ನೆರಿಯ: ನೆರಿಯ ಗ್ರಾಮದಲ್ಲಿ ಜು.25ರಂದು ಸುರಿದ ವಿಪರೀತ ಗಾಳಿ ಮಳೆಗೆ ಮನೆಗಳಿಗೆ ಹಾನಿ ಉಂಟಾಗಿದ್ದು, ಇಲ್ಲಿನ ಜನರು ಮನೆಯಲ್ಲಿ ವಾಸಿಸಲು ತುಂಬ ಭಯಪಡುವ ವಾತಾವರಣ ನಿರ್ಮಾಣವಾಗಿದ್ದು, ಹಾನಿಗೊಳಗಾದ ಮನೆಗಳಿಗೆ ಶಾಸಕ ಹರೀಶ್ ಪೂಂಜ ಜು.27ರಂದು ಭೇಟಿ ನೀಡಿ, ಪರಿಶೀಲನೆ ನಡೆಸಿ ಧೈರ್ಯ ತುಂಬಿ ತಮ್ಮ ಸ್ವಂತ ಖರ್ಚಿನಲ್ಲಿ ಸಣ್ಣ ಮಟ್ಟಿನ ಧನಸಹಾಯವನ್ನು ಸ್ಥಳದಲ್ಲಿ ನೀಡಿ ಮಾನವೀಯತೆ ಮೆರೆದು ಹೆಚ್ಚಿನ ಪರಿಹಾರಕ್ಕಾಗಿ ಸರಕಾರಕ್ಕೆ ಮತ್ತು ಸಂಬಂಧಪಟ್ಟ ಇಲಾಖೆಗೆ ತಿಳಿಸುತ್ತೇನೆ ಎಂದು ಭರವಸೆ ನೀಡಿದರು.

ಕೃಷ್ಣಪ್ಪ ಕೋಲೋಡಿ, ಪದ್ಮನಾಭ ಆಚಾರಿ, ದಯಾನಂದ ಗೌಡ, ಅಣ್ಣುಗೌಡ, ಕುಳೆನಾಡಿ ರಾಮಯ್ಯ ಗೌಡ, ಜಯಂತ ಪಾದೆ, ಆನಂದ ಅಣಿಯೂರು, ಶೇಖರ ಕುಳೆನಾಡಿ, ನವೀನ್ ಕುಳೆನಾಡಿ, ಗಂಗಾಧರ ಗೌಡ, ಗಣೇಶ್ ಕಡ್ಡಿಬಾಗಿಲು, ಶಾಜಿ ಪರ್ವಕರ್ ರವರ ಮನೆಗೆ ಮತ್ತು ಶಾಲೆಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ನೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ, ಉಪಾಧ್ಯಕ್ಷೆ ಸಜಿತಾ, ಸದಸ್ಯರಾದ ಕುಶಲ, ವೇದಾವತಿ, ದಿನೇಶ್, ಸವಿತಾ, ಮಾಲತಿ, ಸಚಿನ್, ಬಾಬು ಗೌಡ ಹಾಗೂ ಉಜಿರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯಶವಂತ್ ಗೌಡ, ಶಕ್ತಿ ಕೇಂದ್ರ ಅದ್ಯಕ್ಷ ವಿಶ್ವನಾಥ್ ಉಪಸ್ಥಿತರಿದ್ದರು.
