April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೆಸಿಐ ವಲಯ-15ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ಜೆಸಿ ಜಯೇಶ್ ಬರೆಟ್ಟೊ ರವರಿಗೆ ಪ್ರತಿಷ್ಠಿತ “ಸಾಧನಾಶ್ರೀ ಪುರಸ್ಕಾರ”

ಬೆಳ್ತಂಗಡಿ: ಮಂಗಳೂರಿನಲ್ಲಿ ನಡೆದ ಜೆಸಿಐ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ವಿಭಾಗದ ಸಮ್ಮೇಳನ ವೈಭವ – 2024 ಕಾರ್ಯಕ್ರಮದಲ್ಲಿ ಜೆಸಿಐ ಮಡಂತ್ಯಾರಿನ ಪೂರ್ವಾಧ್ಯಕ್ಷರು, ವಲಯ 15ರ ಹೆಮ್ಮೆಯ ಪೂರ್ವ ವಲಯ ಉಪಾಧ್ಯಕ್ಷರು, ಹಾಗೂ ಮಡಂತ್ಯಾರು ಡ್ರೀಮ್ಸ್ ಡೆಕೋರೇಟರ್ಸ್ ಹಾಗೂ ಮೈಸ್ ಕಂಪ್ಯೂಟರಿನ ಮಾಲಕರಾದ ಜೇಸಿ ಜಯೇಶ್ ಬರೆಟ್ಟೊ ಅವರಿಗೆ ವೃತ್ತಿ ಮತ್ತು ಸಮಾಜಸೇವಾ ಕಾರ್ಯಸಾಧನೆಗಾಗಿ ಸಾಧನಾಶ್ರೀ- 2024 ಪ್ರಶಸ್ತಿ ನೀಡಿ ಜು.28 ರಂದು ಗೌರವಿಸಲಾಯಿತು.

2011 ರಲ್ಲಿ ಜೆಸಿಐ ಮಡಂತ್ಯಾರು ಮೂಲಕ ಜೇಸಿ ಆಂದೋಲನಕ್ಕೆ ಸದಸ್ಯರಾಗಿ ಸೇರ್ಪಡೆಗೊಂಡು ನಂತರ ಕೋಶಾಧಿಕಾರಿಯಾಗಿ, ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಜೇಸಿ ಸಪ್ತಾಹದ ಕಾರ್ಯಕ್ರಮ ಸಂಯೋಜಕರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿ 2016 ರಲ್ಲಿ ಜೆಸಿಐ ಮಡಂತ್ಯಾರಿನ ಘಟಕಾಧ್ಯಕ್ಷರಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದರು. ವೃತ್ತಿಯಲ್ಲಿ 24 ವರ್ಷಗಳ ಸುಧೀರ್ಘ ಅನುಭವ ಹೊಂದಿದ ಇವರು ಸಾಧನಾ ಶ್ರೀ ಪ್ರಶಸ್ತಿ ಪಡೆಯುವಲ್ಲಿ ಅರ್ಹ ವ್ಯಕ್ತಿಯೇ ಸರಿ.

Related posts

ಹೊಸ ನಿರೀಕ್ಷೆ ಮೂಡಿಸಿದ ಸಿನೆಮಾ ‘ದಸ್ಕತ್’; ಗ್ರಾಮೀಣ ಭಾಗದ ಸಂಸ್ಕೃತಿ,ಸಂಘರ್ಷ,ಸಂಭ್ರಮದ ಕಥೆ ಹೇಳುವ ದಸ್ಕತ್ ಚಿತ್ರಕ್ಕೆ ಸಿನಿಪ್ರಿಯರಿಂದ ಉತ್ತಮ ಸ್ಪಂದನೆ

Suddi Udaya

ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಬಾಲಕ, ಬಾಲಕಿಯರ ಕಬಡ್ಡಿ ಪಂದ್ಯಾಟ: ಇಂದಿರಾ ಗಾಂಧಿ ವಸತಿ ಶಾಲೆ, ಹೊಸಂಗಡಿ ಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ

Suddi Udaya

ಕಲ್ಮಂಜ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಕೆ.ಪಿ.ಸಿ.ಸಿ ಉಪಾಧ್ಯಕ್ಷರಾಗಿ ಮಾಜಿ ಸಚಿವ ಗಂಗಾಧರ ಗೌಡ ಆಯ್ಕೆ

Suddi Udaya

ಮಡಂತ್ಯಾರು: ಮಾಲಾಡಿ ಬಿ ಎಂ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಮಹಾಸಭೆ: ನೂತನ ಸಮಿತಿ ರಚನೆ

Suddi Udaya

ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿಡೊಂಜಿ ದಿನ ಹಾಗೂ ಕೆಸರೊಡೊಂಜಿ ದಿನದ ಸಂಭ್ರಮ

Suddi Udaya
error: Content is protected !!