ಶಿಶಿಲ ಅಡ್ಡಹಳ್ಳ ಎಂಬಲ್ಲಿ ರಸ್ತೆಗೆ ಅಡ್ಡವಾಗಿ ಬಿದ್ದ ಬೃಹತ್ ಗಾತ್ರದ ಮರ: ಶೌರ್ಯ ವಿಪತ್ತು ತಂಡದ ಸದಸ್ಯರಿಂದ ಮರ ತೆರವು

Suddi Udaya

ಶಿಶಿಲ: ಜು.14ರಂದು ಸುರಿದ ವಿಪರೀತ ಗಾಳಿ ಮಳೆಗೆ ಶಿಶಿಲದ ಅಡ್ಡಹಳ್ಳ ಎಂಬಲ್ಲಿ ಬೃಹತ್ ಗಾತ್ರದ ಧೂಪದ ಮರವೊಂದು ಮುರಿದು ರಸ್ತೆಗೆ ಅಡ್ಡವಾಗಿ 11 kV ಹಾಗೂ LT ಲೈನ್‌ಗಳ ಮೇಲೆ ಬಿದ್ದು ಕೆಳಗೂ ಬೀಳದೆ ಅಪಾಯಕಾರಿಯಾಗಿ ನಿಂತಿದೆ.

ತಕ್ಷಣ ಸ್ವಯಂಸೇವಕ ಗಂಗಾಧರ ಬದಿಗುಡ್ಡೆ ತಂಡದ ಸದಸ್ಯರಿಗೆ ಹಾಗೂ ಸಂಯೋಜಕಿಯವರಿಗೆ ಮಾಹಿತಿಯನ್ನು ನೀಡಿದರು.
ಮೇಲ್ವಿಚಾರಕಿ ಶ್ರೀಮತಿ ಶಶಿಕಲಾ ರವರ ಮಾರ್ಗದರ್ಶನದಲ್ಲಿ ಸಂಯೋಜಕಿ ಶ್ರೀಮತಿ ರಶ್ಮಿತಾರವರ ಕರೆಯ ಮೇರೆಗೆ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರಾದ ಶೀನಪ್ಪ ನಾಯ್ಕ್, ಕುಶಾಲಪ್ಪ ಗೌಡ, ಗಂಗಾಧರ ಬದಿಗುಡ್ಡೆ, ಸೋಮಶೇಖರ್ ಶಿಬಾಜೆ, ಅವಿನಾಶ್ ಭಿಡೆ, ಕಿರಣ್ ಸಂಕೇಶ, ರಮೇಶ ಬೈರಕಟ್ಟ ಸ್ಥಳಕ್ಕೆ ಧಾವಿಸಿ ಪವರ್‌ಮ್ಯಾನ್ ಸಂತೋಷ್ ಹಾಗೂ ಉಮೇಶ್ ಇವರ ಉಪಸ್ಥಿತಿಯಲ್ಲಿ ತಂತಿಯ ಮೇಲಿದ್ದ ಬೃಹತ್ ಮರವನ್ನು ತೆರವುಗೊಳಿಸಿದರು.

ತೆರವುಗೊಳಿಸಿದ ಮರದ ಒಂದು ಪಾರ್ಶ್ವ ಅಪಾಯಕಾರಿಯಾಗಿ ನಿಂತೇ ಇದ್ದು ಅದನ್ನು ದಯಮಾಡಿ ತೆರವುಗೊಳಿಸುವಂತೆ ಹತ್ತಿರದ ಮನೆಯವರಾದ ನಾರಾಯಣ ನಾಯ್ಕರವರು ತಂಡದವರಲ್ಲಿ ವಿನಂತಿಸಿದಾಗ ಕುಶಾಲಪ್ಪ ಗೌಡರು ತಮ್ಮ ಮರಹತ್ತುವ ಕೌಶಲ್ಯವನ್ನು ಉಪಯೋಗಿಸಿ ಮರದ ತುದಿಗೆ ಹಗ್ಗ ಕಟ್ಟಿ ಮರವನ್ನು ಆ ಕಡೆ ವಿದ್ಯುತ್ ಲೈನ್ ಈ ಕಡೆ ಮನೆಯ ನಡುವೆ ಸುರಕ್ಷಿತವಾಗಿ ಕತ್ತರಿಸಿ ಹಾಕಲಾಯಿತು.

Leave a Comment

error: Content is protected !!