April 2, 2025
ಅಪಘಾತವರದಿ

ತೆಂಕಕಾರಂದೂರು: ರಸ್ತೆಯ ಬದಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ

ಬೆಳ್ತಂಗಡಿ: ಗುರುವಾಯನಕೆರೆ ಕಡೆಯಿಂದ ನಾರಾವಿ ಕಡೆಗೆ ಬರುತ್ತಿದ್ದ ಕಾರು ರಸ್ತೆಯ ಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಜು.14ರಂದು ರಾತ್ರಿ ನಡೆದಿದೆ.

ತೆಂಕಕಾರಂದೂರು ನಿವಾಸಿ ಪೂರ್ಣೆಶ್(32), ರವರ ದೂರಿನಂತೆ, ಜು 14 ರಂದು ರಾತ್ರಿ, ತೆಂಕಕಾರಂದೂರು ಗ್ರಾಮದ ಆಲಡ್ಕ ಎಂಬಲ್ಲಿ, ಗುರುವಾಯನಕೆರೆ ಕಡೆಯಿಂದ ನಾರಾವಿ ಕಡೆಗೆ ಕಾರೊಂದನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ, ರಸ್ತೆಯ ಬದಿಯಲ್ಲಿ ನಿಂತಿದ್ದ ಧರ್ಣಪ್ಪ ಪೂಜಾರಿ ಎಂಬವರಿಗೆ ಡಿಕ್ಕಿ ಹೊಡೆಸಿ, ನಿಲ್ಲಿಸದೇ ಪರಾರಿಯಾಗಿರುತ್ತಾರೆ.

ಡಿಕ್ಕಿ ಹೊಡೆದ ಪರಿಣಾಮ ಧರ್ಣಪ್ಪ ಪೂಜಾರಿಯವರ ತಲೆಗೆ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದು, ಗಾಯಾಳು ಧರ್ಣಪ್ಪ ಪೂಜಾರಿಯವರು ಮಂಗಳೂರು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 61/2024 ಕಲಂ : 281, 125(B) BNS-2023 ಮತ್ತು ಕಲಂ 134 ( a & b) IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ನಾಲ್ಕೂರು : ಕುದ್ರೋಟ್ಟು ಮುಖ್ಯ ರಸ್ತೆಯಲ್ಲಿ ಪ್ರತ್ಯಕ್ಷವಾದ ಕಾಡುಕೋಣಗಳ ಹಿಂಡು

Suddi Udaya

ಕಣಿಯೂರು ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಾಗ ಪ್ರತಿಷ್ಠೆ

Suddi Udaya

ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಹೃದಯಾಘಾತದಿಂದ ನಿಧನ

Suddi Udaya

ಉಜಿರೆ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯ ಮಾಹಿತಿ ಕಾರ್ಯಗಾರ

Suddi Udaya

ಪಡ್ಡಂದಡ್ಕ ಮಿಲದುನ್ನೆಬಿ ಪ್ರಯುಕ್ತ ಮದರಸ ಮಕ್ಕಳ ಪ್ರತಿಭಾ ಪ್ರದರ್ಶನ

Suddi Udaya

ಕೊಕ್ರಾಡಿ ಸರಕಾರಿ ಪ.ಪೂ. ಕಾಲೇಜಿಗೆ ಶೇ. 98.50 ಫಲಿತಾಂಶ

Suddi Udaya
error: Content is protected !!