September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜು. 22-23: ಮುಗೇರಡ್ಕ ಸರಕಾರಿ ಶಾಲಾಭಿವೃದ್ಧಿಗೆ ವಿದ್ಯಾ ನಿಧಿ ಸಂಗ್ರಹಕ್ಕಾಗಿ 25 ಗಂಟೆಗಳ ಮ್ಯಾರಥಾನ್ ಯೋಗ ತರಬೇತಿ

ಬೆಳ್ತಂಗಡಿ : ಯೇನಪೋಯ ಮೆಡಿಕಲ್ ಕಾಲೇಜು, ಯೇನಪೋಯ ವಿಶ್ವವಿದ್ಯಾಲಯ ಸಂಸ್ಥೆಯ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಯೋಗದ ಜಾಗೃತಿ ಮೂಡಿಸಲು ಭವಿಷ್ಯದ ದುಃಖಗಳನ್ನು ದೂರ ಮಾಡಲು ಯೋಗ ಎಂಬ ಧ್ಯೇಯದೊಂದಿಗೆ ಮುಗೇರಡ್ಕ ಸರಕಾರಿ ಶಾಲಾಭಿವೃದ್ಧಿಗೆ ವಿದ್ಯಾ ನಿಧಿ ಸಂಗ್ರಹಕ್ಕಾಗಿ 25 ಗಂಟೆಗಳ ಮ್ಯಾರಥಾನ್ ಯೋಗ ತರಬೇತಿಯು ಜುಲೈ 22 ಸೋಮವಾರ ದಿಂದ ಜುಲೈ 23 ಮಂಗಳವಾರ 10 ಗಂಟೆಯವರೆಗೆ 25 ಗಂಟೆಗಳ ನಿರಂತರ ಯೋಗ ತರಬೇತಿ ನಡೆಯಲಿದೆ.

ಯೋಗ ಗುರು ಕುಶಾಲಪ್ಪ ಗೌಡ ರವರು ತಲಾ ಒಂದೂವರೆ ಗಂಟೆಯ 17 ಬ್ಯಾಚ್ ಗಳಲ್ಲಿ ತರಬೇತಿ ನೀಡಲಿದ್ದು, ಭಾಗವಹಿಸುವ ಶಿಬಿರಾರ್ಥಿಗಳಿಗೆ ರೂಪಾಯಿ 500 ಮೌಲ್ಯದ ಯೋಗ ಪುಸ್ತಕ, ಯೋಗ ಬಟ್ಟೆ, ಯೋಗ ಕ್ಯಾಲೆಂಡರ್,ಯೋಗ ಪ್ರಮಾಣ ಪತ್ರ ಮತ್ತು ಉಪಹಾರ ನೀಡಲಾಗುವುದು, ಮುಗೇರಡ್ಕ ಸರ್ಕಾರಿ ಶಾಲಾ ಸೇವಾ ಟ್ರಸ್ಟ್ ನಾ ವಿದ್ಯಾನಿಧಿಗಾಗಿ ಆಯೋಜಿಸಿರುವ ಈ ಶಿಬಿರಕ್ಕೆ ವಿದ್ಯಾರ್ಥಿಗಳಿಂದ ರೂಪಾಯಿ 100,ಸಾರ್ವಜನಿಕರಿಂದ ರೂಪಾಯಿ 200 ನ್ನು ದೇಣಿಗೆ ರೂಪದಲ್ಲಿ ಪಡೆಯಲಾಗುವುದು. ಮೂರು ವಿಶ್ವ ದಾಖಲೆಯ ಪ್ರಯತ್ನ, ಮ್ಯಾರಥಾನ್ ಯೋಗ ಶಿಬಿರ ತರಬೇತಿಯ ಮೂಲಕ ಮೂರು ವಿಶ್ವ ದಾಖಲೆಯನ್ನು ಸಾರಿಸಲು ಪ್ರಯತ್ನಿಸಲಾಗುವುದು, ಒಂದೇ ಯೋಗ ಗುರು, ಒಂದೇ ವೇದಿಕೆಯಲ್ಲಿ ನಿರಂತರ 25 ಗಂಟೆ ಯೋಗ ತರಬೇತಿ ನೀಡುವುದು,

ಈ ತರಬೇತಿಯಲ್ಲಿ 2500 ಕ್ಕೂ ಮಿಕ್ಕಿ ವಿವಿಧ ವೈದ್ಯಕೀಯ ವಿದ್ಯಾರ್ಥಿಗಳು ತರಬೇತಿ ಒಳಗಾಗುವುದು,4000ಕ್ಕೂ ಮಿಕ್ಕಿ ಯೋಗ ಶಿಬಿರಾರ್ಥಿಗಳಿಗೆ ತರಬೇತಿ ಪಡೆಯಲಿದ್ದಾರೆಂದು ಯೋಗ ಗುರು ಕುಶಾಲಪ್ಪ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಅಕೊಲೆಡ್ಸ್ ತರಗತಿಗಳಿಗೆ ಚಾಲನೆ

Suddi Udaya

ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರತಿಭಾ ಸಂಭ್ರಮ

Suddi Udaya

ಕೊಕ್ಕಡ: ಇತ್ತೀಚೆಗೆ ನಿಧನರಾದ ಅಜಯ್ ರವರ ಮನೆಗೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

Suddi Udaya

ಅನಾರೋಗ್ಯದಿಂದ ಬಳಲುತ್ತಿದ್ದ ಮೂರು ವರ್ಷದ ಹೆಣ್ಣು ಮಗು ಸಾವು

Suddi Udaya

ಬೆಳ್ತಂಗಡಿ: ಡಯಾಲಿಸಿಸ್ ಕೇಂದ್ರದ ಕೊರತೆಗಳಿಗೆ ಮುಕ್ತಿ : ಆರೋಗ್ಯ ಸಚಿವರು, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮತ್ತು ರೋಟರಿ ಸಂಸ್ಥೆಯವರಿಗೆ ಬಂಗೇರರವರಿಂದ ಅಭಿನಂದನೆ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ, ಮನೋಜ್ ಕುಮಾರ್ ಗಡಿಪಾರು ಪ್ರಕ್ರಿಯೆ ವಿರೋಧಿಸಿ ಖಂಡನಾ ಸಭೆ-ಹೋರಾಟಕ್ಕೆ ನಿರ್ಧಾರ

Suddi Udaya
error: Content is protected !!