September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತಣ್ಣೀರುಪಂತ ಪ್ರಾ.ಕೃ.ಪ.ಸ. ಸಂಘದ ಮಹಾಸಭೆ: ರೂ.276ಕೋಟಿ ವ್ಯವಹಾರ, ರೂ.1.15ಕೋಟಿ ಲಾಭ, ಸದಸ್ಯರಿಗೆ ಶೇ.12 ಡಿವಿಡೆಂಡ್

ಕಲ್ಲೇರಿ: ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯು ಜು. 13ರಂದು ಸಂಘದ ಹೊಸ ಕಟ್ಟಡದ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಜಗದೀಶ್ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ 2023-24ನೇ ಸಾಲಿನಲ್ಲಿ ಸಂಘವು ರೂ.276ಕೋಟಿ ವ್ಯವಹಾರ ನಡೆಸಿ ರೂ.1.15ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ 12% ಡಿವಿಡೆಂಡ್ ಘೋಷಣೆ ಮಾಡಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಂದ್ರ ಪ್ರಸಾದ್ ವಾರ್ಷಿಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ತಾಜುದ್ದೀನ್, ನಿರ್ದೇಶಕರಾದ ರೋಹಿತ್ ಶೆಟ್ಟಿ, ಲಿಂಗಪ್ಪ ನಾಯ್ಕ, ಶ್ರೀಧರ ಗೌಡ, ಜಯಂತಿ ಪಾಲೇದು, ಓಬಯ್ಯ ಪೂಜಾರಿ, ಪುಷ್ಪಲತಾ, ಶೂರ,

ಕಳೆದ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತು ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಮತ್ತು 10 ಮಂದಿ ಸಾಧಕರಿಗೆ ಸನ್ಮಾನಿಸಲಾಯಿತು.

ನಿರ್ದೇಶಕ ಪೂವಪ್ಪ ಬಂಗೇರ ಸ್ವಾಗತಿಸಿ, ಯುವರಾಜ್ ಅನರ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಜಯಂತಿ ಪಾಲೆದು ಧನ್ಯವಾದವಿತ್ತರು

Related posts

ತುಮಕೂರು ಕುಚ್ಚಂಗಿ ಕೆರೆಯ ಬಳಿ ಮೂವರ ಶವ ಸುಟ್ಟು ಹೋದ ರೀತಿಯಲ್ಲಿ ಪತ್ತೆ: ಮೂವರು ಬೆಳ್ತಂಗಡಿ ತಾಲೂಕಿನಿಂದ ನಾಪತ್ತೆಯಾದವರದ್ದು ಇರಬಹುದೆಂಬ ಶಂಕೆ

Suddi Udaya

ರಾಷ್ಟ್ರೀಯ ಹೆದ್ದಾರಿ ಬದಿ ತ್ಯಾಜ್ಯ

Suddi Udaya

ಶೌರ್ಯ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್: ಉಜಿರೆ ಅನುಗ್ರಹ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ನಿಶಾನ್ ಎಚ್ ಪೂಜಾರಿ ಗೆ ಚಿನ್ನದ ಪದಕ

Suddi Udaya

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಉದ್ಯಮಶೀಲತಾಭಿವೃದ್ಧಿ ತರಬೇತಿಯ ಸಮಾರೋಪ

Suddi Udaya

ಧಾರ್ಮಿಕ ಚಿಂತಕ ನಿರಂಜನ್ ಜೈನ್ ಕುದ್ಯಾಡಿಯವರಿಗೆ ಸನ್ಮಾನ

Suddi Udaya

ಶಾಸಕ ಹರೀಶ್ ಪೂಂಜರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya
error: Content is protected !!