ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಮಾನಸಿಕ ಅಸ್ವಸ್ಥ ರಂತೆ ತಿರುಗಾಡುತಿದ್ದ ವ್ಯಕ್ತಿ ಇಂಟರ್ನ್ಯಾಷನಲ್ ಸೀನಿಯರ್ ಚೇಂಬರ್ ಮತ್ತಿತರರು ಸೇರಿ ಬೆಂಗಳೂರಿನ ಜನ ಸ್ನೇಹಿ ಆಶ್ರಮಕ್ಕೆ ಕಳುಹಿಸಿದ ಘಟನೆ ಜು.23 ರಂದು ನಡೆದಿದೆ.
ಸುಮಾರು ದಿನಗಳಿಂದ ಸುಬ್ರಹ್ಮಣ್ಯದ ಆಸು ಪಾಸಿನಲ್ಲಿ ತಿರುಗಾಡುತ್ತಾ ಮತ್ತು ರೋಡ್ ಬದಿಯಲ್ಲಿ ಮಲಗುತ್ತಿದ್ದರು. ಇದನ್ನು ಕಂಡ ಸ್ಥಳೀಯರು ಇಂಟರ್ನ್ಯಾಷನಲ್ ಸೀನಿಯರ್ ಚೇಂಬರ್ ನ ಅಧ್ಯಕ್ಷರಾದ ಡಾ. ರವಿ ಕಕ್ಕೆ ಪದವು ಅವರಿಗೆ ತಿಳಿಸಿದರು .
ಡಾ| ರವಿ ಕಕ್ಕೆಪದವುರವರು ವಿಚಾರಿಸಿದಾಗ ನನ್ನ ಊರು ಕೊಯಮತ್ತೂರ್ ನನ್ನನ್ನು ನನ್ನ ತಾಯಿ ಬಿಟ್ಟು ಹೋಗಿದ್ದಾರೆ ಇಂದು ತಿಳಿಸಿದರು.
ಇದನ್ನು ಮನಗಂಡ ರವಿಕಕ್ಕೆಪದವು, ಶಿವ ಭಟ್, ರಾಧಾಕೃಷ್ಣ, ಹರೀಶ್ ಇಂಜಾಡಿ, ಗ್ರಾಮ ಪಂಚಾಯತ್ ಮತ್ತಿತರರು ಸೇರಿ ಈ ವ್ಯವಸ್ಥೆ ಮಾಡಿದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆ್ಯಂಬುಲೆನ್ಸ್ ಮೂಲಕ ಕಳುಹಿಸಿ ಕೊಡಲಾಯಿತು . ಈ ಬಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಎ.ಸಿ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಠಾಣೆಯ ಸಹಾಯ ಪಡೆಯಲಾಯಿತು.
ಶಿವ ಭಟ್ ರವರು ಕೊಯಮುತ್ತೂರಿನ ಸ್ಥಳಿಯ ಆಶ್ರಮಕ್ಕೆ ವಿಷಯವನ್ನು ತಿಳಿಸಿದಾಗ ಶಿವ ಭಟ್ ರವರು ಅವರ ಫೋನ್ ನಂಬರ್ ಗಳನ್ನು ತೆಗೆದುಕೊಂಡು ಅವರ ಮನೆ ಅವರಿಗೆ ತಿಳಿಸಿದಾಗ ನಾವು ಅವರನ್ನು ತುಂಬಾ ಹುಡುಕಾಡುತ್ತಿದ್ದೆವು ಎಂದು ತಿಳಿಸಿದರು . ನಾವು ಇವತ್ತೇ ಅವನನ್ನು ಕರೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದರು. ಆಗ ಜನಸ್ನೇಹಿ ಆಶ್ರಮಕ್ಕೆ ಸೇರಿಸಲಾಗಿದೆ ಎಂದು ತಿಳಿಸಿದರು .
ಅವರ ತಾಯಿ ನನ್ನ ಮಗನನ್ನು ಹುಡುಕಿಕೊಟ್ಟದ್ದಕ್ಕಾಗಿ ರವಿಕಕ್ಕೆಪದವು, ಶಿವ ಭಟ್, ರಾಧಾಕೃಷ್ಣ, ಹರೀಶ್ ಇಂಜಾಡಿ, ಮತ್ತಿತರರಿಗೆ ಧನ್ಯವಾದವನ್ನು ತಿಳಿಸಿದರು.