27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆಯನ್ನು ತಾ.ಪಂ. ಮತ್ತು ಗ್ರಾ.ಪಂ. ಯಲ್ಲಿಯೇ ಅನುಕೂಲ ಕಲ್ಪಿಸಲು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ರವರಿಗೆ ದ.ಕ. ಮತ್ತು ಉಡುಪಿ ಜಿಲ್ಲೆಗಳ ಬಿಜೆಪಿ ಶಾಸಕರುಗಳ ನಿಯೋಗದಿಂದ ಮನವಿ

ಬೆಳ್ತಂಗಡಿ: ಗ್ರಾಮ ಪಂಚಾಯತಿಗಳು ಹಾಗು ಸ್ಥಳೀಯ ಯೋಜನೆ ಪ್ರದೇಶದ ಹೊರ ಭಾಗದಲ್ಲಿರುವ ಒಂದು ಎಕರೆಗಿಂತ ಕಡಿಮೆ ಪ್ರದೇಶ ಮತ್ತು ಏಕ ನಿವೇಶನ ವಸತಿ/ ವಸತಿಯೇತರಿಗಾಗಿ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆಯನ್ನು ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳಲ್ಲಿಯೇ ಪಡೆಯಲು ಅನುಕೂಲ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಮಾನ್ಯ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಿಜೆಪಿ ಶಾಸಕರುಗಳ ನಿಯೋಗ ತೆರಳಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಶಾಸಕರಾದ ಸುನಿಲ್ ಕುಮಾರ್, ಯಶಪಾಲ್ ಸುವರ್ಣ, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಗುರುರಾಜ್ ಗಂಟಿಹೊಳೆ, ಭಾಗೀರಥಿ ಮುರುಳ್ಯ, ರಾಜೇಶ್ ನಾಯಕ್ ಉಪಸ್ಥಿತರಿದ್ದರು.

Related posts

ನಾಳೆ (ಅ.30): ವಿದ್ಯುತ್ ನಿಲುಗಡೆ

Suddi Udaya

ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಬೆಳ್ತಂಗಡಿ ಮಂಡಲವತಿಯಿಂದ ಬೃಹತ್ ಪ್ರತಿಭಟನೆ

Suddi Udaya

ಮುಂಡೂರುಪಳಿಕೆ ಸುಗ್ಗಿ ಪುರುಷರ ಕೂಟದ ಸಮಿತಿ ರಚನೆ

Suddi Udaya

ಕುಂಟಿನಿ ಬೂತ್ ಸಮಿತಿ ಎಸ್.ಡಿ.ಪಿ.ಐ ವತಿಯಿಂದ ಪಕ್ಷದ ಸಂಸ್ಥಾಪನ ದಿನಾಚರಣೆ

Suddi Udaya

ಕಾರಿಂಜ ವನಶಾಸ್ತಾರ, ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮಕಲಶದ ಚಪ್ಪರ ಮೂಹೂರ್ತ, ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ತೆಕ್ಕಾರು: ಬಾಜಾರು ಜೋಡುಕಟ್ಟೆ ರಸ್ತೆ ಸಂಚಾರ ದುಸ್ತರ : ರಸ್ತೆಯ ಕಾಮಗಾರಿ ಶೀಘ್ರವೇ ಪ್ರಾರಂಭಗೊಳಿಸಿ – ಸರ್ಕಾರಕ್ಕೆ ಗ್ರಾ.ಪಂ. ಸದಸ್ಯ ಅಬ್ದುಲ್ ರಝಾಕ್ ಆಗ್ರಹ

Suddi Udaya
error: Content is protected !!