September 6, 2026
Uncategorized

ದ.ಕ. ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘದ ಯೂನಿಯನ್ ಉದ್ಘಾಟನೆ ಮತ್ತು ಕಾರ್ಮಿಕರ ಸಮಾವೇಶ ಹಾಗೂ ಬಿ.ಎಂ.ಎಸ್ ಸ್ಥಾಪನ ದಿನಾಚರಣೆ

ಉಜಿರೆ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘ ಇದರ ಯೂನಿಯನ್ ಉದ್ಘಾಟನೆ ಮತ್ತು ಕಾರ್ಮಿಕರ ಸಮಾವೇಶ ಹಾಗೂ ಬಿ.ಎಂ.ಎಸ್ ಸ್ಥಾಪನ ದಿನಾಚರಣೆ ಕಾರ್ಯಕ್ರಮವು ಜು. 23ರಂದು ಶಾರದ ಮಂಟಪ ಶ್ರೀ ಜನಾರ್ದನ ದೇವಸ್ಥಾನದ ಬಳಿ ನಡೆಯಿತು.

ಕಾರ್ಯಕ್ರಮವನ್ನು ಭಾರತ ಸರ್ಕಾರ ರಬ್ಬರ್ ಬೋರ್ಡ್ ನಿರ್ದೇಶಕ ಕೇಶವ ಭಟ್ ಮುಳಿಯ ಉದ್ಘಾಟಿಸಿ ಮಾತನಾಡಿ ಭಾರತ ಅತೀ ಹೆಚ್ಚು ರಬ್ಬರ್ ಬೆಳೆಯನ್ನು ಮಾಡುವಂತಹ ದೇಶ ಆದರೆ ಇತ್ತೀಚಿಗೆ ರಬ್ಬರ್ ಟ್ಯಾಪರ್ ಗಳಿಗೆ ಭದ್ರತೆಗಳು, ಸೌಲಭ್ಯಗಳು ಸಿಗದೆ ಬೇರೆ ಬೇರೆ ಕೆಲಸಗಳಿಗೆ ಅವಲಂಭಿತರಾಗಿ ರಬ್ಬರ್ ಕೃಷಿ ಕಡಿಮೆಯಾಗುತ್ತ ಇದೆ. ರಬ್ಬರ್ ಟ್ಯಾಪರ್ ಗಳಿಗೆ ಭದ್ರತೆಗಳು ಸಿಗಬೇಕು ಎಂಬ ಉದ್ದೇಶದಿಂದ ಯೂನಿಯನ್ ಪ್ರಾರಂಭವಾಗಿದೆ. ಮುಂದಿನ ಎಲ್ಲಾ ಕಾರ್ಯಗಳಿಗೂ ನಾನು ಸಹಕಾರ ನೀಡುತ್ತೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಬ್ಬರ್ ಟ್ಯಾಪರ್ ಮಜ್ದೂರ್ ಸಂಘದ ಅಧ್ಯಕ್ಷ, ಜಿಲ್ಲಾಧ್ಯಕ್ಷ ಮತ್ತು ವಕೀಲರು ಆಗಿರುವ ಅನಿಲ್ ಕುಮಾರ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಉಪಾಧ್ಯಕ್ಷ ಅನಂತ್ ಭಟ್ ಮಚ್ಚಿಮಲೆ, ರಬ್ಬರ್ ಬೆಳೆ ಅಭಿವೃದ್ಧಿ ಅಧಿಕಾರಿ ರೋಶಿನಿ, ಉಜಿರೆ ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕರಾದ ಜಯಂತ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರ ಪ್ರಮುಖ್ ರಾದ ಭರತ್ ರಾಜ್ ಮಂಗಳೂರು, ಬೆಳ್ತಂಗಡಿ ಅಮೂಲ್ಯ ಸಾಕ್ಷರತ ಕೇಂದ್ರದ ಆರ್ಥಿಕ ಸಮಾಲೋಚಕಿ ಉಷಾ ನಾಯಕ್, ರಬ್ಬರ್ ಟ್ಯಾಪಿಂಗ್ ನಿವೃತ್ತ ತರಬೇತಿ ಶಿಕ್ಷಕ ರಾಘವನ್ , ಭಾರತೀಯ ಮಜ್ದೂರ್ ಸಂಘದ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ಉದಯ ಬಿ.ಕೆ, ಬೆಳ್ತಂಗಡಿ ತಾಲೂಕು ರಬ್ಬರ್ ಟ್ಯಾಪರ್ ಅಧ್ಯಕ್ಷ ಹರೀಶ್ ಜೆ.ಕೆ, ಸುಳ್ಯ ತಾಲೂಕು ಸಮಿತಿ ರಬ್ಬರ್ ಟ್ಯಾಪರ್ ಅಧ್ಯಕ್ಷ ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ ನಾಗರಾಜ ಮಾಚಾರು ಉಪಸ್ಥಿತರಿದ್ದರು.


ಕುಮಾರಿ ಅಭಿಶ್ರೀ ಪ್ರಾರ್ಥಿಸಿದರು. ಭಾರತೀಯ ಮಜ್ದೂರು ಸಂಘದ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗೇಶ್ ಹಾಗೂ ಶಾಂತಪ್ಪ ನಿರೂಪಿಸಿದರು. ಲೋಲಾಕ್ಷಿ ಧನ್ಯವಾದವಿತ್ತರು.

Related posts

ಧರ್ಮರಕ್ಷಾ ವೇದಿಕೆ ತೋಟತ್ತಾಡಿ ಆಶ್ರಯದಲ್ಲಿ ಎಂಟನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವ ಕಾರ್ಯಕ್ರಮ

Suddi Udaya

ಆದಿವಾಸಿ ಸಮುದಾಯದ ಎದುರಿಸುತ್ತಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ಸಭೆ ಕರೆದಿರುವ ರಾಜ್ಯ ಸರ್ಕಾರ

Suddi Udaya

ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನಂದಗೋಕುಲ ಗೋಶಾಲೆ ಯಲ್ಲಿ ಗೋಪೂಜೆ

Suddi Udaya

ಸೆ.14-21: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇಲೈಸಲಿದೆ 27ನೇ ವರ್ಷದ ಭಜನಾ ಕಮ್ಮಟ

Suddi Udaya

ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ , ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿವಾಸಿ ಕೇಶವ ಎಂ.ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ ನಗರ ನಿವಾಸಿ ದಿ| ನಾರಾಯಣ ರಾವ್ ಅವರ ಧರ್ಮಪತ್ನಿ ಶ್ರೀಮತಿ ಕೆ.ಸುಮಿತ್ರ ರಾವ್ ನಿಧನ

Suddi Udaya
error: Content is protected !!