ಬೆಳ್ತಂಗಡಿ: ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ 100ನೇ ಹುಟ್ಟುಹಬ್ಬದ ಅಂಗವಾಗಿ ಪ್ರೇಮ ತರು ಎಂಬ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಜುಲೈ 14 ರಂದು ಶ್ರೀರಾಘವೇಂದ್ರ ಮಠದ ಸುಂದರ ಪರಿಸರದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಮಿತಿ ಬೆಳ್ತಂಗಡಿ ಇವರ ವತಿಯಿಂದ ಜರಗಿಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನ ಲಾಯಿಲ ಬೆಳ್ತಂಗಡಿ ಇದರ ಅಧ್ಯಕ್ಷರು ನಿವ್ರತ್ತ ಎಸ್ ಪಿ ಪೀತಾಂಬರ ಹೆರಾಜೆಯವರು ಉದ್ಘಾಟಿಸಿ, ಪರಿಸರದ ಉಳಿವಿಗಾಗಿ ಸಸ್ಯ ಸಂಕುಲವನ್ನು ಬೆಳೆಸಿ ಮನುಕುಲಕ್ಕೆ ಪ್ರಧಾನ ಮಾಡುವ ಈ ರಾಷ್ಟ್ರೀಯ ಕಾರ್ಯಕ್ರಮ ಅತ್ಯಂತ ಔಚಿತ್ಯ ಪೂರ್ಣ ಮತ್ತು ಅನುಕರಣಿಯ ಉದಾತ್ತ ಸೇವಾ ಸಾಧನೆ ಎಂದು ಪ್ರಶಂಶಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಮಿತಿ ಬೆಳ್ತಂಗಡಿ ಇದರ ಪದಾಧಿಕಾರಿಗಳು ಹಾಗೂ ಶ್ರೀ ಗುರು ರಾಘವೇಂದ್ರ ಸೇವಾ ಪ್ರತಿಷ್ಠಾನದ ಪದಾಧಿಕಾರಿಗಳು ಪಾಲ್ಗೊಂಡು ಸಹಕಾರ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಜಾತಿಯ ಹಣ್ಣು ಹಾಗೂ ಔಷಧೀಯ ಗುಣವುಳ್ಳ ಸಸ್ಯಗಳನ್ನು ನೀಡಲಾಯಿತು ಮತ್ತು ವಿತರಣೆ ಮಾಡಲಾಯಿತು.
ಶ್ರೀಮತಿ ಉಮಾ ರಾವ್, ಶ್ರೀಮತಿ ಮೀನಾಕ್ಷಿ, ಶ್ರೀಮತಿ ಸುವರ್ಣ ಲಕ್ಷ್ಮಿ, ಶ್ರೀಮತಿ ಕುಸುಮಾವತಿ, ಶ್ರೀಮತಿ ಶಾಲಿನಿ, ಶ್ರೀ ಸಿಂಧೂರ್, ಶ್ರೀ ಪ್ರಸನ್ನ ಆಚಾರ್, ಶ್ರೀ ವಸಂತ, ಶ್ರೀ ಶಾಂತಪ್ಪ, ಇವರು ಸಮಿತಿಯ ಪರವಾಗಿ ಪಾಲ್ಗೊಂಡಿದ್ದರು.
ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಪ್ರತಿಷ್ಠಾನದ ಪರಾಧಿಕಾರಿಗಳಾದ ಶ್ರೀ ವಸಂತ ಸುವರ್ಣ, ಶ್ರೀ ಮಹಾಬಲ ಶೆಟ್ಟಿ, ಶ್ರೀ ಜಯರಾಮ ಬಂಗೇರ ಹೆರಾಜೆ, ಶ್ರೀ ಕೃಷ್ಣಶೆಟ್ಟಿ, ಇವರು ಸಹಕರಿಸಿದರು.
ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಶ್ರೀ ಅಕ್ಷಯ್ ಕುಮಾರ್ ಇವರು ವಹಿಸಿದ್ದರು.
ಬೆಳ್ತಂಗಡಿ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಸಂಚಾಲಕರಾದ ಶ್ರೀ ಎ ಕೃಷ್ಣಪ್ಪ ಪೂಜಾರಿ ಅವರು ಸ್ವಾಗತಿಸಿ ವಂದನಾರ್ಪಣೆ ಸಲ್ಲಿಸಿದರು.