ಮದ್ದಡ್ಕ ಪರಿಸರದಲ್ಲಿ ಕಾಮಗಾರಿಯಲ್ಲಿ ನಿರ್ಮಿಸಿದ ಚರಂಡಿಯ ಒಳಗೆ ಕಿಡಿಗೇಡಿಗಳಿಂದ ತ್ಯಾಜ್ಯ ಕಸ ಎಸೆತ

Suddi Udaya

ಕುವೆಟ್ಟು: ಮದ್ದಡ್ಕ ಪರಿಸರದ ಹಲವು ಕಡೆ ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯಲ್ಲಿ ನಿರ್ಮಿಸಿದ ಚರಂಡಿಯ ಒಳಗೆ ತ್ಯಾಜ್ಯ ಕಸ ಬಾಟ್ಲಿಗಳನ್ನು ಸುರಿಯುತ್ತಿರುವುದು ಕಂಡು ಬಂದಿದೆ.

ಮದ್ದಡ್ಕ ಸಮೀಪದ ಸುಂಟಾನ್ ಗುರಿ ಎಂಬಲ್ಲಿ ಚರಂಡಿಯಲ್ಲಿ ಹಲವು ಕಡೆ ಕಸವು ಬಹಳಷ್ಟು ತುಂಬಿಕೊಂಡಿದ್ದು ಒಳಗೆ ನೀರು ನಿಂತು ಕೊಳೆತ ದುರುವಾಸನೆ ಬರುತ್ತಿದೆ. ಮಳೆಗಾಲದ ಸಂದರ್ಭದಲ್ಲಿ ರೋಗ ಹರಡುವ ಬೀತಿಯಲ್ಲಿದ್ದಾರೆ ಜನರು.

ಚರಂಡಿಯ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕೆಲವು ಕಡೆ ಚರಂಡಿಯನ್ನು ಮುಚ್ಚದೆ ಇದ್ದ ಕಾರಣ ಕಿಡಿ ಗೇಡಿಗಳು ಇದರ ಒಳಗೆ ತ್ಯಾಜ್ಯ ಸುರಿಯುತ್ತಿದ್ದು ತಕ್ಷಣ ಹೆದ್ದಾರಿ ಕಾಮಗಾರಿಯ ನಡೆಸುವ ಗುತ್ತಿಗೆದಾರರಿಗೆ ಸಂಬಂಧ ಪಟ್ಟ ಇಲಾಖೆಯವರು ಗಮನಕ್ಕೆ ತಂದು ಸಾರ್ವಜನಿಕರ ಆರೋಗ್ಯದ‌ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Comment

error: Content is protected !!