April 11, 2025
ಅಪರಾಧ ಸುದ್ದಿ

ಮುಂಡಾಜೆ ಸೀಟು ಬಳಿ ಬೊಲೇರೋ ಬೈಕ್ ಗೆ ಡಿಕ್ಕಿ : ಶಾಲಾ ಬಾಲಕಿ ಆಸ್ಪತ್ರೆಯಲ್ಲಿ ಮೃತ್ಯು

ಬೆಳ್ತಂಗಡಿ: ಮುಂಡಾಜೆ ಸೀಟು ಬಳಿ ಬೊಲೇರೋ ಬೈಕ್ ಗೆ ಹಿಂದಿನಿಂದ ಬಂದು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕಿನಲ್ಲಿದ್ದ ಬಾಲಕಿ ಗಂಭೀರ ಗಾಯಗೊಂಡು ಬೆಳ್ತಂಗಡಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮೃತ ಪಟ್ಟ ಘಟನೆ ನಡೆದಿದೆ.

ಕಲ್ಮಂಜದ ಗುರುಪ್ರಸಾದ್ ಗೋಖಲೆ ಅವರ ಪುತ್ರಿ ಅನರ್ಘ್ಯ(9ವಷ೯) ಮೃತ ಪಟ್ಟ ಬಾಲಕಿ. ಈಕೆ
ಉಜಿರೆ ಎಸ್‌ಡಿಎಂ ಶಾಲೆಯ 4ನೇ ವಿದ್ಯಾರ್ಥಿನಿಯಾಗಿದ್ದಾರೆ.

ಗುರುಪ್ರಸಾದ್ ಉಜಿರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ವಿದ್ಧು, ಇಂದು ಮಧ್ಯಾಹ್ನ ನಂತರ ಶಾಲೆಗೆ ರಜೆ ಇರುವುದರಿಂದ ಅವರ ಮೂಲ ಮನೆ ಮುಂಡಾಜೆ ಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಡಿಕ್ಕಿ ಹೊಡೆದ ಬೊಲೇರೋ ಪರಾರಿಯಾಗಿದ್ದು ಊರವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Related posts

ಕ್ಷುಲ್ಲಕ ಕಾರಣಕ್ಕೆ ಗಲಾಟೆ: ನಾಲ್ವರ‌ ಮೇಲೆ ಪ್ರಕರಣ ದಾಖಲು

Suddi Udaya

ನಿಡ್ಲೆ, ಕರಿಮಣೇಲು ಹಾಗೂ ಕನ್ಯಾಡಿ ಪಂಚಾಯತ್ ಮಟ್ಟದ ರಸ್ತೆ ಕಾಮಗಾರಿ ಗುಣಮಟ್ಟ ಪರಿಶೀಲಿಸಿ ವರದಿ ನೀಡುವುದಕ್ಕಾಗಿ ಲಂಚಕ್ಕೆ ಬೇಡಿಕೆ: ಮಂಗಳೂರು ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಲೋಕಾಯುಕ್ತ ಬಲೆಗೆ

Suddi Udaya

ಬಹುನಿರೀಕ್ಷಿತ ರಾನಿ ಚಲನಚಿತ್ರದ ನಾಯಕ ನಟ ಗಂಭೀರ ಗಾಯ: ಕಾರ್ಯಕಾರಿ ನಿರ್ಮಾಪಕ ಕೊಕ್ರಾಡಿಯ ಗಿರೀಶ್ ಹೆಗ್ಡೆ ಅದೃಷ್ಟವಶಾತ್ ಪಾರು

Suddi Udaya

ಕಳೆಂಜ: ಅಕ್ರಮ ಗೋ ಸಾಗಾಟ: ಇಬ್ಬರ ಬಂಧನ

Suddi Udaya

ಕಾರೊಂದು ಧರ್ಮಸ್ಥಳದಿಂದ ಚಾರ್ಮಾಡಿಯವರೆಗೆ ಹಲವು ವಾಹನಗಳಿಗೆ ಡಿಕ್ಕಿ: ಯುವಕನನ್ನು ಬಂಧಿಸಿದ ಪೋಲಿಸರು

Suddi Udaya

ಮಂಗಳೂರು ಮಾಂಡೋವಿ ಮೋಟಾರ್ಸ್ ಉದ್ಯೋಗಿ, ಬೆಳ್ತಂಗಡಿ ತಾಲೂಕಿನ ಮುಂಡೂರು ನಿವಾಸಿ ಬೈಕ್ ಅಪಘಾತದಲ್ಲಿ ಮೃತ್ಯು

Suddi Udaya
error: Content is protected !!