25.7 C
ಪುತ್ತೂರು, ಬೆಳ್ತಂಗಡಿ
March 7, 2026
ಅಪರಾಧ ಸುದ್ದಿ

ಗುಂಡ್ಯ ಬಳಿ ಟ್ರಕ್ ಕಾರಿಗೆ – ಡಿಕ್ಕಿ ಗೇರುಕಟ್ಟೆ ಪರಿಸರದ ಐವರಿಗೆ ಗಾಯ:ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು

ಬೆಳ್ತಂಗಡಿ: ಟ್ರಕ್ ವೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸಹಿತ ಮೂವರು ಗಂಭೀರ ಗಾಯಗೊಂಡು ತಾಯಿ ಮಗುವಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಹೆಚ್.ಪಿ.ಸಿ.ಎಲ್.ಸಂಸ್ಥೆಯಲ್ಲಿ ಲೈನ್ ವಾಕರ್ ಗುತ್ತಿಗೆ ಆಧಾರದಲ್ಲಿ ಉದ್ಯೋಗಿ ಗೇರುಕಟ್ಟೆ ಸಮೀಪದ ಯೋಗೀಶ್ ಗೌಡ ಬೆಂಗಳೂರಿನಲ್ಲಿರುವ ಹುಂಡೈ ಶೋ ರೂಮ್ ನಿಂದ ಐ. ಟೆನ್ .(ಹಳೆಯ) ಕಾರನ್ನು ಎರಡು ದಿನಗಳ ಹಿಂದೆ ಖರೀದಿಸಿ ಬೆಂಗಳೂರು, ತಿರುಪತಿ ಹಾಗೂ ಪುಣ್ಯ ಕ್ಷೇತ್ರ ಗಳಿಗೆ ಭೇಟಿ ನೀಡಿ ಕಳೆದ ರಾತ್ರಿ ಬೆಂಗಳೂರಿನಿಂದ ಊರಿಗೆ ಬರುವ ದಾರಿಯಲ್ಲಿ ಈ ಘಟನೆ ಸಂಭವಿಸಿದೆ.

ಕಾರು ಮಾಲಕ ಚಿಕ್ಕಪ್ಪ ನ ಮಗ ಹರೀಶ್ (ಕಾರು ಚಾಲಕ) ಯೋಗೀಶ ಗೌಡ ನ ತಂಗಿ ಗಂಡ (ಬಾವ) ಲೋಕೇಶ ಯಾನೆ ಹರೀಶ್ ಗೌಡ ಹಾಗೂ ಚಾಲಕ ಹರೀಶ ಗೌಡರ ಪತ್ನಿ ತಾರಾ ಓರ್ವ ಮಗಳು ಕಾರಿನಲ್ಲಿ ಪ್ರಯಾಣಿಸುತ್ತಿದರು.
ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾ
ಳಾಗಿದ್ದು ಇಬ್ಬರು ಚಿಕ್ಕಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಧರ್ಮಸ್ಥಳ: ಮೃತ ದೇಹಗಳನ್ನು ಹೂತು ಹಾಕಿದ ದೂರು ಪ್ರಕರಣ ಕೇಸ್ ಫೈಲ್ ಪಡೆಯಲು ಧರ್ಮಸ್ಥಳ ಠಾಣೆಗೆ ಬಂದ ಎಸ್.ಐ.ಟಿ. ತನಿಖಾಧಿಕಾರಿ ಜಿತೇಂದ್ರ ದಯಾಮ

Suddi Udaya

ಧರ್ಮಸ್ಥಳ: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

Suddi Udaya

ಗಾಂಜಾ ನಶೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಯುವಕ ಪೊಲೀಸ್ ವಶ: ಚಿಕ್ಕಮಗಳೂರು ದೊನಿಗದ್ದೆ ನಿವಾಸಿ ಸಂತೋಷ್ ಬಂಧನ

Suddi Udaya

ಮುಂಡಾಜೆ ಸೀಟು ಬಳಿ ಬೊಲೇರೋ ಬೈಕ್ ಗೆ ಡಿಕ್ಕಿ : ಶಾಲಾ ಬಾಲಕಿ ಆಸ್ಪತ್ರೆಯಲ್ಲಿ ಮೃತ್ಯು

Suddi Udaya

ಪಿಕಪ್ ಗೂಡ್ಸ್ ವಾಹನ ಕಳ್ಳತನ ಪ್ರಕರಣ: ಆರೋಪಿಗಳನ್ನು ಬಂಧಿಸಿದ ಪೊಲೀಸರು

Suddi Udaya

ಬೆಳ್ತಂಗಡಿ ಬ್ಯಾಟರಿ ಅಂಗಡಿಗೆ ಕನ್ನ ಹಾಕಿದ ಕಳ್ಳರು: ಅಂಗಡಿ ಶಟರ್ ಮುರಿದು ಒಳಹೋಗಲು ಪ್ರಯತ್ನ, ಗಾಳಿ-ಮಳೆಗೆ ಸಿಸಿ ಕ್ಯಾಮರಾ ಬಂದ್ ಮಾಡಿದ್ದರಿಂದ ಕಳ್ಳರ ಚಹರೆ ಪತ್ತೆಯಾಗಿಲ್ಲ.

Suddi Udaya
error: Content is protected !!