ಧರ್ಮಸ್ಥಳ :
ಮಕ್ಕಳನ್ನು ದೇವರ ಮಕ್ಕಳೆಂದು ಭಾವಿಸುತ್ತಾ, ಹಲವಾರು ಕಾರ್ಯಕ್ರಮ ಸಂಘಟನೆ, ಸೇವಾ ಚಟುವಟಿಕೆ, ಸಂಘ ಸಂಸ್ಥೆಗಳ ಸ್ಥಾಪನೆ,
ಸಾವಿರಾರು ಕಲಾವಿದರಿಗೆ
ಬೆಳಕಾದ ವಿಷಯಕ್ಕಾಗಿ
ಆಮಂತ್ರಣ ಪರಿವಾರದ ಮುಖ್ಯಸ್ಥ ವಿಜಯ ಕುಮಾರ್ ಜೈನ್ ಅಳದಂಗಡಿ ಇವರಿಗೆ
ಜು.21 ರಂದು
ಸನ್ಮಾನ ಕಾರ್ಯಕ್ರಮ ನಡೆಯಿತು.
ಧರ್ಮಸ್ಥಳ ನೇತ್ರಾವತಿ ಬಳಿಯ
ಪ್ರಣವ್ ಸಭಾಂಗಣದಲ್ಲಿ ದ.ಕ.ಜಿಲ್ಲಾ ಜಾನಪದ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ, ಚುಟುಕು ಸಾಹಿತ್ಯ ಪರಿಷತ್ತು ಬೆಳ್ತಂಗಡಿ ಘಟಕ, ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಪದಗ್ರಹಣ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ
ಅಮಂತ್ರಣ ಸಂಸ್ಥೆಯವರು ಸೇರಿ ಈ ಸನ್ಮಾನ ನೆರವೇರಿಸಿದರು.
ಈ ಸಮಾರಂಭದಲ್ಲಿ ಹಿರಿಯರಾದ ಬಿ.ಭುಜಬಲಿ ಧರ್ಮಸ್ಥಳ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಸಂಪತ್ ಬಿ ಸುವರ್ಣ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ.ಹೆಚ್.ಪ್ರಕಾಶ್ ಶೆಟ್ಟಿ, ಉದ್ಯಮಿ ಲ| ನಿತ್ಯಾನಂದ ನಾವರ, ಸಿ.ಎ.ಬ್ಯಾಂಕ್ ಅಧ್ಯಕ್ಷರಾದ ಪ್ರೀತಮ್ ಧರ್ಮಸ್ಥಳ,
ಡಾ.ದೀಪಾಲಿ ಡೊಂಗ್ರೆ, ಗ್ರಾ.ಪಂ ಉಪಾಧ್ಯಕ್ಷರಾದ ಶ್ರೀನಿವಾಸ ರಾವ್, ಧರ್ಮಸ್ಥಳ, ವಿದ್ಯಾಧರ್ ಜೈನ್ ಉಪ್ಪಿನಂಗಡಿ,
ಬೆಳ್ತಂಗಡಿ ಜೆಸಿಐ ಮಂಜುಶ್ರೀ ಅಧ್ಯಕ್ಷರಾದ ರಂಜಿತ್ ಹೆಚ್.ಡಿ, ಪ್ರಣವ್ ಸಭಾಂಗಣ ಮಾಲಕರಾದ ಸುರೇಂದ್ರ ಪ್ರಭು, ಮಲ್ಲಿನಾಥ್ ಜೈನ್ ಧರ್ಮಸ್ಥಳ, ಶ್ರೀದೇವಿ ಸಚಿನ್, ಬೇಬಿ ಪೂಜಾರಿ ಪುನ್ಕೆತ್ಯಾರು, ಶಾರದ ಶೆಟ್ಟಿ ಅಳದಂಗಡಿ, ಸದಾನಂದ ಬಿ.ಕುದ್ಯಾಡಿ, ಅರುಣ್ ಜೈನ್ ಅಳದಂಗಡಿ, ರಂಜನ್ ನೆರಿಯ, ಸ್ನೇಕ್ ಪ್ರಕಾಶ್ ಶೆಟ್ಟಿ ಧರ್ಮಸ್ಥಳ, ಬಳಂಜ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ಹರೀಶ್ ವೈ ಚಂದ್ರಮ, ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಪ್ರಧಾನ ಸಂಚಾಲಕ ಅಭಿಷೇಕ್ ಬಜಗೋಳಿ, ಅಧ್ಯಕ್ಷರಾದ ನಿರೀಕ್ಷಿತಾ ಮಂಗಳೂರು, ಉಪಾಧ್ಯಕ್ಷೆ ವಿಂಧ್ಯಾ ಎಸ್.ರೈ ಕಡೇಶಿವಾಲಯ, ನಿರ್ದೇಶಕರುಗಳಾದ
ಚೇತನ್ ಕುಮಾರ್ ಅಮೈ, ಸ್ವಾತಿ ಸೂರಜ್ ಶಿಶಿಲ, ಆರ್.ಜೆ ಇಂದ್ರ ಕುಂದಾಪುರ, ಆಶಾ ಅಡೂರು, ವಿದ್ಯಾಶ್ರೀ ಅಡೂರ್ ಸ್ವಾತೀ ಕುಲಾಲ್ ಕಡ್ತಲ, ಕವಿತಾ ದಿನೇಶ್ ಕಟೀಲು,ಪ್ರಜ್ಞಾ ವಾಣಿಗೋರೆ ಕಾರ್ಕಳ, ಕೇಶವ ನೆಲ್ಯಾಡಿ, ಪರ್ಣಶಾ ಗೋಖಲೆ, ಹೇಮಾ ಜಯರಾಮ್ ರೈ ಕುರಿಯ, ಸುಶ್ಮೀತಾ ಮೂಡಬಿದ್ರೆ, ಹೆಚ್ಕೆ ನಯನಾಡು, ಪ್ರಸಾದ್ ನಾಯಕ್ ಕಾರ್ಕಳ ಮುಂತಾದವರು ಉಪಸ್ಥಿತರಿದ್ದರು.