ್ಟೆ ಅಜ್ಜೊಟ್ಟು ನಿವಾಸಿ ಸುರೇಶ ಕೆ ಪೂಜಾರಿ ಬಂಧಿತ ಆರೋಪಿ

Suddi Udaya
error: Content is protected !!