April 2, 2025
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಸತೀಶ್ ಕೆ. ಕಾಶಿಪಟ್ಣ, ಉಪಾಧ್ಯಕ್ಷರಾಗಿ ದಿವಾಕರ ಭಂಡಾರಿ

ಬೆಳ್ತಂಗಡಿ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಸತೀಶ್ ಕೆ.ಕಾಶಿಪಟ್ಣ, ಉಪಾಧ್ಯಕ್ಷರಾಗಿ ದಿವಾಕರ ಭಂಡಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಆಡಳಿತ ಮಂಡಳಿಗೆ ಐದು ವರ್ಷಗಳ ಅವಧಿಗೆ ನಿರ್ದೇಶಕರ ಸ್ಥಾನದ ಚುನಾವಣೆ ಜು.14 ನಿಗದಿಯಾಗಿತ್ತು. ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಮಹಿಳಾ ಮೀಸಲು ಸ್ಥಾನಕ್ಕೆ ಮೀಸಲಿರಿಸಿದ ಸ್ಥಾನಗಳಿಂದ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸುಂದರ ಗೌಡ ಇಚ್ಚಿಲ ಉಜಿರೆ, ಮಹಾವೀರ ಜೈನ್ ನಾರಾವಿ, ದುಗ್ಗಪ್ಪ ಗೌಡ ತಣ್ಣೀರುಪಂಥ, ಸಂಜೀವ ಎಲ್ ನಾರಾವಿ, ಪ್ರಶಾಂತ್ ಬಿ. ಬಡಕೋಡಿ, ಪ್ರವೀಣ್ ಗಿಲ್ಬರ್ಟ್ ಪಿಂಟೋ ಕಾಶಿಪಟ್ಣ, ಸವಿತಾ ರಾಜೇಶ್ ಶೆಟ್ಟಿ ಪೆರಾಡಿ, ಗುಣವತಿ ಕುಕ್ಕೇಡಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾ ಉಸ್ತುವಾರಿಯಾಗಿ ಶೇಖರ್ ಕುಕ್ಕೇಡಿ , ಚುನಾವಣಾಧಿಕಾರಿಯಾಗಿ ಪ್ರತಿಮಾ ಭಾಗವಹಿಸಿದ್ದರು. ಸಂಘದ ಕಾರ್ಯದರ್ಶಿ ಆದರ್ಶ್ ಜೈನ್ ಸಹಕರಿಸಿದರು.

Related posts

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಭೇಟಿ

Suddi Udaya

ಉಜಿರೆ: ಸೌರಭ ಆರ್ಕೇಡ್ ನಲ್ಲಿ ನೂತನ “ಸೆವೆನ್ತ್ ಹೆವೆನ್ (7th Heaven)” ಕೇಕ್ ಹೌಸ್ ಶುಭಾರಂಭ

Suddi Udaya

ಫೆ.6 ರಿಂದ ಫೆ.17 ರವರೆಗೆ ತಾಲೂಕಿನ ಗ್ರಾ.ಪಂ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ- ಸ್ತಬ್ದಚಿತ್ರ ಸಂಚಾರ

Suddi Udaya

ಕುತ್ರೊಟ್ಟು ಬಳಿ ಮಗುವಿಗೆ ದ್ವಿಚಕ್ರ ವಾಹನ ಢಿಕ್ಕಿ

Suddi Udaya

ಉಪ ತಹಸಿಲ್ದಾರ್ ಸುನಿಲ್ ಹೃದಯಘಾತದಿಂದ ನಿಧನ

Suddi Udaya

ಜಾನುವಾರು ಸಾಗಾಟ ನಿಷೇಧದ ಆದೇಶ ವಾಪಸ್

Suddi Udaya
error: Content is protected !!