22.9 C
ಪುತ್ತೂರು, ಬೆಳ್ತಂಗಡಿ
March 7, 2026
ತಾಲೂಕು ಸುದ್ದಿಪ್ರಮುಖ ಸುದ್ದಿಸಮಸ್ಯೆ

ತೆಕ್ಕಾರು ಗ್ರಾಮದಲ್ಲಿ ರಾತ್ರಿ ವೇಳೆ ಕಣ್ಣಾ ಮುಚ್ಚಾಲೆ ಆಡುತ್ತಿರುವ ವಿದ್ಯುತ್

ತೆಕ್ಕಾರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ವಿದ್ಯುತ್ ತೆಕ್ಕಾರು ಗ್ರಾಮದ ಸರಳಿಕಟ್ಟೆ, ಬಾಜಾರು, ಕುಟ್ಟಿಕಾಳ, ಬಂಟ್ವಾಳ ತಾಲೂಕಿನ ಮಣಿನಾಲ್ಗೂರು, ನಡುಮೊಗರು, ಬೈಲಮೆರ್, ನೆಲ್ಲಿಪಲ್ಕೆ, ಗೋದಾಮ್ ಗುಡ್ಡೆ, ಪೊರ್ಕಲದವರೆಗೆ ಮಳೆ ಆರಂಭವಾದಗಿನಿಂದ ವಿದ್ಯುತ್ ಸಮಸ್ಯೆ ಪ್ರಾರಂಭವಾಗಿದೆ. ರಾತ್ರಿ ೧೦ ಗಂಟೆಗೆ ಹೋದಂತಹ ಕರೆಂಟ್ ಬರುವುದು ಬೆಳಗ್ಗೆ. ಸಂಜೆ ಏನಾದರೂ ಫ್ಯೂಸ್ ಹೋಗಿದೆ ಎಂದು ದೂರು ನೀಡಿದರೆ ಅದನ್ನು ಪವರ್‌ಮ್ಯಾನ್‌ಗಳು ಮರುದಿನ ಬಂದು ಹಾಕುತ್ತಾರೆ.
ತೆಕ್ಕಾರು ಗ್ರಾಮದಲ್ಲಿ ಇಬ್ಬರು ಖಾಯಂ ಪವರ್‌ಮ್ಯಾನ್‌ಗಳು ಇದ್ದಾರೆ. ಎಲ್ಲಿಯಾದರು ವಿದ್ಯುತ್ ಕಂಬ, ತಂತಿ ಬಿದ್ದಿದೆ ಎಂದು ದೂರು ನೀಡಿದರೆ ಇವತ್ತು ಜನ ಇಲ್ಲ ನಾಳೆ ಬರುತ್ತೇವೆ ಎಂದು ಹೇಳಿ ಹೋಗುತ್ತಾರೆ. ಜನರಿಗೆ ಇದ್ದರಿಂದ ಸಮಸ್ಯೆ ಆಗುತ್ತಿದೆ.

ಪಂಚಾಯತ್‌ನಲ್ಲೂ ಸರಿಯಾಗಿ ಕರೆಂಟ್ ಇರುವುದಿಲ್ಲ. ಗ್ರಾಮಸ್ಥರು ಏನಾದರು ಕೆಲಸಕ್ಕಾಗಿ ಬಂದರೆ, ಎಲ್ಲಾ ಕೆಲಸಗಳು ಕಂಪ್ಯೂಟರ್‌ನಲ್ಲಿ ಆಗುವುದರಿಂದ ಸರಿಯಾಗಿ ಕೆಲಸ ಮಾಡುವುದಕ್ಕೆ ಆಗುವುದಿಲ್ಲ, ಗ್ರಾಮಸ್ಥರು ಪಂಚಾಯತ್ ಸಿಬ್ಬಂದಿಗಳು ಕೆಲಸ ಮಾಡುವುದಿಲ್ಲ ಎಂದು ಹಿಡಿ ಶಾಪ ಹಾಕಿ ಹೋಗುತ್ತಾರೆ. ಮೇ ತಿಂಗಳಿನಲ್ಲಿಯೇ ಮರದ ಗೆಲ್ಲುಗಳನ್ನು ತೆಗೆಯುವಂತಹ ಕೆಲಸವನ್ನು ಮಾಡಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ಮುಂಡಾಜೆ ಪಿಯು ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ರಸ್ತೆ ದುರಸ್ತಿ

Suddi Udaya

ತೆಕ್ಕಾರು ಗ್ರಾ.ಪಂ. ನ ಪ್ರಥಮ ಹಂತದ ಗ್ರಾಮಸಭೆ

Suddi Udaya

ವಿದ್ವತ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೇತ್ರಾ ತಪಾಸಣಾ ಶಿಬಿರ

Suddi Udaya

ಕುತ್ಲೂರು ಗ್ರಾಮ ಅರಣ್ಯ ಸಮಿತಿಯ ವಾರ್ಷಿಕ ಮಹಾಸಭೆ

Suddi Udaya

ಕರಾರಸಾನಿಗಮದ ಧರ್ಮಸ್ಥಳ ಘಟಕದ ಹಿರಿಯ ಚಾಲಕ, ಚಿನ್ನದ ಪದಕ ವಿಜೇತ ಹೆಚ್.ಪಿ.ರಾಜುರವರಿಗೆ ಬೀಳ್ಕೋಡುಗೆ

Suddi Udaya

ಉಜಿರೆ ಶ್ರೀ ಧ.ಮಂ. ಕಾಲೇಜಿನ ಸಮಾಜ ಕಾರ್ಯ ವಿಭಾಗ ಹಾಗೂ ಸುಲ್ಕೇರಿ ಒಕ್ಕೂಟದ ಸಹಯೋಗದಿಂದ ಜಲಸಂರಕ್ಷಣೆಯ ಅರಿವು ಕಾರ್ಯಕ್ರಮ

Suddi Udaya
error: Content is protected !!