22.6 C
ಪುತ್ತೂರು, ಬೆಳ್ತಂಗಡಿ
May 22, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ರುಡ್ ಸೆಟ್ ಸಂಸ್ಥೆಯ ಹುಟ್ಟು ಹಬ್ಬ ಮತ್ತು ವಿಶ್ವ ಯುವ ಕೌಶಲ್ಯ ದಿನಾಚರಣೆ

ಉಜಿರೆ : ಹಸಿದವರಿಗೆ ಆಹಾರ ನೀಡಿದರೆ ಆ ಕ್ಷಣದ ಹಸಿವು ನಿಗಾಬಹುದು ಆದರೆ ತನ್ನ ಆಹಾರವನ್ನು ತಾನೇ ಸಂಪಾದನೆ ಮಾಡುವ ದಾರಿ ಮತ್ತು ಕೌಶಲ ನೀಡಿದರೆ ಅದು ಅವನ ಜೀವನಕ್ಕೆ ದಾರಿ ಆಗುತ್ತದೆ. ಎಂಬ ಮಾತಿನಂತೆ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ನಮ್ಮನಾಡಿನ ಯುವಜನತೆಗೆ ಅವರ ಜೀವನಕ್ಕೆ ಬೇಕಾದ ಕೌಶಲ್ಯವನ್ನು ಕಲಿಸುವ ಈ ರುಡ್ ಸೆಟ್ ಸಂಸ್ಥೆಯನ್ನು ಆರಂಭಿಸಿ ಮಾರ್ಗದರ್ಶನ ನೀಡಿದರು. ಇದು ದೇಶ ಅಥವಾ ಜಗತ್ತು ಆಲೋಚಿಸುವ ಮೊದಲು ಯೋಚಿಸಿದ ದಾರ್ಶನಿಕರು ಡಾ. ಡಿ.ವೀರೇಂದ್ರ ಹೆಗ್ಗಡೆಯವರು. ಈ ಹಿನ್ನಲೆಯಲ್ಲಿ ನಾವು ನಮ್ಮ ಕೌಶಲ್ಯದ ಬಲವರ್ಧನೆ ಪ್ರತಿ ನಿತ್ಯ ಮಾಡುತ್ತ ಇರಬೇಕು. ಇವತ್ತು ನಮ್ಮ ಮುಂದೆ ಸಾಧನಾ ಇದೆ ಆದರೆ ಅದನ್ನು ಬಳಸಿಕೊಳ್ಳುವ ಕೌಶಲ್ಯ ಬೆಳೆಸಿಕೊಳ್ಳಬೇಕು, ನಾವು ಬದಲಾವಣೆಗೆ ಸರಿಯಾಗಿ ನಮ್ಮ ಕೌಶಲ್ಯ ಅನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಇದಕ್ಕೆ ಬೇಕಾದ ಅವಕಾಶಗಳು ಇದೆ. ನಮ್ಮ ದೇಶದಲ್ಲಿ ಅತೀ ಯುವಜನರು ಇದ್ದಾರೆ ಅಂದರೆ ದುಡಿಯುವ ವಯಸ್ಸಿನವರು ಇದ್ದಾರೆ ಅದರೆ ಅವರಲ್ಲಿ ಕೌಶಲ್ಯ ಕಡಿಮೆ ಇದೆ ಅದನ್ನು ನಾವು ಬೆಳಸಿಕೊಳ್ಳಬೇಕು. ಇದರ ಕೆಲಸವನ್ನು ರುಡ್ ಸೆಟ್ ಸಂಸ್ಥೆ ಅತೀ ಅಮೂಲ್ಯವಾದ ಕೌಶಲ್ಯ ನೀಡುತ್ತದೆ. ಇಲ್ಲಿ ಎರಡು ಅಥವಾ ಮೂರು ವರ್ಷ ಗಳಲ್ಲಿ ನೀಡುವ ಕೌಶಲ್ಯ ವನ್ನು ರುಡ್ ಸೆಟ್ ಸಂಸ್ಥೆ ಕನಿಷ್ಠ 6 ರಿಂದ 45ದಿವಸಗಳಲ್ಲಿ ಯುವಜನರಿಗೆ ಕಲಿಸುತ್ತದೆ. ಜೊತೆಗೆ ಕಾಲಕ್ಕೆ ಕಾಲಕ್ಕೆ ಸರಿಯಾಗಿ ಕೌಶಲ್ಯವನ್ನು ಬೆಳಸಿ, ತನ್ನಳೊಗಿನ ಇಚ್ಛೆ ಉತ್ಕಟವಾಗಿ ಇರಬೇಕು ಇದು ಅಭಿವೃದ್ಧಿಗೆ ದಾರಿಯಾಗುತ್ತದೆ. ಎಂದು ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿಕಟಪೂರ್ವ ಪ್ರಾಶುಂಪಾಲರಾದ ಡಾ.ಜಯಕುಮಾರ್ ಶೆಟ್ಟಿ ಅವರು ಅಭಿಪ್ರಾಯ ಪಟ್ಟರು.

