ನಾವೂರು: ಇಂದು(ಜು.22) ಸಂಜೆ ಸುರಿದ ಭಾರಿ ಗಾಳಿ ಮಳೆಗೆ ನಾವೂರು ಗ್ರಾಮದ ನಾಗಜೆ ಯಮನಾ ರವರ ಮನೆಗೆ ಬೃಹತ್ ಗಾತ್ರದ ಮರ ಬಿದ್ದು ಮನೆಗೆ ಹಾನಿಯಾದ ಘಟನೆ ನಡೆದಿದೆ.

ಮರ ಬಿದ್ದ ಪರಿಣಾಮ ಮನೆಯ ಹಂಚುಗಳು ಹುಡಿಯಾಗಿದ್ದು, ಅಪಾರ ಹಾನಿ ಸಂಭವಿಸಿದೆ. ಮನೆಯವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ತಾತ್ಕಲಿಕವಾಗಿ ಮನೆಯವರನ್ನು ಮನೆ ಸಮೀಪದ ಶೆಡ್ ಗೆ ಸ್ಥಳಾಂತರಿಸಲಾಗಿದೆ.

ನಾವೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಗಣೇಶ್ ಗೌಡ ಹಾಗೂ ಸ್ಥಳೀಯ ರಿಂದ ತೆರವು ಕಾರ್ಯ ನಡೆಯಿತು.