24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಕುಪ್ಪೆಟ್ಟಿ :ಕುಪ್ಪೆಟ್ಟಿ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ(CRP)ಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಧ್ಯಾ ಬಿ. ಗೋಳಿತೊಟ್ಟು ಶಾಲೆಗೆ ವರ್ಗಾವಣೆ

ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ಕ್ಲಸ್ಟರ್ನಲ್ಲಿ ಆರು ವರ್ಷಗಳಿಂದ ಸಮೂಹ ಸಂಪನ್ಮೂಲ ವ್ಯಕ್ತಿ(CRP)ಯಾಗಿ ಸೇವೆಯನ್ನು ಸಲ್ಲಿಸಿದ ಶ್ರೀಮತಿ ಸಂಧ್ಯಾ.ಬಿ ಇವರು ಪುತ್ತೂರು ತಾಲೂಕಿನ ನೆಲ್ಯಾಡಿಯ ಸಮೀಪದ ಸ. ಉ.ಪ್ರಾ ಶಾಲೆ ಗೋಳಿತೊಟ್ಟು ಇಲ್ಲಿಗೆ ಶಿಕ್ಷಕಿಯಾಗಿ ವರ್ಗಾವಣೆ ಹೊಂದಿದ್ದಾರೆ.

2018-19ನೇ ಸಾಲಿನಲ್ಲಿ ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ಕ್ಲಸ್ಟರ್ ನಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ(CRP )ಸೇವೆ ಪ್ರಾರಂಭಿಸಿದ ಇವರು ಆರು ವರ್ಷಗಳಿಂದ ಅತ್ಯಂತ ಪ್ರಾಮಾಣಿಕತೆ ನಿಷ್ಠೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿ ತಮ್ಮ ಕ್ಲಸ್ಟರ್ನಲ್ಲಿ ಬರುವ 19 ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿ ಬೆಳ್ತಂಗಡಿ ತಾಲೂಕಿನಲ್ಲಿಕುಪ್ಪೆಟ್ಟಿ ಕ್ಲಸ್ಟರ್ ಅನ್ನು ಮಾದರಿಯನ್ನಾಗಿಸಿದ ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವ ಇವರದು.

ಎಲ್ಲಾ ಸಹೋದ್ಯೋಗಿ ಬಂಧುಗಳ ಜೊತೆ ಪ್ರೀತಿ ತಾಳ್ಮೆಯಿಂದ ಕಾರ್ಯನಿರ್ವಹಿಸುತ್ತಿದ್ದ ಇವರನ್ನು ಜುಲೈ 27 ರಂದು ಸ.ಕಿ.ಪ್ರಾ ಶಾಲೆ ನೆಕ್ಕಿಲು ಇಲ್ಲಿ ಕುಪ್ಪೆಟ್ಟಿ ಕ್ಲಸ್ಟರ್ನ ವತಿಯಿಂದ ಅತ್ಯಂತ ಗೌರವ ಪೂರ್ವಕವಾಗಿ ಬೀಳ್ಕೊಡಲಾಯಿತು.

Related posts

ತೋಟತ್ತಾಡಿ: ದೊರ್ತಾಡಿ ನಿವಾಸಿ ಶಿವಣ್ಣ ಕುಂಬಾರ ನಿಧನ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಪ್ರಮಾಣ ವಚನ ಸ್ವೀಕಾರ: ಪ್ರಭು ಶ್ರೀರಾಮಚಂದ್ರನ ಹೆಸರಿನಲ್ಲಿ ಪ್ರಮಾಣ ವಚನ ಮಾಡಿ ಗಮನ ಸೆಳೆದ ಹರೀಶ್ ಪೂಂಜ

Suddi Udaya

ಲಾಯಿಲ ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ ಕೂಸಿನ ಮನೆಯ ನಿರ್ವಾಹಕರಿಗೆ 7 ದಿನಗಳ ತರಬೇತಿ ಕಾರ್ಯಾಗಾರ ಆರಂಭ

Suddi Udaya

ಶಾಲಾ ವಾಹನ ಹಾಗೂ ಕಾರ್ ನಡುವೆ ರಸ್ತೆ ಅಪಘಾತ

Suddi Udaya

ಬೆಳ್ತಂಗಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಕಲರವ-2024

Suddi Udaya

ಕಾಜೂರು ಹಯಾತುಲ್ ಔಲಿಯಾ ದರ್ಗಾ ಶರೀಫ್ ನಲ್ಲಿ ಸಂಭ್ರಮದ ಈದ್ ಆಚರಣೆ

Suddi Udaya
error: Content is protected !!