April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ LAV(Lo Assistance Visit) ಕಾರ್ಯಕ್ರಮ

ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ವಲಯ ಉಪಾಧ್ಯಕ್ಷರಾದ ಜೆ ಎಫ್ ಡಿ ಶಂಕರ್ ರಾವ್ ರವರ 2ನೇ ಅಧಿಕೃತ ಭೇಟಿ ಕಾರ್ಯಕ್ರಮವು ಜೆಸಿ ಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ನಡೆದ LAV ( Lo Assistance Visit) ಕಾರ್ಯಕ್ರಮದಲ್ಲಿ ಈ ವರ್ಷ ಘಟಕ ನಡೆಸಿದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳು ಮತ್ತು ಜೆಸಿಐ ಭಾರತದ ಮಾರ್ಗಸೂಚಿಯಂತೆ ನಡೆದ ಕಾರ್ಯಕ್ರಮಗಳನ್ನು ಅವಲೋಕನ ಮಾಡಲಾಯಿತು ಹಾಗೂ ಮುಂದೆ ನಡೆಯುವಂತ ಕಾರ್ಯಕ್ರಮಗಳ ಬಗ್ಗೆ ಚರ್ಚೆಗಳನ್ನು ನಡೆಸಲಾಯಿತು.

ವಲಯ ಉಪಾಧ್ಯಕ್ಷರಾದ ಶಂಕರರಾವ್ ಜೆಸಿಐ ಬೆಳ್ತಂಗಡಿಯು ಈ ವರ್ಷ ನಡೆಸಿದ ಕಾರ್ಯಕ್ರಮಗಳಿಗೆ ಹಾಗೂ ಸಮ್ಮೇಳನಗಳಲ್ಲಿ ಪಡೆದುಕೊಂಡ ಪ್ರಶಸ್ತಿಗಳಿಗೆ ಅಭಿನಂದನೆಯನ್ನು ಸಲ್ಲಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಜೆಎಫ್ ಎಮ್ ರಂಜಿತ್ ಎಚ್ ಡಿ ವಹಿಸಿ, ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಪೂರ್ವ ಅಧ್ಯಕ್ಷರುಗಳಾದ ಅಶೋಕ ಕುಮಾರ್ ಬಿ ಪಿ, ನಾರಾಯಣ ಶೆಟ್ಟಿ, ಶ್ರೀನಾಥ್ ಕೆ ಮ್, ಚಿದಾನಂದ ಇಡ್ಯಾ, ಕಿರಣ್ ಕುಮಾರ್ ಶೆಟ್ಟಿ, ಪ್ರಶಾಂತ್, ಸ್ವರೂಪ್ ಶೇಖರ್, ಪ್ರಸಾದ್ ಬಿ ಎಸ್, ಉಪಾಧ್ಯಕ್ಷರುಗಳಾದ ಪ್ರೀತಮ್ ಶೆಟ್ಟಿ, ಆಶಾ ಪ್ರಶಾಂತ್, ಸುದೀರ್ ಕೆಎನ್, ಶೈಲೇಶ್, ಲೇಡಿ ಜೆಸಿ ಸಂಯೋಜಕರಾದ ಶ್ರುತಿ ರಂಜಿತ್, ಕೋಶಾಧಿಕಾರಿಗಳಾದ ಮಮಿತಾ ಸುಧೀರ್, ಕಾರ್ಯಕ್ರಮದ ಸಂಯೋಜಕರಾದ ಪ್ರಮೋದ್, ಪದಾಧಿಕಾರಿಗಳಾದ ಮಧುರಾ ರಾಘವ್, ರಜತ್, ಜಯರಾಜ್ ನಡಕರ, ರತ್ನಾಕರ ಬಳಂಜ, ವಿನಾಯಕ್, ಜೆಜೆಸಿ ಅಧ್ಯಕ್ಷರಾದ ಸಮನ್ವಿತ್ ಕುಮಾರ್, ಜೂನಿಯರ್ ಜೆಸಿ ಸಮ್ಮೇಳನದ ಸಂಯೋಜಕರಾದ ದೀಪ್ತಿ ಕುಲಾಲ್, ತೇಜಸ್, ಅತಿಶ್ರೇಯಾ, ಸೃಜನ್, ನಯನ, ಉದಿತ್ ರವರು ಭಾಗವಹಿಸಿದರು.

ವೇದಿಕೆ ಆಹ್ವಾನವನ್ನು ಜೊತೆ ಕಾರ್ಯದರ್ಶಿಗಳಾದ ರಾಮಕೃಷ್ಣ ನಡೆಸಿದರು ಮತ್ತು ಜೆಸಿ ವಾಣಿಯನ್ನು ಜೆಜೆಸಿ ತ್ರಿಷಾ ಉದ್ಘೋಷಿಸಿದರು . ಕಾರ್ಯದರ್ಶಿಗಳಾದ ಅನುದೀಪ್ ಜೈನ್ ರವರ ಧನ್ಯವಾದವಿತ್ತರು .

Related posts

ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ‌ ಸಂಘದಿಂದ ಜಾಗತಿಕ ಔಷಧ ತಜ್ಞರ ದಿನಾಚರಣೆ

Suddi Udaya

ಉಜಿರೆಯಲ್ಲಿ ಸಹನಶ್ರೀ ಸಹಕಾರಿ ಸೊಸೈಟಿಯ ಕಚೇರಿ ಉದ್ಘಾಟನೆ

Suddi Udaya

ಕೊಯ್ಯೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕ ಮಹಾಸಭೆ

Suddi Udaya

ಕುಸಿಯುವ ಹಂತದಲ್ಲಿರುವ ವೇಣೂರು ಸರಕಾರಿ ಪ್ರೌಢಶಾಲೆಗೆ ಶಾಸಕ ಹರೀಶ್ ಪೂಂಜ ಭೇಟಿ, ತಕ್ಷಣ ಸ್ಪಂದನೆ

Suddi Udaya

ಉಜಿರೆ : ಅನುಗ್ರಹ ಕಾಲೇಜಿನಲ್ಲಿ ಸಾಹಿತ್ಯ ಹಾಗೂ ವ್ಯಕ್ತಿತ್ವ ವಿಕಸನ

Suddi Udaya

ಉಜಿರೆ ಬೆನಕ ಆಸ್ಪತ್ರೆಗೆ ವಿಧಾನಸಭೆಯ ಸ್ಪೀಕರ್ ಯು. ಟಿ ಖಾದರ್ ಭೇಟಿ

Suddi Udaya
error: Content is protected !!