24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜು.23 ದ.ಕ. ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪ‌ರ್ ಮತ್ತು ಕೃಷಿ ಮಜ್ದೂರ್ ಸಂಘದ ಯೂನಿಯನ್ ಉದ್ಘಾಟನೆ ಮತ್ತು ಕಾರ್ಮಿಕರ ಸಮಾವೇಶ ಹಾಗೂ ಬಿ.ಎಂ.ಎಸ್. ಸ್ಥಾಪನಾ ದಿನಾಚರಣೆ

ಉಜಿರೆ : ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪ‌ರ್ ಮತ್ತು ಕೃಷಿ ಮಜ್ದೂರ್ ಸಂಘ ಇದರ ಯೂನಿಯನ್ ಉದ್ಘಾಟನೆ ಮತ್ತು ಕಾರ್ಮಿಕರ ಸಮಾವೇಶ ಹಾಗೂ ಬಿ.ಎಂ.ಎಸ್. ಸ್ಥಾಪನಾ ದಿನಾಚರಣೆಯು ಜು.23 ರಂದು ಉಜಿರೆ ಶಾರದಾ ಮಂಟಪದಲ್ಲಿ ನಡೆಯಲಿದೆ.

ಉದ್ಘಾಟನೆಯನ್ನು ರಬ್ಬರ್ ಬೋರ್ಡ್ ನಿರ್ದೇಶಕ ಕೇಶವ ಭಟ್ ಮುಳಿಯ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ವಕೀಲರು, ರಬ್ಬರ್ ಟ್ಯಾಪರ್ ಮಜ್ದೂರ್ ಸಂಘದ ಅಧ್ಯಕ್ಷರು, ದ.ಕ. ಭಾರತೀಯ ಮಜ್ದೂರ್ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು. ವಹಿಸಲಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ, ಮಂಗಳೂರು ವಿಭಾಗದ ಪ್ರಚಾರ ಪ್ರಮುಖ್ ಸೂರಜ್ ಕುಮಾರ್ ಭೌದ್ಧಿಕ್ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಮಂಗಳೂರು ಕುದುರೆಮುಖ ಮಜ್ದೂರ್ ಸಂಘದ ಕಾರ್ಯಾಧ್ಯಕ್ಷ ಭಗವಾನ್‌ ದಾಸ್, ರಬ್ಬರ್ ಬೆಳೆ ಅಭಿವೃದ್ಧಿ ಅಧಿಕಾರಿ ರೋಶಿನಿ, ಬೆಳ್ತಂಗಡಿ ಕಾರ್ಮಿಕ ನಿರೀಕ್ಷಕ ಹರೀಶ ಎಸ್.ಎನ್, ಉಜಿರೆ ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕರು ಜಯಂತ, ಭಾರತೀಯ ಮಜ್ದೂರ್ ಸಂಘ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ಬೆಳ್ತಂಗಡಿ ಭಾರತಿಯ ಮಜ್ದೂರ್ ಸಂಘ ತಾಲೂಕು ಸಮಿತಿ ಅಧ್ಯಕ್ಷ ಉದಯ ಬಿ.ಕೆ, ಆರ್ಥಿಕ ಸಮಾಲೋಚಕರು ಶ್ರೀಮತಿ ಉಷಾ ನಾಯಕ್, ಮಂಗಳೂರು ನಿವೃತ್ತ ರಬ್ಬರ್ ಟ್ಯಾಪಿಂಗ್ ತರಬೇತಿ ಶಿಕ್ಷಕರು ರಾಘವನ್ ಮಾಸ್ಟರ್ ಉಪಸ್ಥಿತರಿರಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಹರೀಶ್ ಜೆ.ಕೆ, ಹರೀಶ್ ಬೈಲಬರಿ, ಶಶಿಕುಮಾರ್ ಸುಳ್ಯ,ಸ್ಟಾಲಿನ್, ನಾಗರಾಜ ಮಾಚಾರು ಸಹಕರಿಸಲಿದ್ದಾರೆ.

Related posts

ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಲಯದ ವಿದ್ಯಾರ್ಥಿ ಚಿರಾಯು.ಸಿ. ಕೊಕ್ಕಡ ಕರಾಟೆಯಲ್ಲಿ ರಾಜ್ಯಕ್ಕೆ ದ್ವಿತೀಯ

Suddi Udaya

ಶಿರ್ಲಾಲು ಯುವವಾಹಿನಿ ಸಂಚಲನ ಸಮಿತಿ ವತಿಯಿಂದ ಆರೋಗ್ಯ ನಿಧಿ ವಿತರಣೆ

Suddi Udaya

ಮುಂಡಾಜೆ ಕ್ರೈಸ್ಟ್ ಅಕಾಡೆಮಿಯಲ್ಲಿ ಐಸಿಎಸ್‌ಇ ಮಾನ್ಯತೆ ಘೋಷಣೆ ಮತ್ತು ಮಕ್ಕಳ ಪ್ರತಿಭಾ ಸಂಗಮ ಧ್ವನಿ -2023 ಕಾರ್ಯಕ್ರಮ

Suddi Udaya

ಅಪರಿಚಿತ ವ್ಯಕ್ತಿ ಮೃತ್ಯು: ವಿಳಾಸ ಪತ್ತೆಗಾಗಿ ಬೆಳ್ತಂಗಡಿ ಪೊಲೀಸರ ಮನವಿ

Suddi Udaya

ನಡ ಸ.ಪ.ಪೂ. ಕಾಲೇಜು ವಾರ್ಷಿಕ ಕ್ರೀಡಾಕೂಟ

Suddi Udaya

ರಾಜ್ಯ ಮಟ್ಟದ ಕರಾಟೆ: ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ವಿಶ್ವಾಸ್ ಶೆಟ್ಟಿಗೆ ಚಿನ್ನದ ಪದಕ

Suddi Udaya
error: Content is protected !!