September 6, 2026
ಸಾಧಕರು

ಸಿಎ ಪರೀಕ್ಷೆಯಲ್ಲಿ ಮುಂಡಾಜೆಯ ಅಶ್ವಥ್ ಎಸ್ ಉತ್ತೀರ್ಣ

ಬೆಳ್ತಂಗಡಿ :ಅಖಿಲ ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆ 2024 ಇದರ ವತಿಯಿಂದ ಮೇ ತಿಂಗಳಿನಲ್ಲಿ ನಡೆದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಮುಂಡಾಜೆಯ ದಿ.‌ ಶಿವರಾಮ ಗೊಲ್ಲ ಮತ್ತು ಭಾಗೀರಥಿ ದಂಪತಿ ಪುತ್ರ ಅಶ್ವಥ್ ಎಸ್ ಅವರು ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ.

ಇವರು ಮಂಗಳೂರಿನ ಪ್ರಖ್ಯಾತ ಸಿ.ಎ ಗಣೇಶ್ ರಾವ್ ಪಿ ಕದ್ರಿ ಅವರ ಜೊತೆ ತರಬೇತಿ ಪಡೆದು ಪರೀಕ್ಷೆ ಎದುರಿಸಿ ಯಶಸ್ಸು ಸಾಧಿಸಿದ್ದಾರೆ. ಆರ್ಟಿಕಲ್‌ಶಿಪ್ ಅನ್ನೂ ಅಲ್ಲೇ ಪೂರೈಸಿದ್ದಾರೆ.
ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು
ಮುಂಡಾಜೆ ಸರಸ್ವತಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ, ಪ್ರೌಢ ಮತ್ತು ಪ.ಪೂ ಶಿಕ್ಷಣವನ್ನು ಎಸ್‌ಡಿಎಂ ಹೈಸ್ಕೂಲ್ ಮತ್ತು ಕಾಲೇಜು ಉಜಿರೆಯಲ್ಲಿ ಹಾಗೂ ಬಿ.ಕಾ‌ಂ ಪದವಿಯನ್ನು ಕೆನರಾ ಕಾಲೇಜು ಮಂಗಳೂರು ಇಲ್ಲಿ ಪೂರೈಸಿರುತ್ತಾರೆ.
ಅತ್ಯುತ್ತಮ ಕ್ರೀಡಾಪಟು ಕೂಡ ಆಗಿರುವ ಅವರು ಶೆಟ್ಲ್ ಬ್ಯಾಡ್ಮಿಂಟನ್ ನಲ್ಲಿ
ರಾಜ್ಯ ಮಟ್ಟದ ವರೆಗೆ, ಹಾಗೂ ಕ್ರಿಕೆಟ್ ನಲ್ಲಿ ಮಂಗಳೂರು ಯುನಿವರ್ಸಿಟಿಯನ್ನು ಪ್ರತಿನಿಧಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
ಅವರ ತಾಯಿ ಭಾಗೀರಥಿ ಅವರು ಲ್ಯಾಂಪ್ ಸೊಸೈಟಿಯಲ್ಲಿ ಪಿಗ್ಮಿ ಸಂಗ್ರಾಹಕರಾಗಿದ್ದು, ಸಹೋದರಿ ನಿಟ್ಟೆ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿ ಪ್ರಸ್ತುತ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.

Related posts

ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಕಡಮ್ಮಾಜೆ ಫಾರ್ಮ್ಸ್ ನ ದೇವಿಪ್ರಸಾದ್ ಕೆ. ಗೌಡರಿಗೆ ಕನ್ನಡಿಗ-2026 ಪ್ರಶಸ್ತಿ

Suddi Udaya

ಬಳಂಜ ಶಿಕ್ಷಕರ ಸಹಕಾರಿ ಬ್ಯಾಂಕ್‌ನ ನಿವೃತ್ತ ಅಧಿಕಾರಿ ರವೀಂದ್ರ ಶೆಟ್ಟಿ ರವರಿಗೆ “ಚುಟುಕು ಚಿನ್ಮಯಿ” ಗೌರವ ಪ್ರಶಸ್ತಿ

Suddi Udaya

ಭುಜಬಲಿ ಧರ್ಮಸ್ಥಳ ರವರಿಗೆ “ಶ್ರೀ ಯಕ್ಷಾಂಜನೆಯ ಪ್ರಶಸ್ತಿ” ಪ್ರದಾನ

Suddi Udaya

ಅಂಡಿಂಜೆ ಸಂಜೀವಿನಿ ಒಕ್ಕೂಟದ ಸದಸ್ಯೆ ಮಲ್ಲಿಕಾ ಎಸ್.ರಿಗೆ ಯಶಸ್ವಿ ಮಹಿಳಾ ಉದ್ಯಮಿ-2026ಪ್ರಶಸ್ತಿ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Suddi Udaya

ನಿವೃತ್ತ ಯೋಧ ಡಾ.ಕೆ.ಎಸ್ ಗೋಪಾಲಕೃಷ್ಣ ಕಾಂಚೋಡು ಅವರಿಗೆ ‘ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ

Suddi Udaya
error: Content is protected !!