ಧರ್ಮಸ್ಥಳ: ಭಾರೀ ಗಾಳಿ ಮಳೆಗೆ ಜು.22 ರಂದು ರಾತ್ರಿ ನೇತ್ರಾವತಿ ಹೊಳೆಯ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಗಾತ್ರದ ಮರವನ್ನು ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸುವ ಕಾರ್ಯ ನಡೆಯಿತು.
ಗಾಳಿ ಮಳೆಯ ರಭಸಕ್ಕೆ ರಸ್ತೆಗೆ ದೊಡ್ಡ ಮರವೊಂದು ಮುರಿದು ಬಿದ್ದು ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ತಕ್ಷಣವೇ ಶ್ರೀ ಕ್ಷೇತ್ರ ಧರ್ಮಸ್ಥಳ ಮಾಹಿತಿ ಕಛೇರಿ ಮ್ಯಾನೇಜರ್ ಯೋಗೀಶ್ ರವರು ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಯ ಪ್ರಶಾಂತ್ ರಿಗೆ ಕರೆ ಮೂಲಕ ತಿಳಿಸಿದರು. ಕೂಡಲೇ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕ ಸ್ಥಳಕ್ಕೆ ತೆರಳಿ ಬಿದ್ದ ಮರವನ್ನು ಮಿಷಿನಿಂದ ತುಂಡರಿಸಿ ಬದಿಗೆ ಹಾಕಿದರು. ಈ ವೇಳೆ ನೇತ್ರಾವತಿ ಮಾಹಿತಿ ಕಛೇರಿಯ ಮ್ಯಾನೇಜರ್ ಹಾಗೂ ಅಲ್ಲಿಯ ಸ್ವಯಂಸೇವಕರು ಭಾಗಿಯಾಗಿದ್ದರು,