September 6, 2026
Uncategorized

ಹದಗೆಟ್ಟ ರಾಜ್ಯದ ಆರ್ಥಿಕತೆ ತುಂಬಲು ಕುಮ್ಕಿ ಭೂಮಿಯ ಕಬಳಿಕೆಗೆ ಸರಕಾರದ ಹುನ್ನಾರ: ಬಿಜೆಪಿ ರೈತ ಮೋರ್ಚಾ ಆಕ್ರೋಶ

ಬೆಳ್ತಂಗಡಿ: ಚುನಾವಣಾ ಸಂದರ್ದದಲ್ಲಿ ಅಧಿಕಾರಕ್ಕೇರಲು ಮತದಾರರಿಗೆ ಪೂರೈಸಲಾಗದಂತಹ ಅಮಿಷವನ್ನು ಪ್ರಣಾಳಿಕೆಯಲ್ಲಿ ಗ್ಯಾರಂಟಿಯನ್ನು ಘೋಷಿಸಿ ಈಗ ಅದನ್ನು ಪೂರೈಸಲಾಗದೆ ಅಸಾಧ್ಯವಾಗಿ ಇತ್ತ ಮೂಲ ಸೌಕರ್ಯಗಳಿಗೂ ಅನುದಾನ ಘೋಷಿಸದೆ ಅದಕ್ಕೆ ಅಡ್ಡ ಕತ್ತರಿಯಲ್ಲಿ ಸಿಲುಕಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರ ಹದೆಗೆಟ್ಟ ರಾಜ್ಯದ ಬೊಕ್ಕಸವನ್ನು ಭರ್ತಿ ಮಾಡಲು ಬಡ ರೈತರ ಕುಮ್ಕಿ ಭೂಮಿ ಕಬಳಿಕೆಗೆ ಹುನ್ನಾರ ನಡೆಸುತ್ತಿದ್ದು ಇಂತಹ ದುಸ್ಸಾಹಸಕ್ಕೆ ಮುಂದಾಗದಂತೆ ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ರೈತ ಮೋರ್ಚಾ ತೀವ್ರವಾದ ಎಚ್ಚರಿಕೆ ನೀಡುತ್ತದೆ ಎಂದು ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ್ ನಾವೂರು ಪ್ರತಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕುಮ್ಕಿ ಹಕ್ಕನ್ನು ರೈತರ ಹಕ್ಕೆಂದು ಅಂದಿನ ಮದರಾಸು ಪ್ರಾಂತ್ಯ ಮಾನ್ಯತೆ ಮಾಡಿ ಆ ಷರತ್ತಿನ್ವಯ ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೈಸೂರು ರಾಜ್ಯದಲ್ಲಿ ವಿಲೀನವಾಗಲು ಒಪ್ಪಿಗೆ ನೀಡಿತು. ತದನಂತರ ಈ ಕಾಯ್ದೆಯನ್ನು ಹೈಕೋರ್ಟ್ ಸುಪ್ರೀಂ ಕೋರ್ಟ್‌ಗಳು ಮಾನ್ಯ ಮಾಡಿದ್ದು ಕುಮ್ಕಿ ಭೂಮಿ ರೈತರ ಮೂಲಭೂತ ಹಕ್ಕಾಗಿರುತ್ತದೆ. ತನ್ನ ಗೊತ್ತು ಗುರಿ ಇಲ್ಲದೆ ಅವೈಜ್ಞಾನಿಕ ಹಳಿತಪ್ಪಿದ ಆರ್ಥಿಕ ನೀತಿಯಿಂದ ಬರಿದಾದ ಬೊಕ್ಕಸ ಭರ್ತಿಗೆ ಕಾಂಗ್ರೆಸ್ ಸರಕಾರ ರೈತರ ಹಕ್ಕಾದ ಕುಮ್ಕಿ ಭೂಮಿಯನ್ನು ಲೀಸ್ ಆಧಾರದಲ್ಲಿ ಗುತ್ತಿಗೆ ನೀಡ ಹೊರಟಿರುವುದು ಅನ್ನದಾತರಿಗೆ ಬಗೆದ ದ್ರೋಹವಾಗಿದೆ. ಈ ಯೋಚನೆಯನ್ನು ಸರಕಾರ ತಕ್ಷಣ ಕೈ ಬಿಡಬೇಕು ಇಲ್ಲದಿದ್ದರೆ ಬಿಜೆಪಿ ರೈತ ಮೋರ್ಚಾ ಉಗ್ರ ಹೋರಾಟ ನಡೆಸಲಿರುವುದೆಯೆಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related posts

ಶೈಖುನಾ ಶಂಸುಲ್ ಉಲಮಾ 8ನೇ ವರ್ಷದ ಉರೂಸ್ ಹಾಗೂ ವಾರ್ಷಿಕ ಮಜ್ಲಿಸುನ್ನೂರ್ ಕಾರ್ಯಕ್ರಮಕ್ಕೆ ಚಾಲನೆ

Suddi Udaya

ಫೆ.26 ಬಳಂಜದಲ್ಲಿ ಗುರುಪೂಜೆ, ನೂತನ ಅಡುಗೆ ಕೊಠಡಿ ಉದ್ಘಾಟನೆ- ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಭೀಕರ ಮಳೆ: ತಣ್ಣೀರುಪಂತದಲ್ಲಿ ಉಷಾ ಪುರುಷೋತ್ತಮರವರ ಮನೆ ಸಂಪೂರ್ಣ ಹಾನಿ

Suddi Udaya

ಸವಣಾಲು ಉದ್ಯಮಿ ಅರುಣ್ ಕುಮಾರ್ ನಿಧನ

Suddi Udaya

ನಿಡ್ಲೆ ಸಿಡಿಲು ಬಡಿದು ಹಾನಿಗೊಳಗಾದ ರಾಜೇಂದ್ರ ಗೌಡ ರವರ ಮನೆಗೆ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ನಿಂದ ಭೇಟಿ

Suddi Udaya

ಬರೆಂಗಾಯ ದ.ಕ.ಜಿ.ಪ.ಸ.ಉ.ಹಿ.ಪ್ರಾ ಶಾಲಾ ಅಮೃತ ಮಹೋತ್ಸವ : ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರುಗಳಿಗೆ ಗೌರವಾರ್ಪಣೆ

Suddi Udaya
error: Content is protected !!