25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಕುವೆಟ್ಟು: ಕರ್ತವ್ಯ ಲೋಪ ಎಸಗಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ: ಸಾಮಾನ್ಯ ಸಭೆ ಬಹಿಷ್ಕರಿಸಿದ ಸದಸ್ಯರು

ಬೆಳ್ತಂಗಡಿ: ಕರ್ತವ್ಯ ಲೋಪ ಎಸಗಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಮ್ಮಿಯಾಜ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾ.ಪಂ. ಸದಸ್ಯರು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ ಘಟನೆ ಜು.15ರಂದು ಕುವೆಟ್ಟು ಗ್ರಾ.ಪಂ.ನಲ್ಲಿ ನಡೆದಿದೆ.

ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಇಮ್ಮಿಯಾಜ್ ರವರು ಪಂಚಾಯತ್‌ ನ ಎಲ್ಲಾ ನಿರ್ಣಯಗಳನ್ನು ಮೀರಿ ಅಧಿಕಾರ ದುರುಪಯೋಗ ಮಾಡಿ ಕರ್ತವ್ಯ ಲೋಪ ಎಸಗಿದ್ದಾರೆ. ಅಲ್ಲದೇ ಆಡಳಿತ ಮಂಡಳಿಯ ಸದಸ್ಯರ ಹಕ್ಕು ಚ್ಯುತಿ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯತ್‌ 24 ಸದಸ್ಯರ ಪೈಕಿ 18 ಮಂದಿ ಸದಸ್ಯರು ಸಭೆ ಬಹಿಷ್ಕರಿಸಿದರು.

ಗ್ರಾ.ಪಂ.ಅಧ್ಯಕ್ಷೆ ಭಾರತಿ ಎಸ್.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಹಾಜರಾಗಿದ್ದ ಗಣೇಶ್ ಕೆ., ವೇದಾವತಿ, ಲಕ್ಷ್ಮೀಶ, ಆನಂದಿ, ವನಿತಾ, ವಿಜಯಲಕ್ಷ್ಮೀ, ಸದಾನಂದ ಮೂಲ್ಯ, ನಿತೇಶ್, ನಿತಿನ್, ಮಂಜುನಾಥ್, ರಚನಾ, ಪ್ರದೀಪ್ ಶೆಟ್ಟಿ, ಹೇಮಂತ್, ಉಷಾ, ಶಾಲಿನಿ, ಸುಮಂಗಲಾ, ಸಿಲ್ವೆಸ್ಟರ್ ಮೋನಿಸ್, ಆಶಾಲತಾ ಸಭೆಯನ್ನು ಬಹಿಷ್ಕರಿಸಿದರು.

ಆದರೆ ಸದಸ್ಯರಾದ ಮೈಮುನಿಸಾ, ಮಹಮ್ಮದ್ ಮುಸ್ತಾಫ, ಅಮಿನಾ, ಶಮೀಮುಲಾ ಕೆ. ಸಭೆಯಲ್ಲಿ ಮುಂದುವರಿದರು.ಆದರೆ ಕೋರಂ ಕೊರತೆ ಉಂಟಾದ ಹಿನ್ನಲೆಯಲ್ಲಿ ಅಧ್ಯಕ್ಷೆ ಭಾರತಿ ಎಸ್.ಶೆಟ್ಟಿ ಸಭೆಯನ್ನು ಮುಂದೂಡಿದರು.

Related posts

ಮಾದಕ ವಸ್ತು ಗಾಂಜಾ ಮಾರಾಟಕ್ಕೆ ಯತ್ನ: ಕುವೆಟ್ಟು ನಿವಾಸಿ ಮೊಹಮ್ಮದ್ ರಫೀಕ್ ಬಂಧನ

Suddi Udaya

ಲಾಯಿಲ: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಸಾವು

Suddi Udaya

ಹತ್ಯಡ್ಕ: ದರ್ಬೆತಡ್ಕ ಶ್ರೀಕಾಲ ಪರಶುರಾಮ ದೇವಸ್ಥಾನದ ಮಾಜಿ ಮೊಕ್ತೇಸರ ಕೃಷ್ಣಾನಂದ ಹೆಬ್ಬಾರ್ ನಿಧನ

Suddi Udaya

ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂರಿಂದ ಮತದಾನ

Suddi Udaya

ಕುಪೆಟ್ಟಿ-ಉಪ್ಪಿನಂಗಡಿ ರಸ್ತೆ ಅಭಿವೃದ್ಧಿಗೊಳಿಸುವಂತೆ ಬಿಜೆಪಿ ಪ್ರತಿಭಟನೆ

Suddi Udaya

ಶುಲ್ಕ ಪಾವತಿ ಮಾಡದ ಮನೆಯವರ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಿದ ಇಂದಬೆಟ್ಟು ಗ್ರಾಮ ಪಂಚಾಯತ್

Suddi Udaya
error: Content is protected !!