24.6 C
ಪುತ್ತೂರು, ಬೆಳ್ತಂಗಡಿ
May 18, 2025
Uncategorized

ಬೆಳ್ತಂಗಡಿ ಅ.ಭಾ.ಸಾ.ಪ. ಸಮಿತಿ ಹಾಗೂ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ನೇತೃತ್ವದಲ್ಲಿ ನೀರಿನ ಸದ್ಬಳಕೆ ಕುರಿತು ಕವಿಗೋಷ್ಠಿ

ಬೆಳ್ತಂಗಡಿ : ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ಕರ್ನಾಟಕ ಬೆಳ್ತಂಗಡಿ ಸಮಿತಿ ಮತ್ತು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಸಹಭಾಗಿತ್ವದಲ್ಲಿ ನೀರಿನ ಸದ್ಬಳಕೆ ವಿಷಯದಲ್ಲಿ ವಿದ್ಯಾರ್ಥಿಗಳ ಕವಿಗೋಷ್ಟಿಯು ಜು 20 ರಂದು ಜೆಸಿ ಭವನದಲ್ಲಿ ನಡೆಯಿತು.

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾದ ಜೆಸಿ ಹೆಚ್‌ಡಿ‌ಎಫ್ ರಂಜಿತ್ ಹೆಚ್ ಡಿ ಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ರಾಮಕೃಷ್ಣ ಭಟ್ ಬದನಾಜೆಯವರು ಉಪಸ್ಥಿತರಿದ್ದು 42 ವಿದ್ಯಾರ್ಥಿಗಳು ವಾಚಿಸಿದ ಕವನಗಳನ್ನು ಅವಲೋಕನ ಮಾಡಿ, ಕವನ ರಚನೆಗೆ ಕೆಲವು ಸಲಹೆಗಳನ್ನು ಕೊಟ್ಟರು.

ಅಭಾಸಾಪ ಬೆಳ್ತಂಗಡಿ ಸಮಿತಿಯ ಅಧ್ಯಕ್ಷರಾದ ಪ್ರೊ.ಗಣಪತಿ ಭಟ್ ಕುಳಮರ್ವರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅತಿಥಿಗಳು ದೀಪ ಪ್ರಜ್ವಲಿಸಿ ಶಾರದಾ ಮಾತೆಗೆ ಪುಷ್ಪಾರ್ಚನೆಗೈದರು.

ಅಭಾಸಾಪ ವಿಭಾಗ ಸಂಯೋಜಕ ಸುಂದರ ಶೆಟ್ಟಿ ಇಳಂತಿಲರವರು ಉಪಸ್ಥಿತರಿದ್ದರು. ಅಭಾಸಾಪ ಸಾಹಿತ್ಯ ಕೂಟ ಪ್ರಮುಖರಾದ ರಾಮಕೃಷ್ಣ ಭಟ್ ಬೆಳಾಲು ಮತ್ತು ಜತೆ ಕಾರ್ಯದರ್ಶಿ ಶ್ರೀಮತಿ ವಿನುತಾ ರಜತ್ ಗೌಡರವರು ಕಾರ್ಯಕ್ರಮವನ್ನು ನಿರ್ವಹಿಸಿದರು.