ಅವರು ಇಂದು2014ರಲ್ಲಿ ವಿಶ್ವ ಸಂಸ್ಥೆಯವರು ಫೋಷಿಸಿದಂತೆ ಜುಲೈ 15 ವಿಶ್ವ ಯುವ ಕೌಶಲ್ಯ ದಿನವನ್ನಾಗಿ ಆಚರಿಸಲಾಯಿತು. ಇದರ ಜೊತೆಗೆ ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಗಳ ಸಹಯೋಗದೊಂದಿಗೆ 1982 ಜುಲೈ 15ರಂದು ರುಡ್ ಸೆಟ್ ಸಂಸ್ಥೆ ಯನ್ನು ಆರಂಭಿಸಿದ ದಿನ ಸಹ ಆಗಿರುತ್ತದೆ. ಇದು ರುಡ್ ಸೆಟ್ ಸಂಸ್ಥೆ, ಉಜಿರೆ 42ನೇ ಹುಟ್ಟು ಹಬ್ಬ ಸಹ ಆಚರಿಸಲಾಯಿತು. ಇದರಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕೌಶಲ್ಯ ಮಹತ್ವದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳಿಗೆ ಕೆನರಾ ಬ್ಯಾಂಕಿನಲ್ಲಿ ಹೊಸತಾಗಿ ಆರಂಭಿಸಿದ ಜನಧನ್ ಖಾತೆಯ ಪುಸ್ತಕ ವಿತರಿಸಿ, ಸಾಮಾಜಿಕ ವಿಮೆಗಳು ಹಾಗೂ ಪಿಂಚಣಿ ಯೋಜನೆ ಬಗ್ಗೆ ಹಾಗೂ ಅದರ ಮಹತ್ವವನ್ನು ಉಜಿರೆ ಕೆನರಾ ಬ್ಯಾಂಕ್ ನ ಹಿರಿಯ ಪ್ರಬಂಧಕರಾದ ಜಯಂತ ಅಡಿಗ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜೇಯ ವಹಿಸಿದ್ದರು.

ರುಡ್ ಸೆಟ್ ಸಂಸ್ಥೆಯ ಕೇಂದ್ರ ಕಛೇರಿಯ ಹಿರಿಯ ಉಪನ್ಯಾಸಕಿ ಶ್ರೀಮತಿ ಅನುಸೂಯ ರೈ, ಉಪನ್ಯಾಸಕ ಲೋಹಿತ್ ಜೈನ್ ಉಪಸ್ಥಿತರಿದ್ದರು.

ಅತಿಥಿಗಳನ್ನು ಸಂಸ್ಥೆಯ ಹಿರಿಯ ಉಪನ್ಯಾಸಕರಾದ *ಅಬ್ರಹಾಂ ಜೇಮ್ಸ್* ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ವಂದಿಸಿದರು.

Related posts

ಹಣ ದ್ವಿಗುಣ ಮಾಡುವುದಾಗಿ ಮೋಸ ಮಾಡಿದ ಪ್ರಕರಣ: ನೊಂದ ಮಹಿಳೆ ವೀಟಾ ಮರೀನಾ ಡಿಸೋಜ ನದಿಗೆ ಹಾರಿ ಆತ್ಮಹತ್ಯೆ

Suddi Udaya

ಆರಂಬೋಡಿ: ಕುಂಟಾಲ ಪಲ್ಕೆ ಯುವತಿ ನಾಪತ್ತೆ

Suddi Udaya

ಧರ್ಮಸ್ಥಳ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

Suddi Udaya

ನೆರಿಯ: ಗಂಡಿಬಾಗಿಲು ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡ ಉದ್ಘಾಟನೆ

Suddi Udaya

ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ (ರಿ )ಬೆಳ್ತಂಗಡಿ ತಾಲೂಕು ಇವರ ವತಿಯಿಂದ ಆಟಿ ಅಮಾವಾಸ್ಯೆ ಪ್ರಯುಕ್ತ ರಾಜ ಕೇಸರಿ ಸಂಘಟನೆ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿಆಟಿದ ಕಷಾಯ.. ವಿತರಣಾ ಕಾರ್ಯಕ್ರಮ

Suddi Udaya

ಮನೆಯಲ್ಲಿ ಜಾರಿ ಬಿದ್ದು ತಲೆಗೆ ಏಟು: ಚಿಕಿತ್ಸೆ ಫಲಕಾರಿಯಾಗದೆ ಚಾರ್ಮಾಡಿ ಶಾಲಾ ಶಿಕ್ಷಕಿ ಸುಪ್ರಭಾ ಮೃತ್ಯು

Suddi Udaya
error: Content is protected !!