26.5 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶೌರ್ಯ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್: ಉಜಿರೆ ಅನುಗ್ರಹ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ನಿಶಾನ್ ಎಚ್ ಪೂಜಾರಿ ಗೆ ಚಿನ್ನದ ಪದಕ

ಬೆಳ್ತಂಗಡಿ : ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯಾ ಕರಾಟೆ ಮಂಗಳೂರು ಡೋಜೋ ಸೆ.6ರಂದು ಮಂಗಳೂರು ಕುಲಶೇಖರ ಕಾರ್ಡೆಲ್ ಚರ್ಚ್ ಗ್ರೌಂಡ್ ನಲ್ಲಿ ಆಯೋಜಿಸಿದ ಶೌರ್ಯ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್ ಷಿಪ್-2024ರಲ್ಲಿ ಉಜಿರೆ ಅನುಗ್ರಹ ಆಂಗ್ಲಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿ ನಿಶಾನ್ ಎಚ್ ಪೂಜಾರಿ ರವರು ಕಟಾದ ವಿಭಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿದ್ದಾರೆ.

ಅವರಿಗೆ ಶಿಹಾನ್ ಅಬ್ದುಲ್ ರಹಮಾನ್ ತರಬೇತಿ ನೀಡಿದ್ದರು. ಅವರು ಉಜಿರೆಯ ಬರಮೇಲು ನಿವಾಸಿ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷ ಹರೀಶ್ ಕುಮಾರ್ ಬರಮೇಲು ಮತ್ತು ಶ್ರೀಮತಿ ಯಾಧವಿ ದಂಪತಿಯ ಪುತ್ರ.

ಸಮಾರಂಭದಲ್ಲಿ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಅಧ್ಯಕ್ಷ ಈಶ್ವರ ಕಟೀಲ್ ಮತ್ತು ಅತಿಥಿಗಳು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.

Related posts

ಓಡಿಲ್ನಾಳ ಸ. ಉ. ಪ್ರಾ. ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ

Suddi Udaya

ಕೊಕ್ಕಡ : ಗಾಳಿ ಮಳೆಗೆ ಹಾರಿ ಹೋದ ಮನೆಯ ಛಾವಣಿ

Suddi Udaya

ಮಡಂತ್ಯಾರು ಬಸವನಗುಡಿ ಬಳಿ ಪ್ರತ್ಯಕ್ಷಗೊಂಡ ಬೃಹತ್ ಹೆಬ್ಬಾವು: ಹಾವನ್ನು ಹಿಡಿದು ಕಾಡಿಗೆ ಬಿಟ್ಟ ಉರಗ ತಜ್ಞೆ ಆಶಾ ಯಾನೆ ಶೋಭಾ ಕುಪ್ಪೆಟ್ಟಿ

Suddi Udaya

ಡಾ|| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸಿದ್ಧಶ್ರೀ ಪ್ರಶಸ್ತಿ

Suddi Udaya

ಧರ್ಮಸ್ಥಳ: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಧರ್ಮಸ್ಥಳ ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

Suddi Udaya
error: Content is protected !!