ತೆಕ್ಕಾರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ವಿದ್ಯುತ್ ತೆಕ್ಕಾರು ಗ್ರಾಮದ ಸರಳಿಕಟ್ಟೆ, ಬಾಜಾರು, ಕುಟ್ಟಿಕಾಳ, ಬಂಟ್ವಾಳ ತಾಲೂಕಿನ ಮಣಿನಾಲ್ಗೂರು, ನಡುಮೊಗರು, ಬೈಲಮೆರ್, ನೆಲ್ಲಿಪಲ್ಕೆ, ಗೋದಾಮ್ ಗುಡ್ಡೆ, ಪೊರ್ಕಲದವರೆಗೆ ಮಳೆ ಆರಂಭವಾದಗಿನಿಂದ ವಿದ್ಯುತ್ ಸಮಸ್ಯೆ ಪ್ರಾರಂಭವಾಗಿದೆ. ರಾತ್ರಿ ೧೦ ಗಂಟೆಗೆ ಹೋದಂತಹ ಕರೆಂಟ್ ಬರುವುದು ಬೆಳಗ್ಗೆ. ಸಂಜೆ ಏನಾದರೂ ಫ್ಯೂಸ್ ಹೋಗಿದೆ ಎಂದು ದೂರು ನೀಡಿದರೆ ಅದನ್ನು ಪವರ್‌ಮ್ಯಾನ್‌ಗಳು ಮರುದಿನ ಬಂದು ಹಾಕುತ್ತಾರೆ.
ತೆಕ್ಕಾರು ಗ್ರಾಮದಲ್ಲಿ ಇಬ್ಬರು ಖಾಯಂ ಪವರ್‌ಮ್ಯಾನ್‌ಗಳು ಇದ್ದಾರೆ. ಎಲ್ಲಿಯಾದರು ವಿದ್ಯುತ್ ಕಂಬ, ತಂತಿ ಬಿದ್ದಿದೆ ಎಂದು ದೂರು ನೀಡಿದರೆ ಇವತ್ತು ಜನ ಇಲ್ಲ ನಾಳೆ ಬರುತ್ತೇವೆ ಎಂದು ಹೇಳಿ ಹೋಗುತ್ತಾರೆ. ಜನರಿಗೆ ಇದ್ದರಿಂದ ಸಮಸ್ಯೆ ಆಗುತ್ತಿದೆ.
ಪಂಚಾಯತ್‌ನಲ್ಲೂ ಸರಿಯಾಗಿ ಕರೆಂಟ್ ಇರುವುದಿಲ್ಲ. ಗ್ರಾಮಸ್ಥರು ಏನಾದರು ಕೆಲಸಕ್ಕಾಗಿ ಬಂದರೆ, ಎಲ್ಲಾ ಕೆಲಸಗಳು ಕಂಪ್ಯೂಟರ್‌ನಲ್ಲಿ ಆಗುವುದರಿಂದ ಸರಿಯಾಗಿ ಕೆಲಸ ಮಾಡುವುದಕ್ಕೆ ಆಗುವುದಿಲ್ಲ, ಗ್ರಾಮಸ್ಥರು ಪಂಚಾಯತ್ ಸಿಬ್ಬಂದಿಗಳು ಕೆಲಸ ಮಾಡುವುದಿಲ್ಲ ಎಂದು ಹಿಡಿ ಶಾಪ ಹಾಕಿ ಹೋಗುತ್ತಾರೆ. ಮೇ ತಿಂಗಳಿನಲ್ಲಿಯೇ ಮರದ ಗೆಲ್ಲುಗಳನ್ನು ತೆಗೆಯುವಂತಹ ಕೆಲಸವನ್ನು ಮಾಡಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.