ಬೆಂಗಳೂರು: ರಾಜ್ಯದ ನಗರ ಪೌರಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆ ಪ್ರಕಟಿಸಿರುವ ಸರ್ಕಾರ, ಆಕ್ಷೇಪಣೆಗಳನ್ನು ಸಲ್ಲಿಸಲು ಹದಿನೈದು ದಿನಗಳ ಗಡುವು ನೀಡಿದೆ.
ರಾಜ್ಯದ 61 ನಗರಸಭೆಗಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಪರಿಶಿಷ್ಟ ಜಾತಿ ತಲಾ 5, ಪರಿಶಿಷ್ಟ ಜಾತಿ ಮಹಿಳೆ ತಲಾ 5, ಪರಿಶಿಷ್ಟ ಪಂಗಡ ತಲಾ 2. ಎಸ್‌ಟಿ ಮಹಿಳೆ ತಲಾ 2, ಬಿಸಿಎ ತಲಾ 7. ಬಿಸಿಎ ಮಹಿಳೆ ತಲಾ 6, ಬಿಸಿಬಿ ತಲಾ2, ಬಿಸಿಬಿ ಮಹಿಳೆ ತಲಾ 1, ಸಾಮಾನ್ಯ ತಲಾ 16. ಸಾಮಾನ್ಯ ಮಹಿಳೆ ತಲಾ 15 ಸ್ಥಾನಗಳನ್ನು ಮೀಸಲಿರಿಸಲಾಗುತ್ತದೆ.
ರಾಜ್ಯದ 123 ಪುರಸಭೆಗಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಗೆ ತಲಾ 11, ಎಸ್‌ಸಿ ಮಹಿಳೆಗೆ ತಲಾ 10, ಎಸ್‌ಟಿ ತಲಾ 5, ಎಸ್‌ಟಿ ಮಹಿಳೆ ತಲಾ 4, బిసిఎ ತಲಾ 12, ಬಿಸಿಎ ಮಹಿಳಾ ತಲಾ 12. ಬಿಸಿಬಿ ತಲಾ 3. బిసిబి ಮಹಿಳಾ ತಲಾ 3, ಸಾಮಾನ್ಯ ತಲಾ 31, ಸಾಮಾನ್ಯ ಮಹಿಳೆ ತಲಾ 31 ಸ್ಥಾನಗಳನ್ನು ಮೀಸಲಿಡಲಾಗುತ್ತದೆ