September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಕೃಷಿ ಉದ್ಯಮಿ ತರಬೇತಿಯ ಸಮಾರೋಪ ಸಮಾರಂಭ

ಉಜಿರೆ : ನೀವು ಮಾಡುವ ಸ್ವ ಉದ್ಯೋಗದಿಂದ ಇತರಿಗೆ ಉದ್ಯೋಗ ನೀಡುವುದರ ಮೂಲಕ ನಿಮ್ಮ ಉದ್ಯಮಕ್ಕೆ ನೀವೇ ಬಾಸ್ ಆಗುತ್ತೀರಿ. ಸರಕಾರ ಮತ್ತು ಬ್ಯಾಂಕಿನಿಂದ ಆರ್ಥಿಕ ನೆರವು ಪಡೆದುಕೊಂಡ ಕೃಷಿಯನ್ನು ಒಂದು ಉದ್ಯಮವನ್ನಾಗಿ ಮಾಡಲು ತುಂಬಾ ಅವಕಾಶ ಇದೆ. ಕೃಷಿ ಚಟುವಟಿಕೆಗೆ ಬ್ಯಾಂಕ್ ಇವತ್ತು ಕಡಿಮೆ ಬಡ್ಡಿ ದರದಲ್ಲಿ ಬೇಕಾದಷ್ಟು ಸಾಲ ನೀಡುತ್ತದೆ ಅದರ ಸದುಪಯೋಗ ಮಾಡಿಕೊಂಡು ನೀವು ಕೃಷಿ ಉದ್ಯಮಿಯಾಗಿ ಜೊತೆಗೆ ಇತರರನ್ನು ಸಹ ಬ್ಯಾಂಕಿನ ನೆರವು ಪಡೆದುಕೊಳ್ಳುವಂತೆ ಪ್ರೇರಣೆ ನೀಡಿ ಎಂದು ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಛೇರಿಯ ಮಾಹಾ ಪ್ರಬಂಧಕರಾದ ಸುಧಾಕರ ಕೊಟ್ಟಾರಿ ಅಭಿಪ್ರಾಯ ಪಟ್ಟರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 13 ದಿನಗಳ ಕಾಲ ನಡದೆ ಕೃಷಿ ಉದ್ಯಮಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ಮತ್ತು ಕೆನರಾ ಬ್ಯಾಂಕಿನಲ್ಲಿ ಹೊಸತಾಗಿ ಆರಂಭಿಸಿದ ಜನಧನ್ ಖಾತೆ ಹಾಗೂ ಕೆನರಾ ಏಂಜಲ್ ಖಾತೆಯ ಪುಸ್ತಕ, ವಿತ್ತರಿಸಿ ಮಾತನಾಡಿದರು. ಸ್ವ ಉದ್ಯೋಗ ನಮ್ಮ ಹೆಮ್ಮೆಯ ವೃತ್ತಿ ಯಾಗಬೇಕು. ಪಡೆದ ತರಬೇತಿಯನ್ನು ಉಪಯೋಗಿಸಿಕೊಂಡು ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮ ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಓಖಐಒ ಘಟಕದ ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಹರಿಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕೃಷಿ ಸಖಿಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದ್ದಾರೆ.

ಕಾರ್ಯಕ್ರಮ ದಲ್ಲಿ ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ.ವಿಜಯ ಕುಮಾರ್ ಉಪಸ್ಥಿತರಿದ್ದರು. ಭಾಗವಹಿಸಿದ್ದರು.

ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜೇಯ ಅವರು ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ವಂದಿಸಿದರು.

Related posts

ಉಜಿರೆ: “ಯಕ್ಷಸಿರಿ” ಪ್ರಶಸ್ತಿಗೆ ಆಯ್ಕೆಯಾದ ದಿವಾಕರ್ ದಾಸ್ ಕಾವಳಕಟ್ಟೆ ರವರಿಗೆ ಗೌರವಾರ್ಪಣೆ

Suddi Udaya

ಧರ್ಮಸ್ಥಳ: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ವೈದಾಧಿಕಾರಿ ಡಾ. ಚಂದ್ರಕಾಂತ್ ವರ್ಗಾವಣೆ

Suddi Udaya

ಧಮ೯ಸ್ಥಳ ಶರಾವತಿ ವಸತಿ ಗೃಹದ ಎದುರು ಅಸ್ವಸ್ಥಗೊಂಡು ಬಿದ್ದಿದ್ದ ಅಪರಿಚಿತ ವ್ಯಕ್ತಿ: ಆಸ್ಪತ್ರೆಗೆ ಸಾಗಿಸುವ ಹಂತದಲ್ಲಿ ಮೃತ್ಯು

Suddi Udaya

ಬೆಳ್ತಂಗಡಿ ವಿವಿಧ ಮಹಿಳಾ ಮಂಡಲಗಳ ಸಹಭಾಗಿತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ, ಮಹಿಳಾ ವಾಹನ ಜಾಥಾ ಕಾರ್ಯಕ್ರಮ

Suddi Udaya

ಜಮೀಯತುಲ್ ಫಲಾಹ್ ಉಡುಪಿ- ದ.ಕ ಕೇಂದ್ರ ಸಮಿತಿ ಕಾರ್ಯದರ್ಶಿಯಾಗಿ ಅಬ್ಬೋನು ಮದ್ದಡ್ಕ ಆಯ್ಕೆ

Suddi Udaya
error: Content is protected !!