27.8 C
ಪುತ್ತೂರು, ಬೆಳ್ತಂಗಡಿ
May 19, 2025
Uncategorized

ಸುದ್ದಿ ಉದಯ ಫಲಶ್ರುತಿ: ಬಂದಾರು ಬೋಲೋಡಿ ಎಂಬಲ್ಲಿ ಗುಡ್ಡ ಕುಸಿತ ವರದಿ ಬೆನ್ನಲ್ಲೇ ಗ್ರಾ.ಪಂ. ನಿಂದ ತಕ್ಷಣ ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯ

ಬಂದಾರು : ಬಂದಾರು ಗ್ರಾಮದ ಮೈರೋಳ್ತಡ್ಕ, ಶಿವನಗರ – ಪೆರ್ಲಬೈಪಾಡಿ ಸಂಪರ್ಕಿಸುವ ಮುಖ್ಯ ರಸ್ತೆಯ ಬೋಲೋಡಿ ಎಂಬಲ್ಲಿನ ಸೇತುವೆ ಪಕ್ಕದಲ್ಲಿ ರಾತ್ರಿ ಸುರಿದ ವಿಪರೀತ ಮಳೆಯ ಪರಿಣಾಮ ಗುಡ್ಡ ಕುಸಿದು ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಈ ಬಗ್ಗೆ ಸುದ್ದಿ ಉದಯ ಆನ್ ಲೈನ್ ವರದಿ ಪ್ರಕಟಿಸಿದ ಕೂಡಲೇ ಸ್ಪಂದಿಸಿದ ಗ್ರಾ.ಪಂ. ನವರು ಜೆಸಿಬಿ ಮುಖಾಂತರ ಮಣ್ಣು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸ್ಥಳಕ್ಕೆ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ ರವರು ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಮುಗ್ರೋಡಿ ಕನ್ ಸ್ಟ್ರಕ್ಷನ್ ನವರಿಗೆ ತಿಳಿಸಿದಾಗ ಮಣ್ಣು ತೆರವು ಕಾರ್ಯಕ್ಕೆ ಸ್ಥಳಕ್ಕೆ ಎರಡೂ ಜೆಸಿಬಿ ಕಳುಹಿಸಿ ಮಣ್ಣು ತೆರವು ನಡೆಸಿದರು. ಸ್ಥಳಕ್ಕೆ ಬಂದಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ, ಪಂಚಾಯತ್ ಸದಸ್ಯೆ ಸುಚಿತ್ರ ಮುರ್ತಾಜೆ ಆಗಮಿಸಿ ಪರಿಶೀಲನೆ ನಡೆಸಿದರು.

Related posts

ಆಹಾರ ತಯಾರಿಕೆ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ: ಇನ್ನೆರಡು ದಿನಗಳಲ್ಲಿಆದೇಶ : ಸಚಿವ ದಿನೇಶ್ ಗುಂಡೂರಾವ್

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ ಓವರಾಲ್ ಚಾಂಪಿಯನ್ ಶಿಪ್

Suddi Udaya

ಸುರ್ಯ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಸ್ವಚ್ಚತಾ ಕಾರ್ಯಕ್ರಮ

Suddi Udaya

ನಾಲ್ಕೂರು: ನಿಟ್ಟಡ್ಕ, ಪುಣ್ಕೆದೊಟ್ಟು, ಪರಿಸರದಲ್ಲಿ ಹೆಚ್ಚಿದ ಚಿರತೆ ಕಾಟ, ಭಯಭೀತರಾದ ಗ್ರಾಮಸ್ಥರು

Suddi Udaya

ಹೆದ್ದಾರಿ ಬದಿ ಬೆಂಕಿ

Suddi Udaya

ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ಉಜಿರೆ ವಲಯ ಸಮಿತಿ ಮಹಾಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!