ಅಭಾಸಾಪ ಬೆಳ್ತಂಗಡಿ ಸಮಿತಿಯ ಕೋಶಾಧಿಕಾರಿಗಳಾದ ಕೇಶವ ಭಟ್ ಅತ್ತಾಜೆಯವರು, ಉಪಾಧ್ಯಕ್ಷ ವಿಶ್ವೇಶ್ವರ ಭಟ್ ಉಂಡೆಮನೆ, ವಿದ್ಯಾರ್ಥಿ ಪ್ರಕಾರದ ಪ್ರಮುಖ ಮಹಾಬಲ ಗೌಡ, ಸಾಹಿತ್ಯ ಕೂಟ ಸಹ ಸಂಚಾಲಕಿ ಶ್ರೀಮತಿ ನಯನಾ ಟಿ.ರವರು, ಸದಸ್ಯರಾದ ಶ್ರೀಮತಿ ಆಶಾ ಅಡೂರ್, ಶ್ರೀಮತಿ ವಸಂತಿ ಕುಳಮರ್ವ, ಶ್ರೀಮತಿ ಮೀನಾಕ್ಷಿ, ಜೆಸಿಐ ಪೂರ್ವಾಧ್ಯಕ್ಷರಾದ ಜೆಸಿ ನಾರಾಯಣ ಶೆಟ್ಟಿ, ಶ್ರೀಮತಿ ಹೇಮಾವತಿ ಕೆ. ಜೂನಿಯರ್ ಜೆಸಿ ಅಧ್ಯಕ್ಷರಾದ ಜೆಜೆಸಿ ಸಮನ್ವಿತ್ ಮತ್ತು ಸದಸ್ಯರು , ಶಿಕ್ಷಕರಾದ ಸುಮನ್, ವಿದ್ಯಾರ್ಥಿಗಳು ಮತ್ತು ಹೆತ್ತವರು ಭಾಗವಹಿಸಿದ್ದರು.

ಕವನ ವಾಚಿಸಿದ ವಿದ್ಯಾರ್ಥಿಗಳಿಗೆ ಪುಸ್ತಕದೊಂದಿಗೆ ಅಭಿನಂದನಾ ಪತ್ರವನ್ನು ನೀಡಲಾಯಿತು.

ಕಾರ್ಯಕ್ರಮವು ಶ್ರೀಮತಿ ನಯನಾ ಟಿ.ರವರ ಶಾರದಾ ಸ್ತುತಿಯೊಂದಿಗೆ ಆರಂಭಗೊಂಡು, ಅಭಾಸಾಪ ಬೆಳ್ತಂಗಡಿ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿಯವರ ಧನ್ಯವಾದವಿತ್ತರು.

Related posts

ಯಕ್ಷ ಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದಿಂದ ಡಿ.2 ಯಕ್ಷ ಸಂಭ್ರಮ 2023

Suddi Udaya

ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಸಾಧನಾ ಪ್ರಶಸ್ತಿ

Suddi Udaya

ಬೆಳ್ತಂಗಡಿ: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ದೇಶಭಕ್ತಿ ಗೀತೆಗಳ ಗೀತ ಗಾಯನ ಸ್ಪರ್ಧೆ

Suddi Udaya

ಬೆಳ್ತಂಗಡಿ: ಅಪ್ಸರಾ ಫ್ಯಾಶನ್ ಸೆಂಟರ್ ಹಾಗೂ ಮಿಷ್‌ಮಷ್ ಫ್ಯಾನ್ಸಿ & ಗಿಫ್ಟ್ ಸೆಂಟರಿನಲ್ಲಿ ಕ್ರಿಸ್ ಮಸ್ ಮತ್ತು ಹೊಸ ವರುಷದ ಪ್ರಯುಕ್ತ ಸ್ಪೆಷಲ್ ಆಫರ್: ಪ್ರತಿ ಖರೀದಿಯ ಮೇಲೆ ಶೇ.20 ಡಿಸ್ಕೌಂಟ್

Suddi Udaya

ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ: ಬೆಳ್ತಂಗಡಿ ಪಿಡಬ್ಲ್ಯೂಡಿ ಪ್ರಥಮ ಸಹಾಯಕ ನರೇಂದ್ರ ಭಟ್ ಶಟಲ್ ಬ್ಯಾಡ್ಮಿಂಟನ್ ನಲ್ಲಿ ದ್ವಿತೀಯ ಸ್ಥಾನ

Suddi Udaya

ಬಂದಾರು ಓಟೆಚ್ಚಾರು ಪರಿಸರದಲ್ಲಿ ಒಂಟಿ ಸಲಗ ದಾಳಿ ಕೃಷಿ, ಸೊತ್ತುಗಳ ನಾಶ

Suddi Udaya
error: Content is protected !!