24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕವರದಿ

ನೆಲ್ಯಾಡಿ: ಸಂತ ಅಲ್ಫೋನ್ಸ ಚರ್ಚ್‌ನಲ್ಲಿ ಪುತ್ತೂರು ಧರ್ಮಾಧ್ಯಕ್ಷ ಗೀವರ್ಗೀಸ್ ಮಾರ್ ಮಕಾರಿಯೋಸ್ ಅವರಿಂದ ಪೂಜಾರ್ಪಣೆ

ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಜುಲೈ 19ರಂದು ಆರಂಭಗೊಂಡ ನವದಿನಗಳ ನೋವೇನಾ ಮಹೋತ್ಸವದ ಎಂಟನೇ ದಿನದಲ್ಲಿ ಪುತ್ತೂರು ಸೀರೋ ಮಲಂಕರ ಧರ್ಮ ಪ್ರಾಂತ್ಯ ಧರ್ಮಾಧ್ಯಕ್ಷರಾದ ಗೀವರ್ಗೀಸ್ ಮಾರ್ ಮಕಾರಿಯೋಸ್ ಬಲಿ ಪೂಜೆಯನ್ನು ಅರ್ಪಿಸಿದರು ಮತ್ತು ಸಂತ ಅಲ್ಫೋನ್ಸ ನೋವೇನಾದ ಆಶೀರ್ವಾದವನ್ನು ನೀಡಿದರು.

ಪರಮ ಪೂಜ್ಯರು ಸೇವೆ, ತ್ಯಾಗ, ಮತ್ತು ದೇವರಲ್ಲಿನ ಪ್ರೀತಿಯನ್ನು ಬಾಳಿನಲ್ಲಿ ಮೈಗೂಡಿಸಿಕೊಂಡಾಗ, ಎಲ್ಲವನ್ನು ಸಹಿಸುವ ತಾಳುವ ಶಕ್ತಿಯನ್ನು ಪ್ರತಿಯೋರ್ವ ವ್ಯಕ್ತಿ ಜೀವನದಲ್ಲಿ ಪಡೆಯಬಹುದೆಂದು ಕರೆ ನೀಡಿದರು.

ಬೇಥನಿ ಸಂಸ್ಥೆಗಳ ವಂದನಿಯ ವರ್ಗೀಸ್, ಕೈಪನಡ್ಕ ಪುತ್ತೂರು ಧರ್ಮ ಪ್ರಾಂತ್ಯದ ಚಾನ್ಸಲರ್ ವಂದನಿಯ ಫಾ. ಬಿಜು ಜೋನ್, ಸೆಂಟ್ ಜೋರ್ಜ್ ಸಂಸ್ಥೆಗಳ ಸಂಚಾಲಕರಾದ ವಂದನಿಯ ಫಾ. ನೋಮಿಸ್ ಸಹಾಯಕರಾಗಿ ಭಾಗವಹಿಸಿ ಪ್ರಾರ್ಥಿಸಿದರು. ವಂದನಿಯ ಫಾ. ಎಬಿನ್ ಸ್ವಾಗತಿಸಿ ಧರ್ಮ ಗುರುಗಳಾದ ವಂದನಿಯ ಶಾಜಿ ಮಾತ್ಯು ವಂದಿಸಿದರು.

Related posts

ಲಾಯಿಲ: ಪಿ.ಎಮ್ ವಿಶ್ವಕರ್ಮ ಯೋಜನೆಯ ಮಾಹಿತಿ ಹಾಗೂ ಆನ್ಲೈನ್ ನೋಂದಾವಣೆ ಕಾರ್ಯಕ್ರಮ

Suddi Udaya

ಉಜಿರೆಯ ಎಸ್.ಡಿ.ಎಂ ಪ.ಪೂ ಕಾಲೇಜಿನ ಐವತ್ತು ವಿದ್ಯಾರ್ಥಿಗಳಿಗೆ ಸಂಸ್ಕೃತಭಾಷಾ ವಿದ್ಯಾರ್ಥಿವೇತನ

Suddi Udaya

ಕೇಳ್ತಾಜೆ ಉಮರುಲ್ ಫಾರೂಕ್ ಜುಮಾ ಮಸ್ಜಿದ್ ಮತ್ತು ಸಿರಾಜುಲ್ ಹುದಾ ಮದರಸದಲ್ಲಿ ಈದುಲ್ ಫಿತರ್ ಆಚರಣೆ

Suddi Udaya

ಸುಲ್ಕೇರಿ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀರಾಮ ಪ್ರೌಢಶಾಲಾ ಪ್ರಾರಂಭೋತ್ಸವ

Suddi Udaya

ಕಾಪು-ಉಪರಡ್ಕ ದೈವಗಳ ವಾರ್ಷಿಕ ಜಾತ್ರೆಗೆ ಚಾಲನೆ

Suddi Udaya

ಆರೋಗ್ಯ ರಕ್ಷಕರಿಗೆ ರಕ್ಷೆ ಕಟ್ಟುವ ಮೂಲಕ ವಿಭಿನ್ನವಾಗಿ ರಕ್ಷಾಬಂಧನ ಆಚರಿಸಿದ ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು

Suddi Udaya
error: Content is protected !!