September 6, 2026
Uncategorized

ಬೆಳ್ತಂಗಡಿ: ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್‌ನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ನೆಲ್ಯಾಡಿಯಲ್ಲಿ ಜು.26ರಂದು ಭಾರತೀಯ ಸೇನೆಯು ಪಾಕಿಸ್ತಾನವನ್ನು ಕಾರ್ಗಿಲ್ ಯುದ್ಧದಲ್ಲಿ ಪರಾಭವಗೊಳಿಸಿದ ಸವಿ ನೆನಪಿನ ಕಾರ್ಗಿಲ್ ವಿಜಯ ದಿವಸ್ ಅದ್ದೂರಿಯಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ ಯೋಧರಾದ ನೈನಾನ್ ಓಲಿಕಲ್ (ಭಾರತೀಯ ನೌಕಾ ಪಡೆ), ಜೋನ್ ಕಾರ್ಮಲ್ ಭವನ್ (ಭಾರತೀಯ ಭೂ ಸೇನೆ), ಬೇಬಿ ಮಟ್ಟಮ್ (ಭಾರತೀಯ ಭೂ ಸೇನೆ), ಅಲೆಕ್ಸ್ ಚೆಛಬಿತ್ತಾನಮ್ (ಭಾರತೀಯ ಭೂ ಸೇನೆ), ಟೋಮಿ ಚುಂಡಯಿಲ್ (ಭಾರತೀಯ ಭೂ ಸೇನೆ), ಮತ್ತಚ್ಚನ್ ವಾಯಪ್ಪಳ್ಳಿ (ಭಾರತೀಯ ಭೂ ಸೇನೆ), ವಿನೋದ್ ಎ.ಜೆ. (ವಾಯುಸೇನೆ ಸಿ.ಆರ್.ಪಿ.ಎಫ್), ಶ್ರೀಮತಿ ಲಿಸಿ ಡೊಮಿನಿಕ್ (ಆರ್‌ಪಿಎಫ್ ಗಡಿ ರಕ್ಷಣಾ ಪಡೆ ಕಮಾಂಡೆಂಟ್), ಶ್ರೀಮತಿ ಅನ್ನಮ್ಮ ಯೇಸುದಾಸ್ (ಆರ್‌ಪಿಎಫ್ ಗಡಿ ರಕ್ಷಣಾ ಪಡೆ ಕಮಾಂಡೆಂಟ್) ಇವರುಗಳನ್ನು ಅಭಿನಂದಿಸಿ ಗೌರವಿಸಲಾಯಿತು.

ಯುದ್ಧದಲ್ಲಿ ಮೃತಪಟ್ಟ ಸೈನಿಕರಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಧರ್ಮ ಗುರು ವಂ. ಫಾ. ಶಾಜಿ ಮಾತ್ಯು ಸೈನಿಕರ ಸೇವೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು. ಪುತ್ತೂರು ಧರ್ಮಾಧ್ಯಕ್ಷ ಗೀವರ್ಗಿಸ್ ಮಾರ್ ಮಕಾರಿಯೋಸ್ ಅವರು ಸೈನಿಕರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಅಲೆಕ್ಸ್, ಜೋಬಿನ್, ರೆ. ಫಾ. ಕೈಪನಡ್ಕ, ರೆ. ಫಾ. ಬಿಜು ಜೋನ್ ಕುನ್ನತೇತ್ತ್, ಫಾ. ನೋಮಿಸ್, ಕೆ.ಎಸ್.ಎಂ.ಸಿ.ಯ ಅಧ್ಯಕ್ಷ ಶಿಬು ಪನಚಿಕ್ಕಲ್, ರಂಜನ್ ರಾಯಲ್ಸ್, ಬಿನಿಶ್ ರೊಯ್ ಕೊಳಂಗರಾತ್ತ್ ಮೊದಲಾದವರು ಭಾಗವಹಿಸಿದ್ದರು.

Related posts

ಸಂಪೂರ್ಣ ಹದಗೆಟ್ಟ ಕರಂಬಾರು ಬಂತಡ್ಕದ ರಸ್ತೆ ದುರಸ್ತಿಗಾಗಿ ಸ್ಥಳೀಯರಿಂದ ಅಗ್ರಹ

Suddi Udaya

ಪಾಡ್ದನ,ಸಂಧೀ ಮುಂತಾದ ಅನೇಕ ಜನಪದೀಯ ಸಾಂಸ್ಕೃತಿಕ ಬೇರುಗಳು ಮುಂದಿನ ತಲೆಮಾರಿಗೆ ತಿಳಿಸುವ ನಿಟ್ಟಿನಲ್ಲಿ ಹೆಗ್ಗೋಡಿನ ನೀನಾಸಂ ,ರಂಗಾಯಣದಂತಹ ರಂಗ ಶಾಲೆ ತೆರೆಯುವ ಯೋಚನೆ: ಸಂಪತ್ ಬಿ ಸುವರ್ಣ

Suddi Udaya

ಅಳದಂಗಡಿ: ವಿಶ್ವಾಸ್ ಭಂಡಾರಿ ರವರಿಗೆ ಸನ್ಮಾನ

Suddi Udaya

ಜಡಿಮಳೆ: ಧರ್ಮಸ್ಥಳ ಪಂಜುರ್ಲಿ ಗುರಿ ಶ್ರೀನಿವಾಸ ರವರ ಮನೆಯ ಹಿಂಭಾಗ ಗುಡ್ಡ ಕುಸಿತ: ಮನೆಗೆ ಹಾನಿ

Suddi Udaya

ಗರ್ಡಾಡಿ: ಗಾಳಿ ಮಳೆಗೆ ಮಣ್ಣು ಕುಸಿತ, ಮನೆಗೆ ಹಾನಿ

Suddi Udaya

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ಸಭೆ. ನೂತನ ಜಿಲ್ಲಾ ಸಂಘಟನಾ ಅಧ್ಯಕ್ಷರಾಗಿ ಪ್ರಕಾಶ್ ಕಾರಂತ್ ನರಿಕೊಂಬು ಆಯ್ಕೆ

Suddi Udaya
error: Content is protected !!