April 2, 2025
Uncategorized

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೊಸ ಅತ್ಯಾಧುನಿಕ ಸಿ-ಆರ್ಮ್ ಯಂತ್ರಕ್ಕೆ ಚಾಲನೆ

ಉಜಿರೆ: ಡಾ. ಡಿ ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಮಾತೃಶ್ರೀ ಹೇಮಾವತಿ ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 22.5 ಲಕ್ಷ ರೂಪಾಯಿ ಮೌಲ್ಯದ ಹೊಸ ಸೀಮೇನ್ಸ್ ಸಿಯೋಸ್ ಫಿಟ್ ಮೊಬೈಲ್ ಸಿ-ಆರ್ಮ್ ಯಂತ್ರವನ್ನು ಜು.17 ರಂದು ಅಳವಡಿಸಿ ಚಾಲನೆ ನೀಡಲಾಯಿತು.


ಸೀಮೇನ್ಸ್ ಸಿಯೋಸ್ ಫಿಟ್ ಮೊಬೈಲ್ ಸಿ-ಆರ್ಮ್ ಯಂತ್ರದ ಬಗ್ಗೆ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಮಾತನಾಡಿ ಸೀಮೇನ್ಸ್ ಸಿಯೋಸ್ ಫಿಟ್ ಮೊಬೈಲ್ ಸಿ-ಆರ್ಮ್ ಯಂತ್ರ ಎಕ್ಸ್-ರೇ ತಂತ್ರಜ್ಞಾನವನ್ನು ಆಧರಿಸಿದ ಸುಧಾರಿತ ವೈದ್ಯಕೀಯ ಚಿತ್ರಣವನ್ನು ಕೊಡಬಲ್ಲ ಸಾಧನವಾಗಿದೆ. ಮಂಗಳೂರಿನ ಕೆಲವು ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿರುವ ಈ ಯಂತ್ರ ಬೆಳ್ತಂಗಡಿ ತಾಲೂಕಿನಲ್ಲಿ ಮೊದಲ ಬಾರಿಗೆ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ.


ಈ ಯಂತ್ರ ಶಕ್ತಿಯುತ ಅತ್ಯಾಧುನಿಕ ಇಮೇಜಿಂಗ್, ನವೀನ ಟಚ್ ಮತ್ತು ಪ್ಲೇ ತಂತ್ರಜ್ಞಾನ ಹೊಂದಿದೆ. ಇದರಲ್ಲಿರುವ ಹೊಸ ತಂತ್ರಜ್ಞಾನದೊಂದಿಗೆ ದೃಶ್ಯಚಿತ್ರಗಳು ಹೆಚ್ಚು ವಿಕಸನಗೊಳ್ಳುತ್ತಿರುವ ದೃಶ್ಯಗಳನ್ನು ಕೊಡಬಲ್ಲ ಸಾಧನವಾಗಿದ್ದು, ಸೂಕ್ತವಾದ ವೈದ್ಯಕೀಯ ಫಲಿತಾಂಶಗಳ ಸಾಧನೆಗೆ ನೆರವಾಗುತ್ತದೆ.


ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 4 ಮಂದಿ ಮುಳೆ ಶಸ್ತ್ರಚಿಕಿತ್ಸಾ ತಜ್ಞರಿದ್ದು, ಇಲ್ಲಿ ಈಗಾಗಲೇ ಹಲವಾರು ಟೋಟಲ್ ನೀ ರಿಪ್ಲೇಸ್‌ಮೆಂಟ್ ಟೋಟಲ್ ಹಿಪ್ ರಿಪ್ಲೇಸ್‌ಮೆಂಟ್ ಹಾಗೂ ಮೂಳೆ ಮತ್ತು ಕೀಲುಗಳ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಪ್ರಸ್ತುತ ಅಳವಡಿಸಿರುವ ಈ ಯಂತ್ರ ಸೊಂಟ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ, ಗ್ಯಾಸ್ಟ್ರೋ ಕರುಳಿನ ಚಿಕಿತ್ಸೆ, ಎಂಡೋಸ್ಕೋಪಿಕ್, ಮೂತ್ರಶಾಸ್ತ್ರ, ನರಸಂಬಂಧಿ ಖಾಯಿಲೆ, ಹೃದಯದ ಶಸ್ತ್ರಚಿಕಿತ್ಸೆಯಲ್ಲಿ ಈ ಯಂತ್ರ ಅತೀ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು.

Related posts

ಬೆಳ್ತಂಗಡಿ: ಯೋಜನೆಯ ಕಚೇರಿ ಸಹಾಯಕರ ಮೂರು ದಿನದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ

Suddi Udaya

ನೇತ್ರಾವತಿ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಗಾತ್ರದ ಮರ: ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ತೆರವು ಕಾರ್ಯ

Suddi Udaya

ಸ್ತುತಿರವರ ಹುಟ್ಟುಹಬ್ಬದ ಪ್ರಯುಕ್ತ ಉರುಂಬಿದೊಟ್ಟು ಅಂಗನವಾಡಿಯ ಸುತ್ತ ಗಿಡಗಂಟಿಗಳ ಸ್ವಚ್ಛತೆ ಹಾಗೂ ತೆಂಗಿನ ಗಿಡ ನೆಡುವ ಮೂಲಕ ಆಚರಣೆ

Suddi Udaya

ಉಜಿರೆ ಗುರು ಮಂದಿರ ನಿರ್ಮಾಣದ ಸಮಾಲೋಚನೆ ಸಭೆ

Suddi Udaya

ಹಿಂದೂ ದೇವಾಲಯಗಳನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸಲು ಒಂದು ದಿನದ ಉಪವಾಸ ಸತ್ಯಾಗ್ರಹ

Suddi Udaya

ಗೇರುಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಮಾರಿಪೂಜೆ

Suddi Udaya
error: Content is protected !!