September 6, 2026
Uncategorized

ಸುಬ್ರಹ್ಮಣ್ಯದಲ್ಲಿದ್ದ ನಿರ್ಗತಿಕ ಬೆಂಗಳೂರಿನ ಜನ ಸ್ನೇಹಿ ಕೇಂದ್ರಕ್ಕೆ

ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಮಾನಸಿಕ ಅಸ್ವಸ್ಥ ರಂತೆ ತಿರುಗಾಡುತಿದ್ದ ವ್ಯಕ್ತಿ ಇಂಟರ್ನ್ಯಾಷನಲ್ ಸೀನಿಯರ್ ಚೇಂಬರ್ ಮತ್ತಿತರರು ಸೇರಿ ಬೆಂಗಳೂರಿನ ಜನ ಸ್ನೇಹಿ ಆಶ್ರಮಕ್ಕೆ ಕಳುಹಿಸಿದ ಘಟನೆ ಜು.23 ರಂದು ನಡೆದಿದೆ.

ಸುಮಾರು ದಿನಗಳಿಂದ ಸುಬ್ರಹ್ಮಣ್ಯದ ಆಸು ಪಾಸಿನಲ್ಲಿ ತಿರುಗಾಡುತ್ತಾ ಮತ್ತು ರೋಡ್ ಬದಿಯಲ್ಲಿ ಮಲಗುತ್ತಿದ್ದರು. ಇದನ್ನು ಕಂಡ ಸ್ಥಳೀಯರು ಇಂಟರ್ನ್ಯಾಷನಲ್ ಸೀನಿಯರ್ ಚೇಂಬರ್ ನ ಅಧ್ಯಕ್ಷರಾದ ಡಾ. ರವಿ ಕಕ್ಕೆ ಪದವು ಅವರಿಗೆ ತಿಳಿಸಿದರು .

ಡಾ| ರವಿ ಕಕ್ಕೆಪದವುರವರು ವಿಚಾರಿಸಿದಾಗ ನನ್ನ ಊರು ಕೊಯಮತ್ತೂರ್ ನನ್ನನ್ನು ನನ್ನ ತಾಯಿ ಬಿಟ್ಟು ಹೋಗಿದ್ದಾರೆ ಇಂದು ತಿಳಿಸಿದರು.

ಇದನ್ನು ಮನಗಂಡ ರವಿಕಕ್ಕೆಪದವು, ಶಿವ ಭಟ್, ರಾಧಾಕೃಷ್ಣ, ಹರೀಶ್‌ ಇಂಜಾಡಿ, ಗ್ರಾಮ ಪಂಚಾಯತ್ ಮತ್ತಿತರರು ಸೇರಿ ಈ ವ್ಯವಸ್ಥೆ ಮಾಡಿದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆ್ಯಂಬುಲೆನ್ಸ್ ಮೂಲಕ ಕಳುಹಿಸಿ ಕೊಡಲಾಯಿತು . ಈ ಬಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಎ.ಸಿ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಠಾಣೆಯ ಸಹಾಯ ಪಡೆಯಲಾಯಿತು.

ಶಿವ ಭಟ್ ರವರು ಕೊಯಮುತ್ತೂರಿನ ಸ್ಥಳಿಯ ಆಶ್ರಮಕ್ಕೆ ವಿಷಯವನ್ನು ತಿಳಿಸಿದಾಗ ಶಿವ ಭಟ್ ರವರು ಅವರ ಫೋನ್ ನಂಬರ್ ಗಳನ್ನು ತೆಗೆದುಕೊಂಡು ಅವರ ಮನೆ ಅವರಿಗೆ ತಿಳಿಸಿದಾಗ ನಾವು ಅವರನ್ನು ತುಂಬಾ ಹುಡುಕಾಡುತ್ತಿದ್ದೆವು ಎಂದು ತಿಳಿಸಿದರು . ನಾವು ಇವತ್ತೇ ಅವನನ್ನು ಕರೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದರು. ಆಗ ಜನಸ್ನೇಹಿ ಆಶ್ರಮಕ್ಕೆ ಸೇರಿಸಲಾಗಿದೆ ಎಂದು ತಿಳಿಸಿದರು .

ಅವರ ತಾಯಿ ನನ್ನ ಮಗನನ್ನು ಹುಡುಕಿಕೊಟ್ಟದ್ದಕ್ಕಾಗಿ ರವಿಕಕ್ಕೆಪದವು, ಶಿವ ಭಟ್, ರಾಧಾಕೃಷ್ಣ, ಹರೀಶ್‌ ಇಂಜಾಡಿ, ಮತ್ತಿತರರಿಗೆ ಧನ್ಯವಾದವನ್ನು ತಿಳಿಸಿದರು.

Related posts

ಸಂಪೂರ್ಣ ಹಾಳಾದ ಧರ್ಮಸ್ಥಳ-ಮುಳಿಕ್ಕಾರು ರಸ್ತೆ: ಶಾಲಾ ಮಕ್ಕಳು ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣ, ಅಲ್ಲಲ್ಲಿ ಹೂತು ಹೋಗುವ ವಾಹನಗಳು

Suddi Udaya

ಅರಸಿನಮಕ್ಕಿ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಕಿಲ್ಲೂರು ಇರ್ಷಾದುಶ್ಶಿಬಿಯಾನ್ ಅರಬಿಕ್ ಮದರಸ ವಿದ್ಯಾರ್ಥಿಗಳಿಂದ ವಿಶ್ವ ಪರಿಸರ ದಿನಾಚರಣೆ

Suddi Udaya

ಸೌತಡ್ಕ ಗಣಪತಿ ದೇವಸ್ಥಾನದ ಹೆಸರಿನಲ್ಲಿ ಇನ್ಟಾ ಗ್ರಾಮ್ ಪೇಜ್ ದುರುಪಯೋಗ-ನಾಲ್ವರು ವಶಕ್ಕೆ

Suddi Udaya

ಕೊಯ್ಯೂರು ಸರಕಾರಿ ಪ್ರೌಢಶಾಲೆಯ ಬಾಲಕಿಯರ ಕಬಡ್ಡಿ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ನವ ಭಾರತ’ ಸಂಘಟನೆಯ ಆಶ್ರಯದಲ್ಲಿ ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅ. ಹಿ. ಪ್ರಾ. ಶಾಲೆಯಲ್ಲಿ ಮಕ್ಕಳ ಸಂಸ್ಕಾರ ಶಿಬಿರದ ಉದ್ಘಾಟನೆ

Suddi Udaya
error: Content is protected !!